ಜಗತ್ತಿನಲ್ಲೇ ಬಲಾಢ್ಯ ಶ್ರೀಮಂತರಾಗೋಣ

ಸಂಪಾದಕೀಯ ದಿನದಿಂದ ದಿನಕ್ಕೆ ನಮಗೆ ಹೊಸ ಬಗೆಯ ಸಂಕಷ್ಟ, ತೊಂದರೆಗಳು ಎದುರಾಗುತ್ತವೆ. ಬಿಕ್ಕಟ್ಟೊಂದರಿಂದ ಬಿಡುಗಡೆ ಪಡೆಯುತ್ತಿದ್ದಂತೆ ಮತ್ತೊಂದು ಸಮಸ್ಯೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಸಾಲದ ಹಿಡಿತದಿಂದ ಬಿಡಿಸಿಕೊಂಡಾಗ ಆಸ್ಪತ್ರೆಗೆ ಹಣ ಒಟ್ಟುಗೂಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಸಂಬಳ ಕೈ ಸೇರಿದಾಗ ಅದಕ್ಕಿಂತಲೂ ದೊಡ್ಡ ಮೊತ್ತದ ಖರ್ಚು ನಮಗಾಗಿ ಕಾಯುತ್ತಿರುತ್ತದೆ. ಈ ದಿನದ ಕಷ್ಟ ಒಂದು ನಮೂನೆಯಾದ್ದಾದರೆ ನಾಳಿನದ್ದು ಇನ್ನೊಂದು ನಮೂನೆ ಯದ್ದು. ಮುಂದಿನ ವಾರ ಈ ಎಲ್ಲಾ ರಗಳೆಗಳಿಂದ ಮುಕ್ತಿ ಪಡೆಯೋಣ ಎಂದುಕೊಂಡರೆ ಅಲ್ಲಿನ ಬವಣೆಗಳೇ ಇನ್ನೊಂದು […]
ವುಳೂಇನ ಐದು ನಿಬಂಧನೆ

ವುಳೂಇನ ಐದು ನಿಬಂಧನೆಗಳಲ್ಲಿ ಒಂದು ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು. ನೀರು ಮೂರು ವಿಧ 1) ತ್ವಹೂರ್ 2) ತ್ವಾಹಿರ್ 3) ಮುತನಜ್ಜಿಸ್ ಇವುಗಳಲ್ಲಿ ಒಂದನೆಯ ತ್ವಹೂರ್ ನಿಂದ ಮಾತ್ರವೇ ವುಳೂ ಸಿಂಧುವಾಗ ಬಹುದು. ಬರೀ ತ್ವಾಹಿರ್‌ನಿಂದ ಹಾಗೂ ಮುತನಜ್ಜಿಸ್ ನಿಂದ ವುಳೂ ಸಿಂಧು ಆಗುವುದಿಲ್ಲ. (1) ತ್ವಹೂರ್ ಯಾವುದೇ ಪ್ರತ್ಯೇಕ ವಿಶೇಷಣಗಳಿಲ್ಲದ ನೀರನ್ನು ತ್ವಹೂರ್ ಎನ್ನಲಾಗುತ್ತದೆ. ಪ್ರತ್ಯೇಕ ವಿಶೇಷಣಗಳು ಇದ್ದಲ್ಲಿ ಅದನ್ನು ತ್ವಹೂರ್ ಎನ್ನಲಾಗುವುದಿಲ್ಲ. ಉದಾಹರ […]
ನಮಾಝ್‌ನ ಐದು ನಿಬಂಧನೆ

ನಮಾಝ್‌ನ ಐದು ನಿಬಂಧನೆಗಳಲ್ಲಿ ಒಂದು ಕಿರಿಯ ಹಾಗೂ ಹಿರಿಯ ಅಶುದ್ಧಿಗಳಿಂದ ಮುಕ್ತವಾಗಿರುವುದು. ಕಿರಿಯ ಅಶುದ್ದಿ ವುಳೂ ಭಂಗವಾಗುವ ಕಾರಣಗಳು ಉಂಟಾಗಿ ವುಳೂ ಇಲ್ಲದ ಅವಸ್ಥೆಗೆ ಕಿರಿಯ ಅಶುದ್ದಿ ಎನ್ನುತ್ತಾರೆ. ಹಿರಿಯ ಅಶುದ್ದಿ ಸ್ನಾನ ಕಡ್ಡಾಯವಾಗಿರುವ ಅವಸ್ಥೆಗೆ ಹಿರಿಯ ಅಶುದ್ಧಿ ಎನ್ನುತ್ತಾರೆ. ವುಳೂಇಗೆ ಐದು ನಿಬಂಧನೆಗಳು 1. ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿ ಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು. 2. ವುಳೂಇನ ಅಂಗಾಂಗಗಳಲ್ಲಿ ನೀರು ಹರಿಯುವುದು. 3. ನೀರಿನ ಸ್ಪರ್ಶವನ್ನು ತಡೆಯುವ ಯಾವುದೇ ವಸ್ತುಗಳು […]
ಮಕ್ಕಳಿಗೆ ತರಬೇತಿ

