ತ್ವಲಾಖ್‌ನ ಎಚ್ಚರಿಕೆ

ಪ್ರಶ್ನೆ : ಪತಿಯೊಬ್ಬನು ತನ್ನ ಪತ್ನಿಯ ವಿವಿಧ ತರದ ಉಪದ್ರವಗಳನ್ನು ತಡೆಯ ಲಾಗದೆ “ನೀನು ಈ ತನಕ ಮಾಡಿದ ಉಪದ್ರವವನ್ನು ನಾನು ಕ್ಷಮಿಸಿದ್ದೇನೆ. ಆದರೆ ಇನ್ನು ಮುಂದೆ ಇಂತಹಾ ಉಪದ್ರವ ಮರುಕಳಿಸಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ’ ಎಂದು ಕೋಪದಿಂದ ಹೇಳಿದರೆ ತಲಾಖ್ ಸಂಭವಿಸುವುದೇ? ಮುಂದೆ ಅವಳೇನಾದರೂ ಪತಿಗೆ ಉಪದ್ರವ ನೀಡಿದರೆ ತ್ವಲಾಖ್ ಆಗುವುದೇ? ವಿವರಿಸುವಿರಾ? ಉತ್ತರ : “ಇನ್ನು ಮುಂದೆ ನೀನು ಉಪದ್ರವ ನೀಡಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ” ಎಂಬ ಮಾತು ಪತ್ನಿಗೆ ಎಚ್ಚರಿಕೆ ನೀಡುವ ಮಾತಾಗಿದೆ. […]
ಈ ಪಾಪಕ್ಕೆ ಪರಿಹಾರವಿದೆಯೇ?

ಪ್ರಶ್ನೆ : ನಾನೊಬ್ಬಳು ಮನೆ ಮಂದಿಯ ಪ್ರೀತಿಯ ಹುಡುಗಿ. ನನಗೆ ಇಲ್ಲವೆನ್ನಲು ಏನೂ ಇಲ್ಲ. ನನ್ನನ್ನು ನೋಡಿಕೊಳ್ಳುವ ಕುಟುಂಬ, ಶ್ರೀಮಂತಿಕೆ ಹೀಗೆ ಎಲ್ಲವೂ ಇದೆ.ಆದರೆ ನಾನೀಗ ತುಂಬ ಮನ ನೊಂದಿದ್ದೇನೆ.ನನ್ನಿಂದ ಆಗಬಾರದ ಕೆಲಸವೊಂದು ನಡೆದು ಹೋಗಿದೆ. ಒಬ್ಬನ ದೇಹದ ಬಯಕೆಗೆ ನಾನು ಬಲಿಯಾಗಿದ್ದೇನೆ. ನನಗೆ ಬೇಕಾದವರ ಪರಿಚಯ ಮೂಲಕ ನನಗೆ ಹತ್ತಿರವಾಗಿ ನನ್ನ ಮಿತ್ರರೆನಿಸಿಕೊಂಡವ ನನ್ನನ್ನೊಂದುದಿನ ವಂಚಿಸಿ ಬಿಟ್ಟಿದ್ದಾನೆ. ನನ್ನ ಶೀಲ ಕೆಡಿಸಿ ಬಿಟ್ಟಿದ್ದಾನೆ. ನನ್ನಿಂದ ಆತ ದೂರವಾಗುವನೋ ಎಂದು ಹೆದರಿ ಆತನ ಬಯಕೆಗೆ ಒಪ್ಪಿ ಬಿಟ್ಟಿದ್ದೆ. […]
‘ಯಾರೂ ಸರಿಯಿಲ್ಲ’

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು; ವ್ಯಕ್ತಿಯೊಬ್ಬನು “ಜನರೆಲ್ಲ ನಾಶವಾದರು” ಎನ್ನುತ್ತಿದ್ದರೆ ಅವರ ಪೈಕಿ ಅತಿನಾಶ ಹೊಂದಿದವನು ಆ ವ್ಯಕ್ತಿಯೇ ಆಗಿರುವನು. ವರದಿ : ಅಬೂಹುರೈರ ರಳಿಯಲ್ಲಾಹು ಅನ್ಹು ಉಲ್ಲೇಖ: ಮುಸ್ಲಿಮ್ ಇಮಾಮ್ ನವವೀ ರಳಿಯಲ್ಲಾಹು ಅನ್ಹು ಯವರು ತಮ್ಮ ರಿಯಾಳು ಸ್ವಾಲಿಹೀನ್‌ನಲ್ಲೂ ಅದ್ಸ್ಕಾರ್‌ನಲ್ಲೂ ಈ ಹದೀಸನ್ನು ಉಲ್ಲೇಖಿಸಿ ವಿವರಣೆಯನ್ನು ನೀಡಿದ್ದಾರೆ ಅನೇಕ ಮಂದಿಗೆ ಜನರನ್ನೆಲ್ಲ ದೂರುವ ಒಂದು ಚಪಲವಿದೆ. ನಾಲ್ಕು ಮಂದಿ ಸೇರಿ ಕುಳಿತು ಮಾತನಾಡುವಾಗ ಜನರ ಅವಸ್ಥೆಯೇನಿದು? ಎಲ್ಲ ಏನು ಮಾಡುತ್ತಾ ಇದ್ದಾರೆ? ಯಾರ ಬಳಿಯೂ ದೀನ್ […]