ಕಾಡಿನ ರಾಜ ಸಿಂಹ
ಕಾಡಿನ ರಾಜನೆಂದೇ ಖ್ಯಾತಿ ಪಡೆದಿರುವ ಒಂದು ಕ್ರೂರ ಜೀವಿಯಾಗಿದೆ ಸಿಂಹ. ಕಾಡು ಪ್ರಾಣಿಗಳಲ್ಲಿ ಕ್ರೂರತೆ, ದೈರ್ಯ, ಎದೆಗಾರಿಕೆ, ನಿರ್ಭಯತೆ ಮುಂತಾದ ಗುಣಗಳಿರುವ ಈ ಪ್ರಾಣಿಯೊಂದಿಗೆ ಸರಿ ಸಮಾನವಾದ ಜೀವಿ ಬೇರೊಂದಿಲ್ಲ. ಕಾಡಿನ ಎಲ್ಲಾ ಜೀವರಾಶಿ ಸಾಮ್ರಾಜ್ಯದ ಅಧಿಪತಿಯಾಗಿರುವ ಸಿಂಹಕ್ಕೆ ಕಾಡಿನಲ್ಲಿ ಇತರ ಕಾಡು ಪ್ರಾಣಿಗಳೊಂದಿಗೆ ಯಾವ ಒಡನಾಟವೋ ಸಹವಾಸವೋ ಇಲ್ಲ. ಮಾತ್ರವಲ್ಲ ಇತರರ ಕಷ್ಟ ಸುಖದ ಬಗ್ಗೆ ಗಮನ ಕೊಡುವಂತೆಯೂ ಇಲ್ಲ. ಕಾಡು ನನ್ನದು. ಇದು ನನ್ನ ಸಾಮ್ರಾಜ್ಯ. ಇಲ್ಲಿ ಯಾರನ್ನೂ ಯಾವಾಗ ಬೇಕಾದರೂ ಕೊಂದು ತಿನ್ನ ಬಹುದು. ನನಗೆ ಸಮಾನ ಯಾರೂ ಇಲ್ಲ ಎಂಬ ಘೋಷಣೆ ಮಾತ್ರ.
ಸಿಂಹಕ್ಕೆ ದೈರ್ಯ ಇರುವಂತೆಯೇ ಅಂಜುಕುಳಿತನ ಮತ್ತು ಪುಕ್ಕಲುತನವೂ ಇದೆ. ಹುಂಜ ಕೋಳಿಯ ಮತ್ತು ಬೆಕ್ಕಿನ ಕೂಗು ಕೇಳಿದರೆ ಇದಕ್ಕೆ ಎಲ್ಲಿಲ್ಲದ ಭಯ. ಅಂತಯೇ ಬೆಂಕಿಯನ್ನು ಕಂಡರೆ ಹೈರಾಣಾಗಿ ಬಿಡುತ್ತದೆ.
ಯಾವಾಗಲೂ ಕೋಪೋದ್ರೇಕ ಮತ್ತು ರೋಷದಲ್ಲಿರುವ ಸಿಂಹ ಮಹಿಳೆಯರನ್ನು ಆಕ್ರಮಿಸುವುದು ಬಹಳ ಕಡಿಮೆ. ಮಹಿಳೆಯರನ್ನು ಕಂಡರೆ ದೂರ ಸರಿಯುತ್ತದೆ. ಋತುಸ್ರಾವ ಇರುವ ಮಹಿಳೆಯರ ಗುಮಾನಿಗೇ ಬರೋದಿಲ್ಲ.
ಜೊಲ್ಲು ರಸ ಬಹಳ ಕಡಿಮೆ ಪ್ರಮಾಣ ಇರುವ ಈ ಪ್ರಾಣಿಗೆ ಬಾಯಿ ವಾಸನೆ ತುಂಬಾ ಹೆಚ್ಚು. ಮಾತ್ರವಲ್ಲ ಆ ಕಾರಣದಿಂದ ಮಾಂಸ ತುಂಡುಗಳನ್ನು ಜಗಿಯದೆ ಹಾಗೆಯೇ ನುಂಗುತ್ತದೆ.