ಮಕ್ಕಳಿಗೆ ತರಬೇತಿ ಅಬ್ದುಲ್ಲಾಹಿ ಬಿನ್ ಅಮ್ರ್ ರಳಿಯಲ್ಲಾಹು ಅನ್‌ಹು ರವರಿಂದ ವರದಿ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ನಿಮ್ಮ ಮಕ್ಕಳಿಗೆ ಏಳು ವರ್ಷ ಪ್ರಾಯವಾಗಿರುವಾಗ ನಮಾಝ್ ಮಾಡಲು ಆಜ್ಞಾಪಿಸಿರಿ. ಹತ್ತು ವರ್ಷ ಪ್ರಾಯದವರಾಗಿದ್ದು ನಮಾಝ್ ಉಪೇಕ್ಷಿಸಿದಲ್ಲಿ ಅವರನ್ನು ದಂಡಿಸಿರಿ. (ಅಬೂ ದಾವೂದು) ನಮಾಝ್‌ನ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ತರಬೇತಿ ನೀಡ ಬೇಕೆಂದು ಇಸ್ಲಾಂ ನಿರ್ದೇಶಿಸುತ್ತದೆ. ತಂದೆ ತಾಯಂದಿರು ನಮಾಝ್ ಮಾಡುವಾಗ ಮಕ್ಕಳಿಗೂ ಈ ಬಗ್ಗೆ ಪ್ರಾಥಮಿಕ ಅರಿವನ್ನು ನೀಡಿ ನಮಾಝ್ ಮಾಡುವ ಪ್ರಜ್ಞೆಯನ್ನು ಅವರಲ್ಲಿ ಮೂಡಿಸುವುದು […]
ಆರಾಧನೆ

ಆರಾಧನೆ ನಾವೆಲ್ಲರೂ ಅಲ್ಲಾಹುವಿನ ದಾಸ ರಾಗಿದ್ದೇವೆ. ಆತನ ಆಜ್ಞೆಯನ್ನು ಪಾಲಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಜ್ಞೆಗಳು ಹಲವು ರೀತಿ ಇದ್ದರೂ ಆ ಪೈಕಿ ಸರಳ ಮತ್ತು ಸುಲಭವಾದುದು ದಿನನಿತ್ಯ ನಿರ್ವಹಿಸಬೇಕಾದ ಐದು ವೇಳೆಯ ನಮಾಝ್ ಎಂಬ ಶ್ರೇಷ್ಠ ಆರಾಧನೆಯಾಗಿದೆ. ಅರಬೀ ಭಾಷೆಯಲ್ಲಿ ಇದನ್ನು ಸ್ವಲಾತ್ ಎನ್ನಲಾಗುತ್ತದೆ. ತಕ್ಬೀರತುಲ್ ಇಹ್ರಾಮ್‌ನಿಂದ ಆರಂಭಿಸಿ ಸಲಾಂ ಹೇಳುವವರೆಗಿನ ನಿರ್ದಿಷ್ಟ ಕರ್ಮಗಳು ಹಾಗೂ ನುಡಿಗಳಾಗಿವೆ ನಮಾಝ್. ದಿನನಿತ್ಯ ಐದು ವೇಳೆಯ ನಮಾಝ್ ಕಡ್ಡಾಯ ಎಂಬುದು ಈ ಸಮುದಾಯಕ್ಕೆ ಅಲ್ಲಾಹು ನೀಡಿದ ವಿಶೇಷ ಕೊಡುಗೆಯಾಗಿದೆ. […]
ಇಮಾಂ ಜಝೂಲಿ ರಳಿಯಲ್ಲಾಹು ಅನ್‌ಹು

