ಕೊಳಕು ವಸ್ತ್ರ, ಕೆದರಿದ ಕೂದಲು

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ನಮ್ಮ ಬಳಿಗೆ ಬಂದಾಗ ಕೂದಲು ಕೆದರಿರುವ ವ್ಯಕ್ತಿಯೊಬ್ಬರನ್ನು ನೋಡಿದರು. ‘ತನ್ನ ಕೂದಲನ್ನು ಒಪ್ಪವಾಗಿಡುವ ಏನೂ ಇವನಿಗೆ ದೊರಕಲಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಬೇರೊಬ್ಬ ವ್ಯಕ್ತಿ ಕೊಳಕು ವಸ್ತ್ರವನ್ನು ಧರಿಸಿರುವುದನ್ನು ಕಂಡರು. ‘ಇವನಿಗೆ ತನ್ನ ವಸ್ತ್ರ ಒಗೆಯಲು ಏನೂ ಸಿಕ್ಕಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಉಲ್ಲೇಖ-ಅಬೂದಾವೂದ್ ವರದಿ: ಜಾಬಿರ್ ಬಿನ್ ಅಬ್ದುಲ್ಲಾಹ್ ರಳಿಯಲ್ಲಾಹು ಅನ್ಹು ಮನುಷ್ಯನ ಮುಕ್ತ ಮನಸ್ಸು ಬಯಸುವ ಪ್ರಾಕೃತಿಕ ಬೇಡಿಕೆಗಳಿಗೆ ಪೂರಕವಾದ ಧರ್ಮವಾಗಿದೆ ಇಸ್ಲಾಮ್. ಶುಚಿತ್ವ ಈ ಪೈಕಿ ಅತಿಮುಖ್ಯವಾದುದು. […]
ತ್ವಲಾಖ್‌ನ ಎಚ್ಚರಿಕೆ

ಪ್ರಶ್ನೆ : ಪತಿಯೊಬ್ಬನು ತನ್ನ ಪತ್ನಿಯ ವಿವಿಧ ತರದ ಉಪದ್ರವಗಳನ್ನು ತಡೆಯ ಲಾಗದೆ “ನೀನು ಈ ತನಕ ಮಾಡಿದ ಉಪದ್ರವವನ್ನು ನಾನು ಕ್ಷಮಿಸಿದ್ದೇನೆ. ಆದರೆ ಇನ್ನು ಮುಂದೆ ಇಂತಹಾ ಉಪದ್ರವ ಮರುಕಳಿಸಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ’ ಎಂದು ಕೋಪದಿಂದ ಹೇಳಿದರೆ ತಲಾಖ್ ಸಂಭವಿಸುವುದೇ? ಮುಂದೆ ಅವಳೇನಾದರೂ ಪತಿಗೆ ಉಪದ್ರವ ನೀಡಿದರೆ ತ್ವಲಾಖ್ ಆಗುವುದೇ? ವಿವರಿಸುವಿರಾ? ಉತ್ತರ : “ಇನ್ನು ಮುಂದೆ ನೀನು ಉಪದ್ರವ ನೀಡಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ” ಎಂಬ ಮಾತು ಪತ್ನಿಗೆ ಎಚ್ಚರಿಕೆ ನೀಡುವ ಮಾತಾಗಿದೆ. […]