ಹಸಿವಾದರೆ ದೊಡ್ಡ ಶಬ್ದದಲ್ಲಿ ಗರ್ಜನೆ ಮಾಡುತ್ತದೆ. ಅದರೂ ಯಾವ ಕಾರಣಕ್ಕೂ ಎಷ್ಟು ಹಸಿದರೂ ಸತ್ತ ಶವವನ್ನು ತಿನ್ನದು. ಕಾಡಿನ ಇತರ ಪ್ರಾಣಿಗಳಿಗೆ ಹೋಲಿಸಿದರೆ ಹಸಿವಾದರೆ ಮತ್ತು ಬಾಯಾರಿಕೆಯಾದರೆ ಸಿಂಹಕ್ಕೆ ತಡೆಯುವ ಶಕ್ತಿ ಹೆಚ್ಚು. ತಿನ್ನಲಿಕ್ಕೆ ಏನೂ ಸಿಗದಿದ್ದರೆ ಒಂದೆರಡು ದಿನ ಏನೂ ತಿನ್ನದೆ ಹಾಗೆಯೇ ಇರುತ್ತದೆ.
ಇದರ ಮತ್ತೊಂದು ವಿಶೇಷತೆ ಎಂದರೆ ಯಾವತ್ತೂ ಇತರ ಪ್ರಾಣಿಗಳು ತಿಂದು ಬಾಕಿ ಬಿಟ್ಟದ್ದನ್ನು ತಿನ್ನದು. ಮತ್ತೊಬ್ಬರ ಎಂಜಲನ್ನು ಎಷ್ಟು ಹಸಿವಾದರೂ ಮುಟ್ಟಿ ನೋಡದು. ನಾಯಿ ಬಾಯಿ ಹಾಕಿ ನೀರು ಕುಡಿದ ಪಾತ್ರೆಯಿಂದ ಎಂದೂ ನೀರು ಕುಡಿಯದು. ತನ್ನ ಕೈಯಿಂದಲೇ ಕೊಂದು ತಿನ್ನೋದೆಂದರೆ ಇದಕ್ಕೆ ಬಹಳ ಹೆಮ್ಮೆ.
ಒಂದು ಪ್ರಾಣಿಯನ್ನು ಅಥವಾ ಮನುಷ್ಯನನ್ನು ಬೇಟೆಯಾಡಿ ಹಿಡಿದರೆ ಹಿಡಿಯಲ್ಪಟ್ಟ ಜೀವಿಯನ್ನು ಕೊಲ್ಲೋದಿಲ್ಲ. ಜೀವಂತ ಶರೀರದಿಂದ ಹಸಿ ತಾಜಾ ಮಾಂಸವನ್ನು ತನ್ನ ಹರಿತವಾದ ಕೋರೆಹಲ್ಲಿನಿಂದ ಎಳೆದು ತಿನ್ನುತ್ತದೆ. ಹೊಟ್ಟೆ ತುಂಬುವಷ್ಟು ತಿನ್ನುತ್ತದೆ. ಬಾಕಿಯಾದದ್ದನ್ನು ಅಲ್ಲೇ ಬಿಟ್ಟು ಬಿಡುತ್ತದೆ.
ತಿಂದು ಹೊಟ್ಟೆ ತುಂಬಿದರೆ ದೊಡ್ಡ ಗರ್ಜನೆಯೊಂದಿಗೆ ಒಂದೆರಡು ಜಿಗಿತ ಜಿಗಿಯುತ್ತದೆ. ನಂತರ ಮನುಷ್ಯನಂತೆ ಹೊಟ್ಟೆ ಮೇಲೆ ಮಾಡಿ ಅಂಗಾತ ಮಲಗುವ ಸ್ವಭಾವ ಇಲ್ಲ. ತಿಂದದ್ದು ಕರಗುವ ತನಕ ಶಾರೀರಿಕ ವ್ಯಯಾಮದಲ್ಲಿ ತೊಡಗುತ್ತದೆ. ನಂತರ ಕನಿಷ್ಟ ಒಂದು ಗಂಟೆಯಷ್ಟು ಸಮಯ ನಡೆಯುತ್ತದೆ ವಾಕಿಂಗ್.
