ನೀರು ಕುಡಿಯದ ಉಡ

ನೀರು ಕುಡಿಯದ ಉಡ

ಒಡು ಬಹಳ ಅಪರೂಪವಾಗಿ ಕಾಣಸಿಗುವ ಒಂದು ಪ್ರಾಣಿ. ಸಾಧಾರಣ ಹಲ್ಲಿ ಹರಣೆಯ ವಿಭಾಗಕ್ಕೆ ಸೇರಿದ ಈ ಜೀವಿ ಸುಮಾರು 700 ರಿಂದ 800 ವರ್ಷ ತನಕ ಬದುಕ್ಕುತ್ತದೆಯಂತೆ. ನೀರೆಂದರೆ ಈ ಒಡುವಿಗೆ ಬಹಳ ಅಸಹ್ಯ. ಮಾತ್ರವಲ್ಲ ತನ್ನ ಇಷ್ಟೊಂದು ಉದ್ದದ ಬದುಕಿನಲ್ಲಿ ಒಮ್ಮೆಯೂ ಒಂದು ಹನಿ ನೀರು ಕೂಡ ಕುಡಿಯೋದಿಲ್ಲಂತೆ. ಆದ್ದರಿಂದಲೇ ಇದು ಎರಡು ಮೂರು ತಿಂಗಳಿಗೊಮ್ಮೆ ಒಂದು ಡ್ರೋಪ್ ಮೂತ್ರ ಮಾತ್ರ ವಿಸರ್ಜನೆ ಮಾಡುತ್ತದೆ.
ಮತ್ತೊಂದು ಸಂಗತಿ ಎಂದರೆ ಇದರ ಹಲ್ಲು ಸಾಯುವ ತನಕ ಉದುರದೆ ಹಾಗೆಯೇ ಇರುತ್ತದೆ.. ಮೊಟ್ಟೆ ಇಡುವ ಈ ಜೀವಿ ತನ್ನ ಮೊಟ್ಟೆಗಳನ್ನು ಚೇಳು ಹಾವುಗಳ ಹುಂಚ ಇರುವ ಜಾಗದಲ್ಲಿ ಒಂದು ಸಣ್ಣ ಹೊಂಡ ಮಾಡಿ ಅದರಲ್ಲಿ ಇಡುತ್ತದೆಯಂತೆ. (ಅಪಾಯದ ಪರಿಸರವಾದ್ದರಿಂದ ಅಲ್ಲಿ ಮಾನವನ ಉಪದ್ರವ ಇಲ್ಲದಿರಲು) ನಲವತ್ತು ದಿನಗಳ ನಂತರ ಮೊಟ್ಟೆಯೊಡೆದು ಬರುವ ಮರಿಗಳನ್ನು ಸೂರ್ಯ ಪ್ರಕಾಶ ಬೀಳುವ ಜಾಗಕ್ಕೆ ಕೊಂಡು ಹೋಗಿ ಮರಿಗಳ ಚರ್ಮ ಸ್ನಾಯು ಎಲ್ಲಾ ಗಟ್ಟಿ ಆಗುವ ತನಕ  ಟ್ರೀಟ್ ಮಾಡುತ್ತದೆ. ನಂತರ ಮರಿಗಳನ್ನು ಅದರ ದಾರಿಗೆ ಬಿಡುತ್ತದೆ.
ದೀರ್ಘಾಯುಷ್ಯ ಇರುವ ಈ ಒಡುವಿಗೆ ನೆನಪು ಶಕ್ತಿ ಎಂಬುದು ಇಲ್ಲವೇ ಇಲ್ಲ. ಎಲ್ಲವೂ ಮರೆತು ಹೋಗೋದಂತೆ. ಬೆಳಗ್ಗೆ ಆಹಾರ ಹುಡುಕಲು ಹೋಗಿ ಸಂಜೆ ಮರಳಿ ಬರುವಾಗ ತನ್ನ ವಾಸಗೂಡು ಕೂಡ ಎಲ್ಲೆಂದು ಗೊತ್ತಾಗದ ಅವಸ್ಥೆ ಕೂಡ ಆಗೋದುಂಟಂತೆ. ಅದಕ್ಕೋಸ್ಕರ ಇದು ಸಾದಾರಣ ದೊಡ್ಡ ಮರ, ಬೆಟ್ಟ ಇರುವ ಸುಲಭವಾಗಿ ಲ್ಯಾಂಡ್ ಮಾರ್ಕ್ ಗೊತ್ತಾಗುವ ಜಾಗಗಳನ್ನು ಗೂಡು ಮಾಡಲು ಆಯ್ಕೆ ಮಾಡುತ್ತದೆ.