ಇಮಾಂ ಜಝೂಲಿ ರಳಿಯಲ್ಲಾಹು ಅನ್‌ಹು – ಟಿ.ಎಂ. ಅನ್ಸಾರ್ ಸಅದಿ ತಂಬಿನಮಕ್ಕಿ ವಿಶ್ವ ಪ್ರಸಿದ್ಧ ದಲಾಯಿಲುಲ್ ಖೈರಾತ್ ಇದರ ರಚನೆಕಾರರಾಗಿದ್ದಾರೆ ಇಮಾಂ ಸುಲೈಮಾನ್ ಜಝೂಲಿ. ಇವರು ಮೊರಕ್ಕೋದ ಇತಿಹಾಸದಲ್ಲಿ ಅವಿಸ್ಮರಣೀಯರೆನಿಸಿಕೊಂಡ ಏಳು ಮಂದಿಯಲ್ಲಿ ಒಬ್ಬರು. ಜನಿಸಿದ್ದು ಹಿಜರಿ 807ರಲ್ಲಿ, ಮೊರಕ್ಕೋದ ಜಝೂಲಿ ಎಂಬಲ್ಲಿ. ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ಉನ್ನತ ಶಿಕ್ಷಣ ಪಡೆದದ್ದು ಫಾಝ್‌ನ ಮದ್ರಸತು ಸ್ಸಫಾರ್‌ನಲ್ಲಿ. ಬಾಲ್ಯದಲ್ಲೇ ಮಾಲಿಕಿ ಮಧ್ಹಬ್‌ನ ಅಧಿಕೃತ ಗ್ರಂಥಗಳಾದ ಫರ್‌ಇಬ್ನು ಹಾಜಿಬ್, ಹಾಗೂ ಮುದವ್ವನ ಕಂಠಪಾಟ ಮಾಡಿದ ಅವರು ಫಿಕ್ಹ್, ಅರಬಿ, […]
ಇಬ್ನು ನಫೀಸ್ (ರಕ್ತ ಪರಿಚಲನಾ ಶರೀರ ಶಾಸ್ತ್ರದ ಪಿತಾಮಹ)

ಇಬ್ನು ನಫೀಸ್ (ರಕ್ತ ಪರಿಚಲನಾ ಶರೀರ ಶಾಸ್ತ್ರದ ಪಿತಾಮಹ) – ಟಿ.ಎಂ. ಅನ್ಸಾರ್ ಸಅದಿ ತಂಬಿನಮಕ್ಕಿ ಮೊಟ್ಟ ಮೊದಲು ಹೃದಯ ಮತ್ತು ಶ್ವಾಸನಾಳದ ರಚನೆ ಹಾಗೂ ಅದರ ರಕ್ತಪರಿಚಲನೆಯನ್ನು ನಿಖರವಾಗಿ ಕಂಡು ಹಿಡಿದ ಮೊದಲ ವೈದ್ಯ ವಿಜ್ಞಾನಿಯಾಗಿದ್ದಾರೆ ಇಬ್ನು ನಫೀಝ್. ಇವರು ಪ್ರತಿಪಾದಿಸಿದ ರಕ್ತಪರಿಚಲನಾ ಸಿದ್ಧಾಂತವು ಶಾರೀರಿಕ ವೈದ್ಯಶಾಸ್ತ್ರದ ಪ್ರಗತಿಗೆ ನಾಂದಿ ಹಾಡಿತು. ಅದುವರೆಗಿನ ವೈದ್ಯಕೀಯ ವಿಜ್ಞಾನಿಗಳಿಗಿಂತ ಭಿನ್ನವಾಗಿ ಇಬ್ನು ನಫೀಝ್ ಸರ್ಕುಲೇಟರಿ ಫಿಸಿಯೋಲಜಿಯಲ್ಲಿ ಕೊರೋನರಿ ಸಿದ್ಧಾಂತ ಹಾಗೂ ಮೈಕ್ರೋಟ್ಯೂಬುಲರ್ ರಕ್ತಪರಿಚಲನಾ ತತ್ವವನ್ನು ಪರಿಚಯಿಸಿದರು. 1213ರಲ್ಲಿ […]
ಸಂಕಷ್ಟದ ಸಮಯದಲ್ಲಿ ಬೆಂಬಲ

