ನಡೆದುಕೊಂಡು ನಿಯ್ಯತ್?

ಪ್ರ: ನಮಾಝಿನ ನಿಯ್ಯತ್ತನ್ನು ನಡೆದುಕೊಂಡು ಬರುವಾಗ ಮಾಡಬಹುದೆ? ನಿಂತುಕೊಂಡೇ ಮಾಡಬೇಕೆಂದಿದೆಯೆ? ಉ: ನಿಂತುಕೊಂಡೇ ಆಗಬೇಕು. ನಿಶ್ಚಲ ಸ್ಥಿತಿಯಲ್ಲೇ ನಮಾಜಿನ ನಿಯ್ಯತ್ ಮಾಡಬೇಕೆನ್ನುವುದು ನಿಯ್ಯತ್‌ನ ಶರ್ತಗಳಲ್ಲೊಂದಾಗಿದೆ. ನಮಾಜಿನ ಫರ್‌ಗಳಲ್ಲಿ ನಿಯ್ಯತ್’ ಮೊದಲನೆಯದ್ದಾಗಿದ್ದು ನಮಾಜಿಗಾಗಿ ’ಸಾಧ್ಯವಿರುವವರು ನಿಲ್ಲುವುದು’ ಮೂರನೇ ಫರ್ಳ್ ಆಗಿದೆ. ಆದರೂ ನಿಯ್ಯತನ್ನು ಮೊದಲು ಮಾಡಿ ನಂತರ ನಿಲ್ಲುವಂತಿಲ್ಲ.’ನಿಲ್ಲುವಿಕೆ’ಯನ್ನು ಫರ್ಳ್ ಆಗಿ ಗಣಿಸಿರುವುದು ಫರ್ಳ್ ನಮಾಜ್‌ಗೆ ಮಾತ್ರ. ಸುನ್ನತ್ ನಮಾಜ್‌ಗೆ ಇದು ಬಾಧಕವಲ್ಲ, ಸುನ್ನತ್ ನಮಾಜನ್ನು ಕುಳಿತೂ ನಿರ್ವಹಿಸಬಹುದಾದುದರಿಂದ ಇದಕ್ಕಾಗಿ ನಿಯ್ಯತ್ತನ್ನು ಕುಳಿತುಕೊಂಡು ಮಾಡಬಹುದು. ನಿಯ್ಯತ್ ಮತ್ತು ತಕ್ಬೀರತುಲ್ […]
ಮೂತ್ರ ಹನಿಸಿದರೆ?

ಪ್ರ : ಮೂತ್ರ ಶಂಕೆಯ ನಂತರ ಕೊನೆಯಲ್ಲಿ ಉಳಿದ ಒಂದೆರಡು ಹನಿಗಳು ಕುಳಿತಲ್ಲಿಂದ ನೇರ ನಿಂತು ಕೊಂಡ ನಂತರ ಹೊರ ಬಂದು ವಸ್ತ್ರಕ್ಕೆ ತಾಗುತ್ತದೆ. ಇದನ್ನು ಶುಚೀಕರಿಸದೆ ಇದೇ ವಸ್ತ್ರದಲ್ಲಿ ನಮಾಜು ಮಾಡುವುದರಿಂದ ತೊಂದರೆ ಇದೆಯೆ? ಉ : ಮೂತ್ರದ ಒಂದು ಹನಿಯೂ ನಜಸ್ ಆಗಿದೆ. ಅದು ನಮಾಜು ಮಾಡುವವನ ವಸ್ತ್ರ, ಶರೀರದಲ್ಲಿದ್ದರೆ ಅದರೊಂದಿಗೆ ನಮಾಜು ಸಿಂಧುವಾಗುವುದಿಲ್ಲ. ಆದ್ದರಿಂದ ಮೂತ್ರ ಶಂಕೆಯ ಕೊನೆಯಲ್ಲಿ ಉಳಿಯುವ ಮೂತ್ರದ ಹನಿಯು ಶರೀರಕ್ಕೆ ಯಾ ವಸ್ತ್ರಕ್ಕೆ ತಾಗದಂತೆ ಜಾಗ್ರತೆ ವಹಿಸಬೇಕು. ಅದಕ್ಕಾಗಿ […]
ಮಣಿಗಂಟಿನ ಕೆಳಗಿನ ವಸ್ತ್ರ

