ಹುಟ್ಟಿದ ದಿನವೇ ಕೆಲಸಕ್ಕೆ ಹಾಜರಾಗುವ ಜೇಡ!

ಎಂಟು ಗಿಡ್ಡವಾದ ಕಾಲುಗಳು ಮತ್ತು ಆರು ದೊಡ್ಡ ಕಣ್ಣುಗಳಿರುವ ಒಂದು ವಿಚಿತ್ರ ಜೀವಿಯಾಗಿದೆ ಜೇಡ. ಈ ಜೇಡನ ಹೆಸರಲ್ಲಿ ಪವಿತ್ರ ಖುರ್‌ಆನಿನಲ್ಲಿ ಒಂದು ಅಧ್ಯಾಯವೇ ಅವತೀರ್ಣಗೊಂಡಿದೆ. ನೊಣ ಇದರ ಬಹಳ ಅಚ್ಚುಮೆಚ್ಚಿನ ಆಹಾರ. ಇದು ಹುಟ್ಟುವಾಗ ಒಂದು ಹುಳುವಿನ ರೂಪದಲ್ಲಿರುತ್ತದೆ. ನಂತರ ಎರಡು ಮೂರು ದಿನಗಳಲ್ಲಿ ಸಂಪೂರ್ಣ ಜೇಡನ ಆಕಾರವನ್ನು ಪಡೆಯುತ್ತದೆ. ನೊಣವನ್ನು ಕಂಡರೆ ಇದು ಯಾವುದೇ ಚಲನವಲನವಿಲ್ಲದೆ ಒಂದು ಜಡ ವಸ್ತುವಿನಂತೆ ನಟನೆ ಮಾಡುತ್ತದೆ. ನೊಣ ಹತ್ತಿರ ಸಮೀಪಿಸುತ್ತಿದ್ದಂತೆ ಅದರ ಮೇಲೆ ಹಾರಿ ನಿರಾಯಾಸ ಅದನ್ನು […]

ಹಡಗಿನ ಹಗ್ಗ ಕತ್ತರಿಸಿದ ಇಲಿ

ತನ್ನ ಭವಿಷ್ಯದ ದಿನಗಳಿಗೆ ಬೇಕಾಗಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿಡುವ ಕೆಲವು ಜೀವಿಗಳ ಪೈಕಿ ಒಂದಾಗಿದೆ ಇಲಿ. ಮನುಷ್ಯ, ಕಾಗೆ, ಇರುವೆ, ಜೇನ್ನೊಣ ಮುಂತಾದ ಕೆಲವು ಜೀವಿಗಳು ಕೂಡ ನಾಳಿನ ಬದುಕಿಗೆ ಬೇಕಾದ ಆಹಾರವನ್ನು ಶೇಖರಿಸಿಡುತ್ತವೆ. ಕೇವಲ ಮೂರು ವರ್ಷ ಮಾತ್ರ ಆಯುಷ್ಯ ಇರುವ ಈ ಜೀವಿ ತನ್ನ ಮೂರು ವರ್ಷದಲ್ಲಿ ಮೂವತ್ತು ವರ್ಷಗಳ ಅನ್ಯಾಯ ಮಾಡುತ್ತದೆ. ಉಪದ್ರವ, ಹಾನಿ, ಅನ್ಯಾಯ ಮಾಡುವ ವಿಷಯದಲ್ಲಿ ಇದಕ್ಕೆ ಸರಿಸಮಾನವಾದ ಜೀವಿ ಬೇರೊಂದಿಲ್ಲ. ಎಷ್ಟು ಬೆಲೆಬಾಳುವ ಅಮೂಲ್ಯ ವಸ್ತುವಾದರೂ ಯಾವುದೇ […]

ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’

ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’ 1991ರ ಮೇ 19/ದ್ಸುಲ್‌ ಖಅದ್‌ 5ರಂದು ನನ್ನ ತಂದೆಯವರು ವಫಾತ್‌ ಆದಾಗ ಉಂಟಾದ ಅನಾಥ ಪ್ರಜ್ಞೆನನ್ನನ್ನು ಮತ್ತೆ ಕಾಡಿದ್ದು ಮೊನ್ನೆಯೇ, 2021ರ ಮೇ 10ರಂದು. ತಂದೆಯ ವಿದಾಯದ ವೇಳೆ ನಾನಿನ್ನೂ 12ರ ಹುಡುಗನಾಗಿದ್ದರಿಂದ ಅಂದಿನ ಭಾವತೀವ್ರತೆಗಳೇನೂ ನೆನಪಿಗೆ ಬರುತ್ತಿಲ್ಲ. ಅಮ್ಮನ ಬೀಡಿಯ ಬಲದಿಂದ ಹೈಸ್ಕೂಲ್‌ ಓದುತ್ತಿದ್ದೆ. ನಾನು 9ನೇ ತರಗತಿಯಲ್ಲಿರುವಾಗ ಅಲ್‌ ಅನ್ಸಾರ್‌ ಶತ್ರಿಕೆ ಶುರುವಾಗಿತ್ತು. ಬಾಲ್ಯದಿಂದಲೇ ಓದುವ ಹುಚ್ಚು ಹೆಚ್ಚಿದ್ದ ನಾನು ಬೇಕಲ್‌ […]

ಕಾಡಿನ ರಾಜ ಸಿಂಹ

ಕಾಡಿನ ರಾಜ ಸಿಂಹ ಕಾಡಿನ ರಾಜನೆಂದೇ ಖ್ಯಾತಿ ಪಡೆದಿರುವ ಒಂದು ಕ್ರೂರ ಜೀವಿಯಾಗಿದೆ ಸಿಂಹ. ಕಾಡು ಪ್ರಾಣಿಗಳಲ್ಲಿ ಕ್ರೂರತೆ, ದೈರ್ಯ, ಎದೆಗಾರಿಕೆ, ನಿರ್ಭಯತೆ ಮುಂತಾದ ಗುಣಗಳಿರುವ ಈ ಪ್ರಾಣಿಯೊಂದಿಗೆ ಸರಿ ಸಮಾನವಾದ ಜೀವಿ ಬೇರೊಂದಿಲ್ಲ. ಕಾಡಿನ ಎಲ್ಲಾ ಜೀವರಾಶಿ ಸಾಮ್ರಾಜ್ಯದ ಅಧಿಪತಿಯಾಗಿರುವ ಸಿಂಹಕ್ಕೆ  ಕಾಡಿನಲ್ಲಿ ಇತರ ಕಾಡು ಪ್ರಾಣಿಗಳೊಂದಿಗೆ ಯಾವ ಒಡನಾಟವೋ ಸಹವಾಸವೋ ಇಲ್ಲ. ಮಾತ್ರವಲ್ಲ ಇತರರ ಕಷ್ಟ ಸುಖದ ಬಗ್ಗೆ ಗಮನ ಕೊಡುವಂತೆಯೂ ಇಲ್ಲ. ಕಾಡು ನನ್ನದು. ಇದು ನನ್ನ ಸಾಮ್ರಾಜ್ಯ. ಇಲ್ಲಿ ಯಾರನ್ನೂ ಯಾವಾಗ […]

ಕಾವಲುಗಾರ ನಾಯಿ!!

ಕಾವಲುಗಾರ ನಾಯಿ!! ನಾಯಿ ಪವಿತ್ರ ಇಸ್ಲಾಮಿನಲ್ಲಿ ಕಠಿಣ ನಜಸ್ (ನಜಸ್ ಮುಘಲ್ಲಳ್) ಆಗಿರುತ್ತದೆ. ನಾಯಿ ಸ್ಪರ್ಶಿಸಿದ್ದನ್ನು ಏಳು ಬಾರಿ ತೊಳೆಯಬೇಕೆಂದೂ ಆ ಪೈಕಿ ಒಂದು ಬಾರಿ ಮಣ್ಣಿನಿಂದ ಆಗಿರಬೇಕೆಂದೂ ಕಡ್ಡಾಯ ನಿಯಮವಿದೆ. ಆದಾಗ್ಯೂ ನಾಯಿಯನ್ನು ಇಸ್ಲಾಂ ಯಾವತ್ತೂ ಹೀನವಾಗಿ ಅಥವಾ ಕೀಳು ಮಟ್ಟದ ಪ್ರಾಣಿಯಾಗಿ ಕಂಡಿಲ್ಲ. ಇತರೆಲ್ಲ ಜೀವಿಗಳಂತೆಯೇ ಕಾಣುತ್ತದೆ. ಖುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟ ಗುಹಾವಾಸಿಗಳನ್ನು (ಅಸ್ಹಾಬುಲ್ ಕಹ್ಫ್) ಹಿಂಬಾಲಿಸಿ ಹೋದ ಕಂದು ಬಣ್ಣದ ಖಿತ್ಮೀರ್ ಎಂಬ ಹೆಸರಿನ ನಾಯಿಯು ಸ್ವರ್ಗ ಪ್ರವೇಶದ ವಿಶೇಷ ಅವಕಾಶ ದೊರೆತ ಐದು […]

