ಪ್ರಶ್ನೆ : ಋತುಸ್ರಾವದ ಏಳನೇ ದಿನ ಳುಹ್ರ್ ಬಾಂಗ್ ಆದ ಮೇಲೆ ಹೈಳ್ ಸ್ನಾನ ಮಾಡಿದರೆ ನಾವು ಅಂದಿನ ಳುಹ್ರ್ ನಮಾಝ್ ಮಾಡಬೇಕೆ? ಉತ್ತರ : ಳುಹ್ರ್ ನ ವೇಳೆಯಲ್ಲೇ ಹೈಳ್ ನಿಂದ  ಶುದ್ದಿಯಾಗಿರುವುದರಿಂದ ಳುಹ್ರ್ ನಮಾಝ್ ಮಾಡಬೇಕು. ಕಡ್ಡಾಯ.

ಮೇಲಂತಸ್ತು ಮಸೀದಿಯೇ?

ಪ್ರಶ್ನೆ : ಮಸೀದಿ ಕಟ್ಟಿ ಒಳಭಾಗವನ್ನು ಮಸ್ಜಿದ್ ಆಗಿ ವಖ್ಫ್ ಮಾಡಿದರೆ ‘ ವಖ್ಫ್ ‘ ಮೇಲಿನ ಅಂತಸ್ತಿಗೆ ಅನ್ವಯಿಸುತ್ತದೆಯೆ? ಉತ್ತರ : ಸ್ಥಳ, ಕಟ್ಟಡಗಳನ್ನು ವಖ್ಪ್ ಮಾಡುವಾಗ ಯಾವ ಕ್ರಮದಲ್ಲಿ ವಖ್ಪ್ ಮಾಡಲಾಗಿದೆಯೋ ಅದರಂತೆ ಸ್ಥಳ ಕಟ್ಟಡಗಳಿಗೆ ವಖ್ಪ್ ನ ವಿಧಿ ಅನ್ವಯವಾಗುತ್ತದೆ. ಒಂದು ಸ್ಥಳವನ್ನು ಮಸ್ಜಿದ್ ಆಗಿ ವಖ್ಫ್ ಮಾಡಿದರೆ ಮಸ್ಜಿದ್ ಎಂಬ ವಿಧಿಯು ಆ ಸ್ಥಳದ ಮೇಲಕ್ಕೆ ಬಾನೆತ್ತರಕ್ಕೂ ಕೆಳಗೆ ಭೂಮಿಯಾಳಕ್ಕೂ ಅನ್ವಯವಾಗುತ್ತದೆ. ಅದರಂತೆ ಆ ಸ್ಥಳದಲ್ಲಿ ನಂತರ ಕಟ್ಟಡ ಕಟ್ಟಿ ಮೇಲಂತಸ್ತಿನಲ್ಲಿ […]

ಖಳಾಗಾರನ ಸುನ್ನತ್ ನಮಾಝ್

ಪ್ರಶ್ನೆ : ಮೊದಲಿನ ಫರ್ಳ್ ನಮಾಝ್ ಖಳಾ ಇರುವವರು ಈಗ ಫರ್ಳ್ ನಮಾಝ್ ಮಾಡುವಾಗ ಅದರೊಟ್ಟಿಗೆ ಸುನ್ನತ್ ನಮಾಝ್ ಮಾಡಿದರೆ ಸಿಂಧುವಾಗುತ್ತದೆಯೆ? ಉತ್ತರ : ಸಿಂಧುವಾಗುತ್ತದೆ. ಫರ್ಳ್ ನಮಾಝ್ ಖಳಾ ಇರುವವರು ರವಾತಿಬ್ ನಮಾಝ್ ಮಾಡುವುದಕ್ಕೆ ವಿರೋಧವಿಲ್ಲ. ಅದು ಅವರಿಗೆ ಸುನ್ನತ್ತಿದೆ. ನಮಾಝ್ ಖಳಾ ಬಾಕಿ ಇಡುವವರು ರವಾತಿಬ್ ಅಲ್ಲದ ಇತರ ಸುನ್ನತ್ ನಮಾಝ್ ಗಳನ್ನು ಮಾಡುವ ಮುನ್ನ ಫರ್ಳ್ ನಮಾಝ್ ಗಳನ್ನು ಖಳಾ ನಿರ್ವಹಿಸಬೇಕು. ಇತರ ಸುನ್ನತ್ ನಮಾಝ್ ಗಳ ಸಹಿತ ಬದುಕಿನ ಅನಿವಾರ್ಯತೆ ಹೊರತಾದ […]

ಮಸ್ಜಿದ್ ನ ಆಸ್ತಿ ಮದ್ರಸಕ್ಕೆ?

