ಪ್ರಶ್ನೆ : ಪತಿಯೊಬ್ಬನು ತನ್ನ ಪತ್ನಿಯ ವಿವಿಧ ತರದ ಉಪದ್ರವಗಳನ್ನು ತಡೆಯ ಲಾಗದೆ “ನೀನು ಈ ತನಕ ಮಾಡಿದ ಉಪದ್ರವವನ್ನು ನಾನು ಕ್ಷಮಿಸಿದ್ದೇನೆ. ಆದರೆ ಇನ್ನು ಮುಂದೆ ಇಂತಹಾ ಉಪದ್ರವ ಮರುಕಳಿಸಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ’ ಎಂದು ಕೋಪದಿಂದ ಹೇಳಿದರೆ ತಲಾಖ್ ಸಂಭವಿಸುವುದೇ? ಮುಂದೆ ಅವಳೇನಾದರೂ ಪತಿಗೆ ಉಪದ್ರವ ನೀಡಿದರೆ ತ್ವಲಾಖ್ ಆಗುವುದೇ? ವಿವರಿಸುವಿರಾ?
ಉತ್ತರ : “ಇನ್ನು ಮುಂದೆ ನೀನು ಉಪದ್ರವ ನೀಡಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ” ಎಂಬ ಮಾತು ಪತ್ನಿಗೆ ಎಚ್ಚರಿಕೆ ನೀಡುವ ಮಾತಾಗಿದೆ. “ಇನ್ನು ನೀನು ಹೀಗೆ ಮಾಡಿದರೆ ತ್ವಲಾಖ್ ನೀಡುವೆನು” ಎಂದು ಎಚ್ಚರಿಸುವುದರಿಂದ ತ್ವಲಾಖ್ ಆಗುವುದಿಲ್ಲ. ನಂತರ ಪತಿಯ ಎಚ್ಚರಿಕೆಯನ್ನು ಪರಿಗಣಿಸದೆ ಪತ್ನಿಯು ಪತಿಗೆ ಉಪದ್ರವ ನೀಡಿದ್ದು ಆಗ ಪತಿ ತ್ವಲಾಖ್ ಹೇಳಿದರೆ ಮಾತ್ರ ತ್ವಲಾಖ್ ಆಗುತ್ತದೆ.