ನೀರು ಕುಡಿಯದ ಉಡ

ನೀರು ಕುಡಿಯದ ಉಡ ಒಡು ಬಹಳ ಅಪರೂಪವಾಗಿ ಕಾಣಸಿಗುವ ಒಂದು ಪ್ರಾಣಿ. ಸಾಧಾರಣ ಹಲ್ಲಿ ಹರಣೆಯ ವಿಭಾಗಕ್ಕೆ ಸೇರಿದ ಈ ಜೀವಿ ಸುಮಾರು 700 ರಿಂದ 800 ವರ್ಷ ತನಕ ಬದುಕ್ಕುತ್ತದೆಯಂತೆ. ನೀರೆಂದರೆ ಈ ಒಡುವಿಗೆ ಬಹಳ ಅಸಹ್ಯ. ಮಾತ್ರವಲ್ಲ ತನ್ನ ಇಷ್ಟೊಂದು ಉದ್ದದ ಬದುಕಿನಲ್ಲಿ ಒಮ್ಮೆಯೂ ಒಂದು ಹನಿ ನೀರು ಕೂಡ ಕುಡಿಯೋದಿಲ್ಲಂತೆ. ಆದ್ದರಿಂದಲೇ ಇದು ಎರಡು ಮೂರು ತಿಂಗಳಿಗೊಮ್ಮೆ ಒಂದು ಡ್ರೋಪ್ ಮೂತ್ರ ಮಾತ್ರ ವಿಸರ್ಜನೆ ಮಾಡುತ್ತದೆ. ಮತ್ತೊಂದು ಸಂಗತಿ ಎಂದರೆ ಇದರ ಹಲ್ಲು […]

ಸೂಪರ್ ಸ್ಟಾರ್ ಬಾವಲಿ!!

ಸೂಪರ್ ಸ್ಟಾರ್ ಬಾವಲಿ!! ಕೆಲವು ತಿಂಗಳುಗಳ ಹಿಂದೆ ನಮ್ಮೆಲ್ಲರ ನಿದ್ದೆಗೆಡಿಸಿದ ಮತ್ತು ನಮ್ಮೆಲ್ಲರಲ್ಲಿ ಭಯಭೀತಿ ಉಂಟು ಮಾಡಿದ  ಒಂದು ಅಧ್ಬುತ ಜೀವಿಯಾಗಿದೆ ಬಾವಲಿ…! ಬಾವಲಿಯನ್ನು ನಮ್ಮಲ್ಲಿ ಕಂಡವರು ಬಹಳ ಮಂದಿಯಿದ್ದರೂ ಅದರ ವಿಶೇಷತೆಯನ್ನು ತಿಳಿದವರು ಬಹಳ ವಿರಳ. ಹೊರನೋಟಕ್ಕೆ ಪಕ್ಷಿಯಂತೆ ಕಂಡರೂ ಇದೊಂದು ಸಸ್ತನಿ ಜೀವಿಯಾಗಿದೆ. ಈ ಬಾವಲಿಗೆ ಹಗಲು ಹೊತ್ತು ಕಣ್ಣು ಕಾಣುವು ದಿಲ್ಲ. ಆದರೂ ಎಂತಹಾ ಅಮಾವಾಸ್ಯೆ ರಾತ್ರಿಯಲ್ಲೂ ಯಾವ ಪುಟ್ಟ ಜೀವಿಯನ್ನೂ ಬಹಳ ದೂರದಿಂದ  ಕಾಣುವ ಲೇಸರ್ ಪವರ್ ನೇತ್ರ ಇದಕ್ಕಿದೆ. ಸೂರ್ಯಾಸ್ತಮಾನ […]

ಜಗತ್ತಿನಲ್ಲೇ ಬಲಾಢ್ಯ ಶ್ರೀಮಂತರಾಗೋಣ

ಸಂಪಾದಕೀಯ ದಿನದಿಂದ ದಿನಕ್ಕೆ ನಮಗೆ ಹೊಸ ಬಗೆಯ ಸಂಕಷ್ಟ, ತೊಂದರೆಗಳು ಎದುರಾಗುತ್ತವೆ. ಬಿಕ್ಕಟ್ಟೊಂದರಿಂದ ಬಿಡುಗಡೆ ಪಡೆಯುತ್ತಿದ್ದಂತೆ ಮತ್ತೊಂದು ಸಮಸ್ಯೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಸಾಲದ ಹಿಡಿತದಿಂದ ಬಿಡಿಸಿಕೊಂಡಾಗ ಆಸ್ಪತ್ರೆಗೆ ಹಣ ಒಟ್ಟುಗೂಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಸಂಬಳ ಕೈ ಸೇರಿದಾಗ ಅದಕ್ಕಿಂತಲೂ ದೊಡ್ಡ ಮೊತ್ತದ ಖರ್ಚು ನಮಗಾಗಿ ಕಾಯುತ್ತಿರುತ್ತದೆ. ಈ ದಿನದ ಕಷ್ಟ ಒಂದು ನಮೂನೆಯಾದ್ದಾದರೆ ನಾಳಿನದ್ದು ಇನ್ನೊಂದು ನಮೂನೆ ಯದ್ದು. ಮುಂದಿನ ವಾರ ಈ ಎಲ್ಲಾ ರಗಳೆಗಳಿಂದ ಮುಕ್ತಿ ಪಡೆಯೋಣ ಎಂದುಕೊಂಡರೆ ಅಲ್ಲಿನ ಬವಣೆಗಳೇ ಇನ್ನೊಂದು […]

ವುಳೂಇನ ಐದು ನಿಬಂಧನೆ

ವುಳೂಇನ ಐದು ನಿಬಂಧನೆಗಳಲ್ಲಿ ಒಂದು ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು. ನೀರು ಮೂರು ವಿಧ 1) ತ್ವಹೂರ್ 2) ತ್ವಾಹಿರ್ 3) ಮುತನಜ್ಜಿಸ್ ಇವುಗಳಲ್ಲಿ ಒಂದನೆಯ ತ್ವಹೂರ್ ನಿಂದ ಮಾತ್ರವೇ ವುಳೂ ಸಿಂಧುವಾಗ ಬಹುದು. ಬರೀ ತ್ವಾಹಿರ್‌ನಿಂದ ಹಾಗೂ ಮುತನಜ್ಜಿಸ್ ನಿಂದ ವುಳೂ ಸಿಂಧು ಆಗುವುದಿಲ್ಲ. (1) ತ್ವಹೂರ್ ಯಾವುದೇ ಪ್ರತ್ಯೇಕ ವಿಶೇಷಣಗಳಿಲ್ಲದ ನೀರನ್ನು ತ್ವಹೂರ್ ಎನ್ನಲಾಗುತ್ತದೆ. ಪ್ರತ್ಯೇಕ ವಿಶೇಷಣಗಳು ಇದ್ದಲ್ಲಿ ಅದನ್ನು ತ್ವಹೂರ್ ಎನ್ನಲಾಗುವುದಿಲ್ಲ. ಉದಾಹರ […]

ನಮಾಝ್‌ನ ಐದು ನಿಬಂಧನೆ

ನಮಾಝ್‌ನ ಐದು ನಿಬಂಧನೆಗಳಲ್ಲಿ ಒಂದು ಕಿರಿಯ ಹಾಗೂ ಹಿರಿಯ ಅಶುದ್ಧಿಗಳಿಂದ ಮುಕ್ತವಾಗಿರುವುದು. ಕಿರಿಯ ಅಶುದ್ದಿ ವುಳೂ ಭಂಗವಾಗುವ ಕಾರಣಗಳು ಉಂಟಾಗಿ ವುಳೂ ಇಲ್ಲದ ಅವಸ್ಥೆಗೆ ಕಿರಿಯ ಅಶುದ್ದಿ ಎನ್ನುತ್ತಾರೆ. ಹಿರಿಯ ಅಶುದ್ದಿ ಸ್ನಾನ ಕಡ್ಡಾಯವಾಗಿರುವ ಅವಸ್ಥೆಗೆ ಹಿರಿಯ ಅಶುದ್ಧಿ ಎನ್ನುತ್ತಾರೆ. ವುಳೂಇಗೆ ಐದು ನಿಬಂಧನೆಗಳು 1. ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿ ಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು. 2. ವುಳೂಇನ ಅಂಗಾಂಗಗಳಲ್ಲಿ ನೀರು ಹರಿಯುವುದು. 3. ನೀರಿನ ಸ್ಪರ್ಶವನ್ನು ತಡೆಯುವ ಯಾವುದೇ ವಸ್ತುಗಳು […]

Search Here

Generic selectors
Exact matches only
Search in title
Search in content
Post Type Selectors