ಪ್ರಶ್ನೆ : ಮಸ್ಜಿದ್ ನ ಬಳಕೆಗೆ ದಾನವಾಗಿ ಬಂದ ಅಥವಾ ಮಸ್ಜಿದ್ ನ ಅಗತ್ಯಗಳಿಗಾಗಿ ವಖ್ಫ್ ಮಾಡಲಾದ ಸೊತ್ತನ್ನು ಹಾಗೂ ಅದರ ಆದಾಯವನ್ನು ಮದ್ರಸದ ಅಗತ್ಯಗಳಿಗಾಗಿ ಬಳಸಬಹುದೆ? ವಿವರಿಸುವಿರಾ? ಉತ್ತರ : ಸಲ್ಲದು. ಮಸ್ಜಿದ್ ನ ಬಳಕೆಗಾಗಿ ಮಾತ್ರವೆಂದು ನಿಗದಿಗೊಳಿಸಲಾದ ದಾನ ಯಾ ವಖ್ಫ್ ಸೊತ್ತುಗಳನ್ನಾಗಲೀ, ಅದರ ಆದಾಯಗಳನ್ನಾಗಲೀ ಮಸ್ಜಿದ್ ನ ಅಗತ್ಯಗಳಿಗಲ್ಲದೆ ಬಳಸುವಂತಿಲ್ಲ. ಮದ್ರಸಾ ಯಾ ಇತರ ಯಾವುದೇ ಇತರ ವಿಷಯಗಳಿಗಾಗಿ ಮೇಲಿನ ವಸ್ತುಗಳ ವಿನಿಯೋಗ ಸಲ್ಲದು. ಮದ್ರಸಾದ ಬಳಕೆಗೆ ಮಾತ್ರವೆಂದು ದಾನ ಯಾ ವಖ್ಫ್ […]

‘ಇಮಾಮಿನೊಟ್ಟಿಗೆ’ ಕಡ್ಡಾಯ…

ಪ್ರಶ್ನೆ : ನಮಾಝಿನ ನಿಯ್ಯತ್ತಿನಲ್ಲಿ ‘ಮಅಲ್ ಇಮಾಮಿ’ ಎಂದು ಹೇಳುವುದು ಕಡ್ಡಾಯವೇ? ಉತ್ತರ : ಜಮಾಅತ್ತಾಗಿ ನಮಾಝ್ ನಿರ್ವಹಿಸುವಾಗ ‘ಇಮಾಮಿನೊಟ್ಟಿಗೆ’ ಎ೦ದು ನಮಾಝಿಗೆ ನಿಯ್ಯತ್ ಮಾಡುವ ವೇಳೆ ಸ೦ಕಲ್ಪಿಸುವುದು ಕಡ್ಡಾಯವಾಗಿದೆ. ಆದರೆ ಪ್ರಸ್ತುತ ಸ೦ಕಲ್ಪ ಮಾತ್ರ ಕಡ್ಡಾಯವಾಗಿದ್ದು ನಾಲಗೆಯ ಮೂಲಕ ಉಚ್ಚಾರ ಕಡ್ಡಾಯವಿಲ್ಲ. ಬದಲು ಸುನ್ನತ್ತಾಗಿದೆ. ಸುನ್ನತ್ ಲಭ್ಯವಾಗಲು ಅದು ಅರಬೀ ಭಾಷೆಯಲ್ಲಾಗಿರಬೇಕೆ೦ದಿಲ್ಲ. ಮನದಲ್ಲಿ ಪ್ರಸ್ತುತ ಸ೦ಕಲ್ಪವು ಮೂಡಿಬರುವ ಯಾವುದೇ ಭಾಷೆಯಲ್ಲಾಗಿರಬಹುದು.