ಜಾಬಿರುಬ್ನು ಅಬ್ದಿಲ್ಲಾ ಮತ್ತು ತ್ವಲ್‌ಹತುಬ್ನು ಸಹ್‌ಲಿಲ್ ಅನ್ಸಾರಿರಿಂದ ವರದಿ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. ಒಬ್ಬ ಮುಸ್ಲಿಮನ ಪಾವಿತ್ರತೆಗೆ ಧಕ್ಕೆಯಾಗುವ ಹಾಗೂ ಅವನ ಗೌರವಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ (ಮಧ್ಯಪ್ರವೇಶಿಸಲು ಸಾಧ್ಯವಿದ್ದೂ) ಕಡೆಗಣಿಸಿದರೆ ಆ ವ್ಯಕ್ತಿಗೆ ಅಲ್ಲಾಹನ ಸಹಾಯ ಅಗತ್ಯವಾದ ಸಂದರ್ಭದಲ್ಲಿ ಅಲ್ಲಾಹು ಅವನನ್ನೂ ಕಡೆಗಣಿಸುವನು. ಒಬ್ಬ ಮುಸ್ಲಿ ಮನ ಪಾವಿತ್ರತೆಗೆ ಧಕ್ಕೆ ಹಾಗೂ ಅವನ ಗೌರವಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ ಒಬ್ಬ ಆತನ ನೆರವಿಗೆ ಧಾವಿಸಿದರೆ ಅಲ್ಲಾಹನ ನೆರವು ಅಗತ್ಯವೆನಿಸಿದ ಸಂದರ್ಭದಲ್ಲಿ ಅಲ್ಲಾಹು ಅವನಿಗೆ […]
ಶಬ್ಧ: ವಿಧಿ ಮತ್ತು ನಿಯಂತ್ರಣ

ಅಸ್ವಸ್ಥತೆ, ರಗಳೆ ಎಂಬಿತ್ಯಾದಿ ಅರ್ಥಗಳನ್ನು ಹೊಂದಿರುವ ನೌಸೀಸ್ (nousees) ಎಂಬ ಲಾಟೀನ್ ಪದದಿಂದ ನೋಯ್ಸ್ ಎಂಬ ಪದ ಉಧ್ಭವಿಸಿದೆ. ನೋಯ್ಸ್ ಎಂದರೆ ಶಬ್ದ ಎಂದರ್ಥ. ವಿಚಾರ ವಿನಿಯಮಯಕ್ಕಿರುವ ಪ್ರಮುಖ ಸಾಧನವಾಗಿದೆ ಧ್ವನಿ. ಆದರೆ ಅದು ಸ್ಪಷ್ಟವಾಗಿರಬೇಕು, ಅಷ್ಟೇ ಮಿತವಾಗಿರಬೇಕು. ಶಬ್ದವನ್ನು decible ಎಂಬ ಯುನಿಟ್‌ನಿಂದ ಅಳೆಯಲಾಗುತ್ತದೆ. ಮೋಟಾರ್ ವಾಹನದ ಶಬ್ದ 100 ಡಿಬಿಯೆಂದೂ, ಸಿಡಿಲಿನ ಶಬ್ದವನ್ನು 120 ಡಿ.ಬಿಯೆಂದೂ, ಸಿಡಿಮದ್ದಿನ ಶಬ್ದವನ್ನು 150 ಡಿ.ಬಿಯೆಂದೂ ಅಂದಾಜಿಸಬಹುದು. ಏಕ ಕಾಲಕ್ಕೆ 120 ಡಿಬಿ ಶಬ್ದ ಹಾಗೂ ನಿರಂತರ ವಾಗಿ […]
ಪತಿಯ ಮೊದಲ ಪತ್ನಿ

ಪ್ರ: ಪತಿಯ ಮೊದಲ ಪತ್ನಿಯ ಮಗಳ ಪತಿಯು ಎರಡನೆ ಪತ್ನಿಗೆ ಮಹ್‌ರಮ್ (ವಿವಾಹ ನಿಷಿದ್ಧ) ಆಗುವನೆ? ಉ: ಪತಿಯ ಮೊದಲ ಪತ್ನಿಯ ಮಗಳ ಪತಿಯು ಎರಡನೇ ಪತ್ನಿಗೆ ವಿವಾಹ ನಿಷಿದ್ಧನಲ್ಲ. ಸ್ಪರ್ಶದಿಂದ ವುಳೂ ಭಂಗವಾಗುವ ಅನ್ಯ ಪುರುಷನೆನಿಸುವನು.