ಮಹರ್ ಹಿಂತಿರುಗಿಸಬೇಕೆ?

ಪ್ರ : ನಿಕಾಹ್ ನಡೆದು ವರ್ಷಗಳ ಬಳಿಕ ಪತ್ನಿಯ ಬೇಡಿಕೆಯಂತೆ ತಲಾಖ್ ನಡೆದರೆ ಅವಳಿಗೆ ನೀಡಲಾದ ಮಹರ್‌ನ್ನು ಅವಳು ಹಿಂತಿರುಗಿಸಬೇಕೆ? ಆಗ ಮಹ್‌ರಿನ ಹಕ್ಕು ಯಾರಿಗಿರುತ್ತದೆ? ಉ : ನಿಕಾಹಿನ ಬಳಿಕ ಪತಿ ಪತ್ನಿಯರ ನಡುವೆ ದೈಹಿಕ ಸಂಪರ್ಕ ನಡೆಯುವುದರೊಂದಿಗೆ ಪತ್ನಿಯು ಮಹ್‌ರಿಗೆ ಸಂಪೂರ್ಣ ಹಕ್ಕುದಾರಳಾಗುತ್ತಾಳೆ. ಬಳಿಕ ಯಾರ ಬೇಡಿಕೆಯಂತೆ ತಲಾಖ್ ನಡೆದರೂ ಮಹ್‌ರ್ ಅವಳಿಗೆ ಸೇರುತ್ತದೆ.
ಎರಡು ನಮಾಜ್

ಪ್ರ : ಎರಡು ನಮಾಜ್‌ಗಳನ್ನು ಜಮ್‌ಅ ಮಾಡಲು ಉದ್ದೇಶಿಸಿದ್ದು ಒಂದನೇ ನಮಾಜ್ ಮುಗಿದಾಗ ವುಳೂ ಭಂಗವಾದರೆ ವುಳೂ ನಿರ್ವಹಿಸಿ ಜಮ್‌ಅ ಮುಂದುವರಿಸ ಬಹುದೇ ಅಥವಾ ನಿರಂತರತೆ ನಷ್ಟವಾದ ಕಾರಣ ಎರಡನೇ ನಮಾಝನ್ನು ಅದರ ಸಮ ಯದಲ್ಲೇ ನಿರ್ವಹಿಸಬೇಕೇ? ಉ : ತಖ್‌ದೀಮಿನ ಜಮ್‌ಅ ಆಗಿ ನಮಾಜ್ ಮಾಡುವಾಗ ಎರಡು ನಮಾಝ್‌ಗಳ ನಡುವೆ ನಿರಂತರತೆಯು ನಿಬಂಧನೆಯಾಗಿದೆ. ಆದರೆ ಒಂದು ನಮಾಝ್ ಮುಗಿದು ವುಳೂ ಭಂಗವಾದ ಕಾರಣ ನಡುವೆ ವುಳೂ ಮಾಡುವುದರಿಂದ ನಿರಂತರತೆ ಮುರಿಯುವುದಿಲ್ಲ. ಎರಡನೇ ನಮಾಝನ್ನು ಸೇರಿಸಿ ಜಮ್‌ಅ […]
ವಸ್ತ್ರ ಸುಡಬಹುದೇ?

ಪ್ರ : ಉಪಯೋಗ ಶೂನ್ಯವಾದ ವಸ್ತ್ರವನ್ನು ಸುಡಬಹುದೇ? ಉ : ಸುಡಬಹುದು; ನಿಷಿದ್ಧವಲ್ಲ.
ಹುಬ್ಬು ರೋಮಗಳು

ಪ್ರ : ಮಹಿಳೆಯರು ಸೌಂದರ್ಯ ಕ್ಕಾಗಿ ತಮ್ಮ ಹುಬ್ಬು ರೋಮ ಗಳನ್ನು ಕೀಳುವುದರ ವಿಧಿ ಏನು? ಉ : ಮಹಿಳೆಯರು ತಮ್ಮ ಮುಖದ ಮೇಲೆ ಬೆಳೆಯುವ ಸಹಜ ಕೂದಲುಗಳನ್ನು ನಿವಾ ರಿಸುವುದು ನಿಷಿದ್ಧವಾಗಿದೆ. ಹದೀಸ್ ವಚನಗಳಲ್ಲಿ ಈ ಬಗ್ಗೆ ಸ್ಪಷ್ಟ ಪ್ರಸ್ತಾಪಗಳಿವೆ. ಕರ್ಮಶಾಸ್ತ್ರ ಗ್ರಂಥಗಳಲ್ಲಿ ನೀಡಲಾದ ವಿವರ ಣೆಯಂತೆ ವಿವಾಹವಾದ ಮಹಿ ಳೆಯರು ತಮ್ಮ ಪತಿಯಂದಿರಿಗೆ ಸೌಂದರ್ಯವನ್ನು ತೋರ್ಪ ಡಿಸಲು ಅವರ ಅನುಮತಿ ಮೇರೆಗೆ ಹುಬ್ಬು ರೋಮವನ್ನು ನಿವಾರಿ ಸುವುದು ಸಮ್ಮತಾರ್ಹವಾಗಿದೆ. ಹಾಗಿರುವಾಗ ವಿವಾಹಿತ ರಲ್ಲದವರು ಹಾಗೂ […]