ಗರ್ಭಧಾರಣೆಯಾಗಿ ಬರೇ ನಾಲ್ಕು ತಿಂಗಳಲ್ಲೇ ಮರಿ ಹಾಕುತ್ತದೆ. ಸಾಧಾರಣ ಒಂದೆರಡು ಮರಿಗೆ, ಕೆಲವೊಮ್ಮೆ ಮೂರು ಮರಿಗೆ ಜನ್ಮ ನೀಡುತ್ತದೆ. ಹುಟ್ಟುವ ಮರಿಗೆ ಯಾವುದೇ ಅಲುಗಾಟ ಅಥವಾ ಚಲನೆ ಇರೋದಿಲ್ಲ. ಪಂಚೇಂದ್ರಿಯಗಳಿಲ್ಲದ ಒಂದು ಮಾಂಸ ಪಿಂಡದಂತಿರುತ್ತದೆ. ನಂತರ ತಾಯಿ ಸಿಂಹ ಅಥವಾ ಅದಕ್ಕೆ ಜನ್ಮ ನೀಡಿದ ಗಂಡು ಸಿಂಹ ಈ ಮಾಂಸ ಪಿಂಡದ ಮೇಲೆ ಊದುತ್ತದೆ. ಒಂದೆರಡು ದಿನ ಊದಿದಾಗ ಸ್ವಲ್ಪ ಕಂಪನ ಶುರುವಾಗುತ್ತದೆ. ಹಾಗೆಯೇ ನಾಲ್ಕೈದು ದಿನಗಳಾಗುವಾಗ ಕ್ರಮೇಣ ಸಿಂಹದ ರೂಪ ಬರುತ್ತದೆ. ಕಣ್ಣು ತೆರೆಯಲ್ಪಡುವಾಗ ಹುಟ್ಟಿ ಏಳು ದಿನಗಳಾಗುತ್ತದೆ. ನಂತರ ಆರು ತಿಂಗಳುಗಳ ತನಕ ತಾಯಿಯ ಸಂಪೂರ್ಣ ತಾಲೀಮು ಮತ್ತು ತರಬೇತಿಯಲ್ಲಿರುತ್ತದೆ. ಈ ಆರು ತಿಂಗಳಲ್ಲಿ ಇತರ ಪ್ರಾಣಿಗಳನ್ನು ಬೇಟೆಯಾಡುವ ಐಡಿಯ ಮತ್ತು ತಂತ್ರಗಳನ್ನು ಕಲಿಸಿ ಕೊಡಲಾಗುತ್ತದೆ. ಆಮೇಲೆ ಅದರ ಹಾದಿಗೆ ಬಿಟ್ಟು ಬಿಡುತ್ತದೆ. ನಂತರ ತನ್ನ ಹೊಟ್ಟೆಪಾಡಿಗಾಗಿ ಬೇಕಾದದ್ದನ್ನು ತಾನೇ ಮಾಡಿ ಕೊಳ್ಳಬೇಕಾಗುತ್ತದೆ.
ರಾತ್ರಿಯ ಕತ್ತಲಲ್ಲಿ ಕಣ್ಣು ಮಿನುಗುವ (ಪ್ರಕಾಶಿಸುವ) ನಾಲ್ಕು ಜೀವಿಗಳಲ್ಲಿ ಒಂದಾಗಿದೆ ಸಿಂಹ. ಬೆಕ್ಕು, ಚಿರತೆ ಮತ್ತು ಸರ್ಪದ ಕಣ್ಣೂ ರಾತ್ರಿ ಪ್ರಕಾಶಿಸುತ್ತದೆ.
