ಪ್ರ : ಪತ್ನಿಯನ್ನು ತ್ವಲಾಖ್ ಹೇಳಿದ ವೃಕ್ತಿಯೊಬ್ಬ ಒಂದು ವಾರದೊಳಗಾಗಿ ಆ ಪತ್ನಿಯ ಸಹೋದರನ ಮಗಳನ್ನು ವಿವಾಹವಾಗುತ್ತಾನೆ. ಈ ನಿಕಾಹ್ ಸಿಂಧುವಾಗುವುದೇ?
ಉ : ಮೂರು ತ್ವಲಾಕ್ ಹೇಳಿ ಪತ್ನಿಯಿಂದ ಸಂಪೂರ್ಣ ಬೇರ್ಪಟ್ಟಿದ್ದರೆ ವಿವಾಹ ಸಿಂಧುವಾಗುತ್ತದೆ. ಆದರೆ ಒಂದು ಅಥವಾ ಎರಡು ತ್ವಲಾಖ್ ಹೇಳಿದ್ದಾದಲ್ಲಿ ಅವಳ ಇದ್ದಃ ಮುಗಿಯುವ ಮುನ್ನ ಅವಳ ಸಹೋದರನ ಮಗಳೊಂದಿಗೆ ನಿಕಾಹ್ ಸಿಂಧುವಾಗುವುದಿಲ್ಲ. ನಿಕಾಹ್ ಸಿಂಧುವಾಗಲು ಪುರುಷನ ಅಧೀನದಲ್ಲಿ ತಾನು ವಿವಾಹವಾಗಲು ಬಯಸುವ ಮಹಿಳೆಗೆ ವಿವಾಹ ನಿಷಿದ್ದ ಸಂಬಂಧ (ಮಹ್‌ರಮ್) ಇರುವ ಯಾರೂ ಇರಬಾರದು ಎಂಬ ನಿಬಂಧನೆಯಿದೆ. ಒಬ್ಬಳು ಹೆಣ್ಣಿಗೆ ಅವಳ ತಂದೆಯ ಸಹೋದರಿ ವಿವಾಹ ನಿಷಿದ್ದ ಸಂಬಂಧ (ಇಬ್ಬರ ಪೈಕಿ ಒಬ್ಬರನ್ನು ಪುರುಷರಾಗಿ ಸಂಕಲ್ಪಿಸಿದರೆ ಅವರ ನಡುವೆ ನಿಕಾಹ್ ನಿಷಿದ್ದವೆನಿಸುವುದು) ಇರುವ ವಳಾಗಿರುವಳು. ಆದ್ದರಿಂದ ಮೇಲಿನ ಸಂಬಂಧದಲ್ಲಿ ಒಂದೋ ಎರಡೋ ತ್ವಲಾಖ್‌ನ ಸಂದರ್ಭದಲ್ಲಿ ಇದ್ದ ಮುಗಿಯುವ ಮುನ್ನ ವಿವಾಹ ಸಿಂಧುವಲ್ಲ.




















