ಪ್ರ: ನಮಾಝ್‌ನೊಳಗಿನ ತಕ್‌ಬೀರ್‌ಗಳಾದ ‘ಇಂತಿಕಾಲಾತ್’ನ ತಕ್‌ಬೀರ್ ವೇಳೆ ಇಮಾಮರ ಜತೆ ಜತೆಗೇ ಹೋದರೆ ನಮಾಝ್ ಸಿಂಧುವಾಗುತ್ತದೆಯೇ? ಅಥವಾ ಇಮಾಮರ ನಂತರವೇ ನಿರ್ವಹಿಸಬೇಕೆಂದಿದೆಯೇ?
ಉ: ನಮಾಝ್‌ನಲ್ಲಿ ಇಮಾಮ್ ಒಂದು ಕ್ರಿಯೆಯಿಂದ ಇನ್ನೊಂದು ಕ್ರಿಯೆಗೆ ಹೋಗುವಾಗ ಮಅಮೂಮ್ ಅದರ ಜತೆಗೆ ಸಾಗುವುದು ಕರಾಹತ್ ಇದೆ. ಆದರೆ ಇದರಿಂದ ನಮಾಝ್ ಅಸಿಂಧುವಾಗದು. ಇಮಾಮ್ ಒಂದು ಕ್ರಿಯೆಯಿಂದ ಇನ್ನೊಂದು ಕ್ರಿಯೆಗೆ ತಲುಪಿದ ಬಳಿಕ ಮಅಮೂಮ್ ಆ ಕ್ರಿಯೆಗೆ ಹೋಗಲು ಆರಂಭಿಸುವುದಾಗಿದೆ ಸುನ್ನತ್ತಾದ ಪೂರ್ಣ ಕ್ರಮ. ಉದಾ: ಇಮಾಮ್ ಇಅತಿದಾಲ್‌ನಿಂದ ಸುಜೂದ್‌ಗೆ ತಲುಪಿದ ಬಳಿಕ ಮಅïಮೂಮ್ ಇಅತಿದಾಲ್‌ನಿಂದ ಸುಜೂದ್‌ಗೆ ಹೋಗಲು ಆರಂಭಿಸುವುದು. ಇಮಾಮ್ ಇನ್ನೊಂದು ಕ್ರಿಯೆಗೆ ಹೋಗಲು ಆರಂಭಿಸಿದ ಬೆನ್ನಿಗೆ ಮಅಮೂಮ್ ಆರಂಭಿಸಿದರೂ ಸುನ್ನತ್ ಲಭ್ಯ. ಆದರೆ ಜತೆಯಾಗಿದ್ದರೆ ಅದು ಕರಾಹತ್ ಆಗುತ್ತದೆ. ಇಮಾಮ್ ಆಮೀನ್ ಹೇಳುವಾಗ ಮಾತ್ರ ಮಅಮೂಮ್ ಜತೆ ಸೇರುವುದು ಸುನ್ನತ್ತಿದೆ.
ನಮಾಝ್‌ನ ಆರಂಭದಲ್ಲಿ ತಕ್‌ಬೀರತುಲ್ ಇಹ್ರಾಮ್ ಹೇಳುವಾಗ ಇಮಾಮನ ಜತೆಸೇರುವುದು ಸಲ್ಲದು. ಇಮಾಮರ ತಕ್‌ಬೀರತುಲ್ ಇಹ್ರಾಮ್ ಮತ್ತು ಮಅಮೂಮರದ್ದು ಒಟ್ಟಿಗೆ ಆದರೆ ಮಅಮೂಮನ ನಮಾಝ್ ಸಿಂಧುವಾಗದು. ಮಅಮೂಮನ ತಕ್‌ಬೀರತುಲ್ ಇಹ್ರಾಮ್ ಇಮಾಮನ ತಕ್‌ಬೀರ್ ಗಿಂತ ಸಂಪೂರ್ಣ ಬಳಿಕವಾಗಿರುವುದು ಜಮಾಅತ್ ಆಗಿ ನಮಾಝ್ ಮಾಡುವುದರ ನಿಬಂಧನೆಯಾಗಿದೆ.




