ಸಿಂಹ ಅಗಾಗ್ಗೆ ಜ್ವರದಿಂದ ಬಳಲುತ್ತಿರುತ್ತದೆ. ಅದಕ್ಕೆ ಒಂದು ಕಾರಣವೂ ಇದೆ. ಪ್ರವಾದಿ ನೂಹ್ ನಬಿಯವರು ತನ್ನ ಹಡಗಿನಲ್ಲಿ ಸತ್ಯ ವಿಶ್ವಾಸಿಗಳಲ್ಲದೆ ಎಲ್ಲಾ ಜೀವರಾಶಿಗಳಿಂದಲೂ ಒಂದೊಂದು ಜೋಡಿಯನ್ನು ಹತ್ತಿಸಿದ್ದರು. ಆ ಪೈಕಿ ಸಿಂಹವೂ ಇತ್ತು. ಹಡಗು ನೆರೆಪೀಡಿತ ಭೂಮಿಯಲ್ಲಿ ಚಲಿಸುತ್ತಿರುವಾಗ ಸಿಂಹ ಆಗಾಗ್ಗೆ ತನ್ನ ಘೋರವಾದ ಶಬ್ದದಲ್ಲಿ ಗರ್ಜನೆ ಮಾಡುತ್ತಿತ್ತು. ಸಿಂಹ ಹಡಗಿನಲ್ಲಿರೋದರಿಂದ ಇತರ ಜೀವಿಗಳಿಗೆ ಮನಶಾಂತಿ ಮತ್ತು ನೆಮ್ಮದಿ ಎಂಬುದು ಇದ್ದೇ ಇರಲಿಲ್ಲ. ಎಲ್ಲರೂ ಭಯ ಭೀತಿಯಿಂದ ನಡುಗುತ್ತಿದ್ದರು. ಈ ಭಯಾನಕ ಜೀವನ ಮತ್ತು ಬದುಕಿನಿಂದ ಬೇಸತ್ತ ಇವರು ಕೊನೆಗೆ ನೂಹ್ ನಬಿಯವರಲ್ಲಿ ತಮಗಿರುವ ತೊಂದರೆ ಮತ್ತು ಸಂಕಟದ ಬಗ್ಗೆ ದೂರು ಕೊಟ್ಟ ರು. ಆಗ ನೂಹ್ ನಬಿಯವರು ಅಲ್ಲಾಹುವಿನಲ್ಲಿ ಇದಕ್ಕೊಂದು ಪರಿಹಾರ ಬೇಕೆಂದು ಬೇಡಿದಾಗ ಸಿಂಹ ರಾಜನಿಗೆ ವಿಪರೀತ ಜ್ವರ ಶುರುವಾಯಿತು. ಜಗತ್ತಿನ ಪ್ರಪ್ರಥಮ ಜ್ವರ. ಅಂದು ಆರಂಭವಾದ ಜ್ವರ ಇಂದಿಗೂ ಸಿಂಹಕ್ಕೆ ಆಗಾಗ್ಗೆ ಬರುತ್ತದೆ. ಎಂತಹಾ ಅಹಂಕಾರಿಯನ್ನೂ ಯಾವ ಚುರುಕಿರುವವನನ್ನೂ ಒಮ್ಮೆಲೇ ಸ್ಥಗಿತ ಮಾಡುವ ರೋಗ. ಈ ಜ್ವರ ಸಿಂಹಕ್ಕೆ ಆಗಾಗ್ಗೆ ಬರುತ್ತಿಲ್ಲವಾಗಿದ್ದರೆ ಕಾಡಿನಿಂದ ನಾಡಿಗಿಳಿದು ಇಂದು ಎಲ್ಲರನ್ನೂ ಕಸಾಯಿ ಮಾಡುತ್ತಿತ್ತು.
ಮೊಸಳೆಗೆ ಸಿಂಹ ಗರ್ಜನೆ ಕೇಳಿದರೆ ಆಗಲೇ ಪ್ರಜ್ಞೆ ತಪ್ಪಿ ಬೀಳು ತ್ತದೆ. ಕೆಲವೊಮ್ಮೆ ಸಾಯುತ್ತದೆ.
ಆಹಾರ ಪದಾರ್ಥಗಳು ಅಥವಾ ಇನ್ನಿತರ ವಸ್ತುಗಳನ್ನು ಜೋಪಾನವಾಗಿಡುವ ಪೆಟ್ಟಿಗೆಯಲ್ಲಿ ಒಂದು ತುಂಡು ಸಿಂಹದ ಚರ್ಮವನ್ನು ಒಟ್ಟಿಗೆ ಇಡುವುದಾದರೆ ಗೆದ್ದಲು, ನಂದಿಹುಳು, ಗುಗುರು ಮುಂತಾದ ಕೀಟಗಳ ತೊಂದರೆ ಇರುವುದಿಲ್ಲ.
