ನಡೆದುಕೊಂಡು ನಿಯ್ಯತ್?

ಪ್ರ: ನಮಾಝಿನ ನಿಯ್ಯತ್ತನ್ನು ನಡೆದುಕೊಂಡು ಬರುವಾಗ ಮಾಡಬಹುದೆ? ನಿಂತುಕೊಂಡೇ ಮಾಡಬೇಕೆಂದಿದೆಯೆ? ಉ: ನಿಂತುಕೊಂಡೇ ಆಗಬೇಕು. ನಿಶ್ಚಲ ಸ್ಥಿತಿಯಲ್ಲೇ ನಮಾಜಿನ ನಿಯ್ಯತ್ ಮಾಡಬೇಕೆನ್ನುವುದು ನಿಯ್ಯತ್‌ನ ಶರ್ತಗಳಲ್ಲೊಂದಾಗಿದೆ. ನಮಾಜಿನ ಫರ್‌ಗಳಲ್ಲಿ ನಿಯ್ಯತ್’ ಮೊದಲನೆಯದ್ದಾಗಿದ್ದು ನಮಾಜಿಗಾಗಿ ’ಸಾಧ್ಯವಿರುವವರು ನಿಲ್ಲುವುದು’ ಮೂರನೇ ಫರ್ಳ್ ಆಗಿದೆ. ಆದರೂ ನಿಯ್ಯತನ್ನು ಮೊದಲು ಮಾಡಿ ನಂತರ ನಿಲ್ಲುವಂತಿಲ್ಲ.’ನಿಲ್ಲುವಿಕೆ’ಯನ್ನು ಫರ್ಳ್ ಆಗಿ ಗಣಿಸಿರುವುದು ಫರ್ಳ್ ನಮಾಜ್‌ಗೆ ಮಾತ್ರ. ಸುನ್ನತ್ ನಮಾಜ್‌ಗೆ ಇದು ಬಾಧಕವಲ್ಲ, ಸುನ್ನತ್ ನಮಾಜನ್ನು ಕುಳಿತೂ ನಿರ್ವಹಿಸಬಹುದಾದುದರಿಂದ ಇದಕ್ಕಾಗಿ ನಿಯ್ಯತ್ತನ್ನು ಕುಳಿತುಕೊಂಡು ಮಾಡಬಹುದು. ನಿಯ್ಯತ್ ಮತ್ತು ತಕ್ಬೀರತುಲ್ […]

ಮೂತ್ರ ಹನಿಸಿದರೆ?

ಪ್ರ : ಮೂತ್ರ ಶಂಕೆಯ ನಂತರ ಕೊನೆಯಲ್ಲಿ ಉಳಿದ ಒಂದೆರಡು ಹನಿಗಳು ಕುಳಿತಲ್ಲಿಂದ ನೇರ ನಿಂತು ಕೊಂಡ ನಂತರ ಹೊರ ಬಂದು ವಸ್ತ್ರಕ್ಕೆ ತಾಗುತ್ತದೆ. ಇದನ್ನು ಶುಚೀಕರಿಸದೆ ಇದೇ ವಸ್ತ್ರದಲ್ಲಿ ನಮಾಜು ಮಾಡುವುದರಿಂದ ತೊಂದರೆ ಇದೆಯೆ? ಉ : ಮೂತ್ರದ ಒಂದು ಹನಿಯೂ ನಜಸ್ ಆಗಿದೆ. ಅದು ನಮಾಜು ಮಾಡುವವನ ವಸ್ತ್ರ, ಶರೀರದಲ್ಲಿದ್ದರೆ ಅದರೊಂದಿಗೆ ನಮಾಜು ಸಿಂಧುವಾಗುವುದಿಲ್ಲ. ಆದ್ದರಿಂದ ಮೂತ್ರ ಶಂಕೆಯ ಕೊನೆಯಲ್ಲಿ ಉಳಿಯುವ ಮೂತ್ರದ ಹನಿಯು ಶರೀರಕ್ಕೆ ಯಾ ವಸ್ತ್ರಕ್ಕೆ ತಾಗದಂತೆ ಜಾಗ್ರತೆ ವಹಿಸಬೇಕು. ಅದಕ್ಕಾಗಿ […]

ಮಣಿಗಂಟಿನ ಕೆಳಗಿನ ವಸ್ತ್ರ

ಪ್ರಶ್ನೆ: ನಮಾಜಿನಲ್ಲಿ ಕಾಲಿನ ಮಣಿಗಂಟಿನ ಕೆಳಗೆ ವಸ್ತ್ರವನ್ನು ಇಳಿ ಬಿಡುವುದರ ವಿಧಿ ಏನು? ಹೀಗೆ ವಸ್ತ್ರವು ಕೆಳಗಿದ್ದರೆ ನಮಾಜ್ ಸಿಂಧುವೆ? ಉತ್ತರ: ನಮಾಜಿನಲ್ಲಿ ಕಾಲಿನ ಮಣಿಗಂಟಿಗಿಂತ ಕೆಳಗೆ ವಸ್ತ್ರವು ಇಳಿದಿದ್ದರೆ ನಮಾಜ್‌ನ ಸಿಂದುತ್ವಕ್ಕೆ ಅಡ್ಡಿ ಇಲ್ಲ. ಆದರೆ ನಮಾಜಿನಲ್ಲಾಗಲೀ ಇತರ ವೇಳೆಯಲ್ಲಾಗಲೀ ಕಾಲಿನ ಮಣಿಗಂಟಿಗಿಂತ ಪುರುಷರು ತಮ್ಮ ವಸ್ತ್ರವನ್ನು ಕೆಳಗೆ ಇಳಿ ಬಿಡುವುದು ಕರಾಹತ್ ಆಗಿದೆ. ಅಹಂಭಾವದಿಂದ ಹೀಗೆ ಧರಿಸುವುದಾದರೆ ಅದು ಹರಾಮ್ ಆಗಿದೆ. ತುಪ್ಪ 3/55.

ಮಕ್ಕಳು ನನ್ನ ಉಪವಾಸ ಹಿಡಿದರೆ ಸಾಕೆ?

ಪ್ರಶ್ನೆ: ರಮಳಾನಿನಲ್ಲಿ ಅನಾರೋಗ್ಯ ಕಾರಣದಿಂದ ಉಪವಾಸ ಹಿಡಿಯಲಾಗಲಿಲ್ಲ. ಈಗ ರೋಗವಾಸಿಯಾಗಿದೆ. ನನಗೀಗ ವೃದ್ಧಾಪ್ಯ. ಉಪವಾಸ ಹಿಡಿಯಲು ಹೆಚ್ಚಿನ ಆರೋಗ್ಯವೂ ಇಲ್ಲ. ಹಾಗಿರುವಾಗ ನಾನು ಉಪವಾಸ ಖಳಾ ಸಂದಾಯ ಮಾಡಬೇಕೆ? ಖಳಾ ಸಂದಾಯ ಮಾಡುವುದಿದ್ದರೂ (ಪ್ರಾಯಶ್ಚಿತ್ತ) ನೀಡಬೇಕೆ? ನನ್ನ ಪರವಾಗಿ ನನ್ನ ಮಕ್ಕಳು ಉಪವಾಸ ಹಿಡಿದರೆ ಆಗುತ್ತದೆಯೆ? ವಿವರಿಸುವಿರಾ? ಉತ್ತರ: ರೋಗ ಕಾರಣದಿಂದ ಖಳಾ ಆದ ಉಪವಾಸವನ್ನು ನಂತರ ಖಳಾ ಪೂರೈಸುವುದು ಕಡ್ಡಾಯ. ವೃದ್ಧಾಪ್ಯದ ಸಹಜ ನಿಶ್ಯಕ್ತಿ ಕಾರಣ ಉಪವಾಸವು ತೀರಾ ಅಸಾಧ್ಯವೆಂಬ ಹಂತಕ್ಕೆ ತಲುಪಿದ್ದಲ್ಲಿ ಖಳಾ ಪೂರೈಕೆ […]

ಪತಿಯ ಮೊದಲ ಪತ್ನಿ

ಪ್ರ: ಪತಿಯ ಮೊದಲ ಪತ್ನಿಯ ಮಗಳ ಪತಿಯು ಎರಡನೆ ಪತ್ನಿಗೆ ಮಹ್‌ರಮ್ (ವಿವಾಹ ನಿಷಿದ್ಧ) ಆಗುವನೆ? ಉ: ಪತಿಯ ಮೊದಲ ಪತ್ನಿಯ ಮಗಳ ಪತಿಯು ಎರಡನೇ ಪತ್ನಿಗೆ ವಿವಾಹ ನಿಷಿದ್ಧನಲ್ಲ. ಸ್ಪರ್ಶದಿಂದ ವುಳೂ ಭಂಗವಾಗುವ ಅನ್ಯ ಪುರುಷನೆನಿಸುವನು.

ಮಹರ್ ಹಿಂತಿರುಗಿಸಬೇಕೆ?

ಪ್ರ : ನಿಕಾಹ್ ನಡೆದು ವರ್ಷಗಳ ಬಳಿಕ ಪತ್ನಿಯ ಬೇಡಿಕೆಯಂತೆ ತಲಾಖ್ ನಡೆದರೆ ಅವಳಿಗೆ ನೀಡಲಾದ ಮಹರ್‌ನ್ನು ಅವಳು ಹಿಂತಿರುಗಿಸಬೇಕೆ? ಆಗ ಮಹ್‌ರಿನ ಹಕ್ಕು ಯಾರಿಗಿರುತ್ತದೆ? ಉ : ನಿಕಾಹಿನ ಬಳಿಕ ಪತಿ ಪತ್ನಿಯರ ನಡುವೆ ದೈಹಿಕ ಸಂಪರ್ಕ ನಡೆಯುವುದರೊಂದಿಗೆ ಪತ್ನಿಯು ಮಹ್‌ರಿಗೆ ಸಂಪೂರ್ಣ ಹಕ್ಕುದಾರಳಾಗುತ್ತಾಳೆ. ಬಳಿಕ ಯಾರ ಬೇಡಿಕೆಯಂತೆ ತಲಾಖ್ ನಡೆದರೂ ಮಹ್‌ರ್ ಅವಳಿಗೆ ಸೇರುತ್ತದೆ.

ಎರಡು ನಮಾಜ್

ಪ್ರ : ಎರಡು ನಮಾಜ್‌ಗಳನ್ನು ಜಮ್‌ಅ ಮಾಡಲು ಉದ್ದೇಶಿಸಿದ್ದು ಒಂದನೇ ನಮಾಜ್ ಮುಗಿದಾಗ ವುಳೂ ಭಂಗವಾದರೆ ವುಳೂ ನಿರ್ವಹಿಸಿ ಜಮ್‌ಅ ಮುಂದುವರಿಸ ಬಹುದೇ ಅಥವಾ ನಿರಂತರತೆ ನಷ್ಟವಾದ ಕಾರಣ ಎರಡನೇ ನಮಾಝನ್ನು ಅದರ ಸಮ ಯದಲ್ಲೇ ನಿರ್ವಹಿಸಬೇಕೇ? ಉ : ತಖ್‌ದೀಮಿನ ಜಮ್‌ಅ ಆಗಿ ನಮಾಜ್ ಮಾಡುವಾಗ ಎರಡು ನಮಾಝ್‌ಗಳ ನಡುವೆ ನಿರಂತರತೆಯು ನಿಬಂಧನೆಯಾಗಿದೆ. ಆದರೆ ಒಂದು ನಮಾಝ್ ಮುಗಿದು ವುಳೂ ಭಂಗವಾದ ಕಾರಣ ನಡುವೆ ವುಳೂ ಮಾಡುವುದರಿಂದ ನಿರಂತರತೆ ಮುರಿಯುವುದಿಲ್ಲ. ಎರಡನೇ ನಮಾಝನ್ನು ಸೇರಿಸಿ ಜಮ್‌ಅ […]

ವಸ್ತ್ರ ಸುಡಬಹುದೇ?

ಪ್ರ : ಉಪಯೋಗ ಶೂನ್ಯವಾದ ವಸ್ತ್ರವನ್ನು ಸುಡಬಹುದೇ? ಉ : ಸುಡಬಹುದು; ನಿಷಿದ್ಧವಲ್ಲ.

ಹುಬ್ಬು ರೋಮಗಳು

ಪ್ರ : ಮಹಿಳೆಯರು ಸೌಂದರ್ಯ ಕ್ಕಾಗಿ ತಮ್ಮ ಹುಬ್ಬು ರೋಮ ಗಳನ್ನು ಕೀಳುವುದರ ವಿಧಿ ಏನು? ಉ : ಮಹಿಳೆಯರು ತಮ್ಮ ಮುಖದ ಮೇಲೆ ಬೆಳೆಯುವ ಸಹಜ ಕೂದಲುಗಳನ್ನು ನಿವಾ ರಿಸುವುದು ನಿಷಿದ್ಧವಾಗಿದೆ. ಹದೀಸ್ ವಚನಗಳಲ್ಲಿ ಈ ಬಗ್ಗೆ ಸ್ಪಷ್ಟ ಪ್ರಸ್ತಾಪಗಳಿವೆ. ಕರ್ಮಶಾಸ್ತ್ರ ಗ್ರಂಥಗಳಲ್ಲಿ ನೀಡಲಾದ ವಿವರ ಣೆಯಂತೆ ವಿವಾಹವಾದ ಮಹಿ ಳೆಯರು ತಮ್ಮ ಪತಿಯಂದಿರಿಗೆ ಸೌಂದರ್ಯವನ್ನು ತೋರ್ಪ ಡಿಸಲು ಅವರ ಅನುಮತಿ ಮೇರೆಗೆ ಹುಬ್ಬು ರೋಮವನ್ನು ನಿವಾರಿ ಸುವುದು ಸಮ್ಮತಾರ್ಹವಾಗಿದೆ. ಹಾಗಿರುವಾಗ ವಿವಾಹಿತ ರಲ್ಲದವರು ಹಾಗೂ […]

ಮನೆ ಕಾಯುವ ನಾಯಿ!

  ಪ್ರಶ್ನೆ : ಮನೆ ಕಾಯಲಿಕ್ಕಾಗಿ ನಾಯಿ ಸಾಕುವುದರ ವಿಧಿ ಏನು? ತೋಟ, ಕೃಷಿಗಳನ್ನು ಕಾಯಲು ನಾಯಿಗಳನ್ನು ಸಾಕಬಹುದೆ? ನಾಯಿ ಇರುವಲ್ಲಿ ಮಲಕ್‌ಗಳು ಬರುವುದಿಲ್ಲವೆನ್ನುತ್ತಾರೆ, ಹೌದೆ? ಕಾರಣವೇನು? ಉತ್ತರ : ನಾಯಿಗಳನ್ನು ಸಾಕುವ ಬಗ್ಗೆ ಹದೀಸ್ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಫಿಖ್‌ಹ್ ಗ್ರಂಥಗಳು ಈ ಬಗ್ಗೆ ಸವಿಸ್ತಾರ ಚರ್ಚೆಗಳನ್ನು ನಡೆಸಿವೆ. “ಯಾರು ನಾಯಿಯನ್ನು ಸಾಕುವನೋ ಅವನ ಸತ್ಕರ್ಮದಿಂದ ದಿನವೂ ಒಂದು ರಾಶಿ ಸತ್ಕರ್ಮಗಳನ್ನು ಅಳಿಸಿ ಹಾಕಲಾಗುತ್ತದೆ. ಕೃಷಿ ಹಾಗೂ ಜಾನುವಾರುಗಳ ನಾಯಿ ಹೊರತು’ ಎಂಬ ಹದೀಸನ್ನು ಇಮಾಮ್ ಬುಖಾರೀ ಮತ್ತು ಮುಸ್ಲಿಮ್ ವರದಿ ಮಾಡಿರುವರು. ಕೆಲವು […]

Search Here

Generic selectors
Exact matches only
Search in title
Search in content
Post Type Selectors