ಪ್ರಶ್ನೆ: ನಮಾಜಿನಲ್ಲಿ ಕಾಲಿನ ಮಣಿಗಂಟಿನ ಕೆಳಗೆ ವಸ್ತ್ರವನ್ನು ಇಳಿ ಬಿಡುವುದರ ವಿಧಿ ಏನು? ಹೀಗೆ ವಸ್ತ್ರವು ಕೆಳಗಿದ್ದರೆ ನಮಾಜ್ ಸಿಂಧುವೆ? ಉತ್ತರ: ನಮಾಜಿನಲ್ಲಿ ಕಾಲಿನ ಮಣಿಗಂಟಿಗಿಂತ ಕೆಳಗೆ ವಸ್ತ್ರವು ಇಳಿದಿದ್ದರೆ ನಮಾಜ್‌ನ ಸಿಂದುತ್ವಕ್ಕೆ ಅಡ್ಡಿ ಇಲ್ಲ. ಆದರೆ ನಮಾಜಿನಲ್ಲಾಗಲೀ ಇತರ ವೇಳೆಯಲ್ಲಾಗಲೀ ಕಾಲಿನ ಮಣಿಗಂಟಿಗಿಂತ ಪುರುಷರು ತಮ್ಮ ವಸ್ತ್ರವನ್ನು ಕೆಳಗೆ ಇಳಿ ಬಿಡುವುದು ಕರಾಹತ್ ಆಗಿದೆ. ಅಹಂಭಾವದಿಂದ ಹೀಗೆ ಧರಿಸುವುದಾದರೆ ಅದು ಹರಾಮ್ ಆಗಿದೆ. ತುಪ್ಪ 3/55.
ಮಕ್ಕಳು ನನ್ನ ಉಪವಾಸ ಹಿಡಿದರೆ ಸಾಕೆ?

ಪ್ರಶ್ನೆ: ರಮಳಾನಿನಲ್ಲಿ ಅನಾರೋಗ್ಯ ಕಾರಣದಿಂದ ಉಪವಾಸ ಹಿಡಿಯಲಾಗಲಿಲ್ಲ. ಈಗ ರೋಗವಾಸಿಯಾಗಿದೆ. ನನಗೀಗ ವೃದ್ಧಾಪ್ಯ. ಉಪವಾಸ ಹಿಡಿಯಲು ಹೆಚ್ಚಿನ ಆರೋಗ್ಯವೂ ಇಲ್ಲ. ಹಾಗಿರುವಾಗ ನಾನು ಉಪವಾಸ ಖಳಾ ಸಂದಾಯ ಮಾಡಬೇಕೆ? ಖಳಾ ಸಂದಾಯ ಮಾಡುವುದಿದ್ದರೂ (ಪ್ರಾಯಶ್ಚಿತ್ತ) ನೀಡಬೇಕೆ? ನನ್ನ ಪರವಾಗಿ ನನ್ನ ಮಕ್ಕಳು ಉಪವಾಸ ಹಿಡಿದರೆ ಆಗುತ್ತದೆಯೆ? ವಿವರಿಸುವಿರಾ? ಉತ್ತರ: ರೋಗ ಕಾರಣದಿಂದ ಖಳಾ ಆದ ಉಪವಾಸವನ್ನು ನಂತರ ಖಳಾ ಪೂರೈಸುವುದು ಕಡ್ಡಾಯ. ವೃದ್ಧಾಪ್ಯದ ಸಹಜ ನಿಶ್ಯಕ್ತಿ ಕಾರಣ ಉಪವಾಸವು ತೀರಾ ಅಸಾಧ್ಯವೆಂಬ ಹಂತಕ್ಕೆ ತಲುಪಿದ್ದಲ್ಲಿ ಖಳಾ ಪೂರೈಕೆ […]
ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ

ಪವಿತ್ರ ಪಂಡಿತ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ನಡೆನುಡಿಗಳಲ್ಲಿ, ವೇಷಭೂಷಣದಲ್ಲೆಲ್ಲ ಹಳೇಕಾಲದ ಸಾತ್ವಿಕ ಪರಂಪರೆಯ ಪ್ರತೀಕದಂತಿದ್ದ ಮಹಾವಿದ್ವಾಂಸ ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ ಅಲ್ಲಾಹನ ವಿಧಿಗೆ ಓಗೊಟ್ಟಿದ್ದಾರೆ. ದಕ್ಷಿಣ ಭಾರತದ ಅತ್ಯುನ್ನತ ಉಲಮಾ ಒಕ್ಕೂಟವಾದ ’ಸಮಸ್ತ’ದ ಅತ್ಯಂತ ಹಿರಿಯ ಸದಸ್ಯರಾಗಿರುವ, ಪ್ರಸ್ತುತ ಅದರ ಉಪಾಧ್ಯಕ್ಷರೂ, ಜಾಮಿಅ ಸಅದಿಯ್ಯಾ ವಿದ್ಯಾಸಂಸ್ಥೆಯ ಉಪಾಧ್ಯಕ್ಷರೂ ಕೆಲವು ಮೊಹಲ್ಲಾಗಳ ಖಾಝಿಗಳೂ ಆಗಿರುವ ತಾಜುಶ್ಶರೀಅಃ ತಮ್ಮ 87ನೇ ವರ್ಷದಲ್ಲಿ ಕೊನೆಯುಸಿರೆಳೆದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗಡಿನಾಡು ಕಾಸರಗೋಡಿನ […]