ಇದರ ಕೊಬ್ಬುನ್ನು ಮನುಷ್ಯ ಶರೀರಕ್ಕೆ ಲೇಪ ಮಾಡಿದರೆ ಅವನನ್ನು ಇತರ ಯಾವ ವನ್ಯಜೀವಿಯೂ ಅಕ್ರಮಿಸ ಲಾರದು.
ನಿರಂತರ ಹಲ್ಲುನೋವು ಅಥವಾ ದಂತಶೂಲೆ ಇರು ವವರು ಸಿಂಹದ ಹಲ್ಲನ್ನು ತನ್ನ ಜೊತೆಯಲ್ಲಿ ಇಟ್ಟು ಕೊಳ್ಳುವುದಾದರೆ ದಂತ ಸಂಭಂದವಾದ ಎಲ್ಲಾ ರೋಗಗಳು ಮಾಯವಾಗುತ್ತದೆ.
ಯಾವುದೇ ಔಷಧಿಯಲ್ಲೂ ವಾಸಿಯಾಗದ ಮೂಲವ್ಯಾಧಿ ಮತ್ತು ಸಂಧಿವಾತ ರೋಗ ಇರು ವವರು ಇದರ ಚರ್ಮದ ಮೇಲೆ ಕುಳಿತು ಕೊಳ್ಳುವುದನ್ನು ನಿತ್ಯ ಅಭ್ಯಾಸ ಮಾಡಿಕೊಂಡರೆ ಈ ಎರಡು ಖಾಯಿಲೆಗಳು ಸಂಪೂರ್ಣ ವಾಸಿಯಾಗುವುದಂತೆ.
ಮುಖದಲ್ಲಿ ಬರುವ ಬೊಕ್ಕೆ, ಮೊಡವೆ ಅಂತೆಯೇ ಮುಖದಲ್ಲಿ ಅಲ್ಲಲ್ಲಿ ಕಪ್ಪು ಚುಕ್ಕೆ ಕಾಣಿಸಿ ಕೊಳ್ಳುವುದು, ಬೆಳ್ಳಗಿನ ಮುಖ ಚರ್ಮ ಕಪ್ಪಾಗುವುದು ಇತ್ಯಾದಿ ಎಲ್ಲಾ ಚರ್ಮ ರೋಗಗಳಿಗೆ ಕೆಲವು ದಿನಗಳು ಇದರ ಕೊಬ್ಬನ್ನು ಮುಖಕ್ಕೆ ಲೇಪಿಸಿದರೆ ಜೀವನ ಪರ್ಯಂತ ಆ ರೋಗ ಮತ್ತೆ ಪುನರಾವರ್ತನೆ ಆಗದು.
ನೂರು ವರುಷಕ್ಕಿಂತಲೂ ಅಧಿಕ ಬದುಕುವ ಈ ಜೀವಿಯ ಸ್ನಾಯು, ಎಲುಬು, ಮಾಂಸ ಪಿಂಡಗಳು ಬಹಳ ಬಲಿಷ್ಠ ಮತ್ತು ಗಟ್ಟಿ ಆಗಿರುವುದರಿಂದ ಸಾಧಾರಣ ಇದು 300 ರಿಂದ 400 ಕಿಲೋ ಗ್ರಾಂ ತನಕ ತೂಗುತ್ತದೆ.
ಇದು ಭಕ್ಷ್ಯಯೋಗ್ಯವಲ್ಲ. ಇಸ್ಲಾಮ್ ಇದರ ಮಾಂಸ ಸೇವನೆ ನಿಷಿದ್ಧಗೊಳಿಸಿದೆ.
ಸಂಗ್ರಹ: ಇಮಾಮ್ ದುಮೈ ರಿಯವರ (ಹಯಾತುಲ್ ಹಯ ವಾನ್) ಮತ್ತು ಇಮಾಮ್ ಶಿಹಾಬುದ್ದೀನ್ ಅಲ್ ಅಬ್ ಶೀಹೀಯವರ (ಅಲ್ ಮುಸ್ತತ್ ರಫ್ ಪೀ ಕುಲ್ಲಿ ಫನ್ನಿನ್ ಮಸ್ತಲ್ ರಫ್) ಎಂಬ ಗ್ರಂಥದಿಂದ.