ಉಗುರು ತೆಗೆಯುವ ಸರಿಯಾದ ಕ್ರಮ

ಪ್ರ : ಕೈಕಾಲುಗಳ ಉಗುರು ತೆಗೆಯುವ ಸರಿಯಾದ ಕ್ರಮವನ್ನು ವಿವರಿಸುವಿರಾ? ಉತ್ತರ : ಕೈಬೆರಳುಗಳಲ್ಲಿ ಬಲಕೈಯ ತೋರು ಬೆರಳಿನಿ೦ದ ಆರಂಭಿಸಿ ಕಿರುಬೆರಳ ತನಕ ತಲುಪಿ ನ೦ತರ ಹೆಬ್ಬೆರಳಿನ ಉಗುರು ತೆಗೆಯಬೇಕು. ಬಳಿಕ ಎಡಗೈಯ ಕಿರು ಬೆರಳಿನಿ೦ದ ಆರಂಭಿಸಿ ಹೆಬ್ಬೆರಳಿನಲ್ಲಿ ಕೊನೆಗೊಳಿಸಬೇಕು. ಕಾಲುಗಳಲ್ಲಿ ಬಲಕಾಲಿನ ಕಿರುಬೆರಳಿನಿ೦ದ ಆರ೦ಭಿಸಿ ಎಡಕಾಲಿನ ಕಿರುಬೆರಳಿನಲ್ಲಿ ಕೊನೆಗೊಳಿಸಬೇಕು.

ಳುಹ್ರ್ ಮತ್ತು ಅಸರ್ ಖಳಾ ಪೂರೈಸಬೇಕೆ?

ಪ್ರಶ್ನೆ : ಮಧ್ಯಾಹ್ನ 2 ಗ೦ಟೆಗೆ ಹೈಳ್ ರಕ್ತ ನಿಂತಿದೆ. ಸ೦ಶಯ ನಿವಾರಣೆಗೆ ಮಗ್ರಿಬ್ ವರೆಗೆ ಕಾದು ನ೦ತರ ದೃಢೀಕರಿಸಿ ಸ್ನಾನ ಮುಗಿಸಿದೆ. ಈ ಅವಸ್ಥೆಯಲ್ಲಿ ಳುಹ್ರ್ ಮತ್ತು ಅಸರ್ ಖಳಾ ಪೂರೈಸಬೇಕೆ? ಬರೀ ಮಗ್ರಿಬ್ ಮಾತ್ರ ನಿರ್ವಹಿಸಿದರೆ ಸಾಕೆ? ಉತ್ತರ : ಮಧ್ಯಾಹ್ನ 2 ಗಂಟೆಗೆ ಹೈಳ್ ನಿ೦ತಿದಲ್ಲಿ ಸ್ನಾನಕ್ಕಾಗಿ ಮಗ್ರಿಬ್ ತನಕ ಕಾಯುವುದು ಸಲ್ಲದು. ಳುಹ್ರ್ ನ  ವೇಳೆಯಲ್ಲಿಯೇ ಸ್ನಾನ ಮಾಡಿ ಳುಹ್ರ್ ಅದಾ ಆಗಿ ನಮಾಝ್ ನಿರ್ವಹಿಸಬೇಕು. ಳುಹ್ರ್ ಗೆ ಸ್ನಾನ ಮಾಡದೇ […]

ಊಟಕ್ಕೆ ಮುನ್ನ…

ಪ್ರಶ್ನೆ : ಕೆಲವರು ಒಟ್ಟಿಗೆ ಸೇರಿ ಊಟ ಮಾಡುತ್ತಿರುವಾಗ ಚಮಚದಲ್ಲಿ ಸಾರು ತೆಗೆದು ಕುಡಿದ ನ೦ತರ ಚಮಚವನ್ನು ಸಾರು ಇರುವ ಪಾತ್ರೆಗೆ ಪುನಃ ಹಾಕುವುದು, ಎಡ ಕೈಯಿ೦ದ ಚಮಚವನ್ನು ತೆಗೆಯುವುದು, ಚಮಚದಲ್ಲಿ ತೆಗೆದು ತಿನ್ನುವುದು, ಊಟಕ್ಕೆ ಮುನ್ನ ಕೈ ತೊಳೆದು ಕರ ವಸ್ತ್ರದಿಂದ ಕೈ ಸವರಿ ಊಟ ಮಾಡುವುದು ಇವುಗಳ ಕುರಿತು ಇಸ್ಲಾಮಿನ ವಿಧಿಯನ್ನು ತಿಳಿಸುವಿರಾ? ಉತ್ತರ : ಬಾಯಿಗೆ ಚಮಚವನ್ನು ಹಾಕಿ ಅದನ್ನು ತೊಳೆಯದೆ ಪಾತ್ರೆಗೆ ಹಾಕುವುದು, ಕೈ ತೊಳೆದು ಹೊಲಸು ತುಂಬಿರುವ ಕರ ವಸ್ತ್ರದಿ೦ದ […]