ಮತ್ತೊಂದು ವಿಷೇಶವೆಂದರೆ ಇದನ್ನು ಝಬಹ್ ಮಾಡಿ (ಚೂರಿಹಾಕಿ) ರುಂಡ ಮುಂಡ ಬೇರೆ ಬೇರೆ ಮಾಡಿದರೂ ಕೆಲ ವೊಮ್ಮೆ ರೂಹ್(ಜೀವ) ಹೋಗ ಲು ಒಂದು ರಾತ್ರಿ ಅಥವಾ ಹಗಲು ಬೇಕಾಗುತ್ತದೆ. ಮಾತ್ರ ವಲ್ಲ ತುಂಡು ಮಾಡಿ ಒಲೆಯಲ್ಲಿ ಪಾಕ ಮಾಡಲು ಇಟ್ಟ ಮಾಂಸದ ತುಂಡು ಕೂಡಾ ಕೆಲವೊಮ್ಮೆ ಕಂಪಿಸೋದುಂಟಂತೆ…!
ಝಬಹ್ ಮಾಡಿದ ಕೂಡಲೇ ಇದರ ಹೃದಯವನ್ನು ಹಾಗೇಯೇ ಕಿತ್ತು ತೆಗೆದು ಹಸಿಯಾಗಿ ತಿಂದರೆ ಅಸ್ತಮ ರೋಗ ಇರುವವನಿಗೆ ರೋಗ ಗುಣಮುಖ ಆಗೋದಲ್ಲದೆ ಜೀವನಪರ್ಯಂತ ಅವನ ಶರೀರದಲ್ಲಿ ಅಸ್ತಮ ರೋಗ ನಿರೋಧಕ ಶಕ್ತಿ (ಆ್ಯಂಟಿ ಬಯೋಟಿಕ್) ಇರುತ್ತದೆಯಂತೆ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರು ಈ ಜೀವಿಯನ್ನು ಒಮ್ಮೆಯೂ ತಿನ್ನಿಲ್ಲವಾದರೂ  ಇಸ್ಲಾಮಿನಲ್ಲಿ ಇದನ್ನು ತಿನ್ನೋದು ಹಲಾಲ್ ಆಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸ್ಸಲ್ಲಮರ ಸನ್ನಿಧಿಗೆ ಒಮ್ಮೆ ಒಬ್ಬರು ಒಂದು ಒಡುವನ್ನು ಹಿಡಿದು ತಂದಾಗ ನಾನಿದನ್ನು ತಿನ್ನೋದಿಲ್ಲ. ನನಗೆ ಅದನ್ನು ಕಾಣುವಾಗ ಅಸಹ್ಯ ಆಗುತ್ತದೆ. ನನಗೆ ಬೇಡ. ಆದರೂ ನಿಮಗಿದನ್ನು ಹಲಾಲ್ ಮಾಡಿರುತ್ತೇನೆ ಎಂಬ ಪ್ರವಾದಿ ವಚನವೇ ಇದಕ್ಕೆ ಆಧಾರ.

– ಸಂಗ್ರಹ (ಇಮಾಂ ಕಮಾಲುದ್ದೀನ್ ದುಮಯ್ರಿ ಅವರ  ಹಯಾತುಲ್ ಹಯವಾನ್ ಎಂಬ ಗ್ರಂಥದಿಂದ)

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors