ಕಣ್ಣಿನ ಒಳಭಾಗಕ್ಕೆ ನೀರು ತಲುಪುವುದು ಕಡ್ಡಾಯವೇ?
ಪ್ರಶ್ನೆ: ಕಣ್ಣಿಗೆ ಕಾಡಿಗೆ/ಸುರುಮ ಹಾಕಿ ವುಳೂ ನಿರ್ವಹಿಸಿದರೆ ವುಳೂ ಸಿಂಧುವಾಗುವುದೆ? ವುಳೂ ಮಾಡುವಾಗ ಕಣ್ಣಿನ ಒಳಭಾಗಕ್ಕೆ ನೀರು ತಲುಪುವುದು ಕಡ್ಡಾಯವೇ? ನೀರು ಸ್ಪರ್ಶವಾದಾಗ ಕಾಡಿಗೆ/ಸುರುಮ ಹರಡಿ ಕಣ್ಣಿನ ಕೆಳಭಾಗ ಕಪ್ಪಾಗುತ್ತದೆ. ಇದು ಆ ಭಾಗಕ್ಕೆ ನೀರು ಸ್ಪರ್ಶವಾಗುವುದನ್ನು ತಡೆಯಲಾರದೆ?
ಉತ್ತರ: ಸುರುಮ ಹಾಕುವುದು ವುಳೂವಿನ ಸಿಂಧುತ್ವಕ್ಕೆ ಯಾವುದೇ ತಡೆಯನ್ನುಂಟು ಮಾಡುವುದಿಲ್ಲ. ಸುರುಮ ಕಣ್ಣಿನ ಹೊರ ಭಾಗಕ್ಕೆ ತಾಕಿದರೂ ನೀರಿನ ಸ್ಪರ್ಶವನ್ನು ತಡೆಯುವುದಿಲ್ಲ. ಕಣ್ಣಿನ ಒಳಭಾಗವನ್ನು ವುಳೂವಿನ ವೇಳೆ ತೊಳೆಯುವುದು ಕಡ್ಡಾಯವಿಲ್ಲ. ಬದಲು ಅದು ಕರಾಹತ್ ಆಗಿದೆ. ಕಣ್ಣಿನ ಒಳಭಾಗಕ್ಕೆ ನಜಸ್ ಆಗಿದ್ದಲ್ಲಿ ಮಾತ್ರ ನಮಾಝ್ ಸಿಂಧುವಾಗಲು ಒಳಭಾಗ ತೊಳೆಯಬೇಕು. ಇನ್ನು ಕಾಡಿಗೆಯ ವಿಷಯ. ಇದು ಸುರುಮದಂತೆ ಅಲ್ಲ. ಕಾಡಿಗೆಯನ್ನು ಕಣ್ಣಿನ ಅಡಿಭಾಗಕ್ಕೆ ಹಾಕಲಾಗುತ್ತಿದ್ದು, ಇದು ದಪ್ಪವಾಗಿದ್ದರೆ ನೀರಿನ ಸ್ಪರ್ಶವನ್ನು ತಡೆಯುತ್ತದೆ. ಕಣ್ಣಿನ ರೆಪ್ಪೆಯ ಬುಡಗಳಲ್ಲಿ ಕಾಡಿಗೆ ಅಂಟಿಕೊಂಡಿದ್ದರೆ ವುಳೂ ಸಿಂಧುವಾಗದು. ಕಾಡಿಗೆ ಅಥವಾ ಸುರುಮಾ ಹಾಕಿದ ಕಾರಣದಿಂದ ಕಣ್ಣಿನ ಅಡಿಭಾಗವು ಕೇವಲ ತೆಳುವಾದ ಕಪ್ಪು ಬಣ್ಣವನ್ನು ಹೊಂದಿದ್ದರೆ ವುಳೂವಿಗೆ ತೊಂದರೆಯಿಲ್ಲ. ಆದರೆ ಕಾಡಿಗೆಯ ಅಂಶವೇ ಇದ್ದಲ್ಲಿ ತೊಂದರೆಯಾದೀತು.




