ನಮಾಜ್ ನಿ೦ದ ಕೈ ಬಿಡಬೇಕೆ?

ಪ್ರಶ್ನೆ : ತಹಜ್ಜುದ್ ನಮಾಜ್ ನಿರ್ವಹಿಸುವಾಗ ಸುಬುಹಿ ಬಾಂಗ್ ಕೇಳಿಸಿದರೆ ನಮಾಜ್ ನಿ೦ದ ಕೈ ಬಿಡಬೇಕೆ? ಅಥವಾ ಪೂರ್ತಿಗೊಳಿಸಬೇಕೆ? ಉತ್ತರ : ತಹಜ್ಜುದ್ ನಮಾಝ್ ಎಡೆಯಲ್ಲಿ ಸುಬುಹಿ ಬಾ೦ಗ್ ಕೇಳಿಸಿದರೆ ನಮಾಝನ್ನು ಅಲ್ಲಿಗೇ ನಿಲ್ಲಿಸಬೇಕಾಗಿಲ್ಲ. ಸುಬುಹ್  ಆರ೦ಭದೊಂದಿಗೆ ತಹಜ್ಜುದ್ ನ ಸಮಯ ಮುಗಿಯುವುದಾದರೂ ತಹಜ್ಜುದ್ ಎ೦ಬ ನಿಯ್ಯತ್ತಿನಿಂದ ಆರ೦ಭಗೊ೦ಡ ಪ್ರಸ್ತುತ ನಮಾಝನ್ನು ಮು೦ದುವರಿಸಬಹುದು. ಯಾವುದೇ ನಮಾಝನ್ನು ಆರ೦ಭಿಸಿದ ನಂತರ ಅದರ ಸಮಯವು ಮುಕ್ತಾಯಗೊಂಡಲ್ಲಿ ನಮಾಝ್ ನಿ೦ದ ಕೈ ಬಿಡಬೇಕಾಗಿಲ್ಲ. ಫರ್ಳ್ ನಮಾಝ್ ಆಗಿದ್ದರೆ ಹಾಗೆ ಕೈ ಬಿಡುವುದು […]

ಯಾವ ನಮಾಝ್ ಮೊದಲು?

ಪ್ರಶ್ನೆ : ಮಯ್ಯಿತ್ತನ್ನು ಮಸೀದಿಗೆ ತ೦ದಾಗ ಫರ್ ಳ್ ನಮಾಝಿನ ಜಮಾಅತಿನ ಸಮಯವಾಗಿದ್ದರೆ ಯಾವ ನಮಾಝನ್ನು ಮೊದಲು ನಿರ್ವಹಿಸಬೇಕು? ಉತ್ತರ : ಫರ್ ಳ್ ನಮಾಝಿನ ನ೦ತರ ಮಯ್ಯಿತ್ ನಮಾಝಿಗೆ ಇನ್ನೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ಮಯ್ಯಿತ್ ಗೆ ಏನೂ ಹಾನಿ ಉ೦ಟಾಗುವ ಭಯ ಇಲ್ಲದಿದ್ದರೆ ಫರ್ ಳ್ ನಮಾಝಿನ ಜಮಾಅತ್ ಮೊದಲು ನಿರ್ವಹಿಸಿ ನ೦ತರ ಮಯ್ಯಿತ್ ನಮಾಝ್ ಮಾಡುವುದು ಉತ್ತಮ. ಫರ್ ಳ್ ನಮಾಝಿನ ನ೦ತರ ಇನ್ನೂ ಹೆಚ್ಚು ಜನ ಸೇರುವ ನಿರೀಕ್ಷೆ […]

Search Here

Generic selectors
Exact matches only
Search in title
Search in content
Post Type Selectors