ಮಯ್ಯಿತ್ ನ ಉಗುರು

ಪ್ರಶ್ನೆ : ಮಯ್ಯಿತ್ ಸ್ನಾನ ಮಾಡಿಸುವಾಗ ಅದರ ಉಗುರು ಕತ್ತರಿಸಬಹುದೇ? ಉತ್ತರ : ಕತ್ತರಿಸಬಾರದು. ಮಯ್ಯಿತ್ ನ ಉಗುರು ಕತ್ತರಿಸುವುದು ಕರಾಹತ್ ಆಗಿದೆ. (ತುಹ್ಫ 3/113)
ಕೈ ಎತ್ತಿ ಸಲಾಮ್

ಪ್ರಶ್ನೆ : ಸಲಾಮ್ ಹೇಳದೆ ಕೇವಲ ಕೈ ಎತ್ತಿ ವಂದಿಸಿದರೆ ಅದಕ್ಕೆ ಪ್ರತಿಕ್ರಿಯಿಸಬೇಕೆ೦ದಿದೆಯೆ? ಉತ್ತರ : ಪ್ರತಿಕ್ರಿಯಿಸಬೇಕಿಲ್ಲ. ‘ತುಹ್ಫ 9/229’ರಿ೦ದ ಇದು ಸ್ಪಷ್ಟವಾಗುತ್ತದೆ.
ಸೆಗಣಿಯ ಮೇಲೆ ಚಾಪೆ

ಪ್ರಶ್ನೆ : ಸೆಗಣಿ ಹಚ್ಚಿ ಒಣಗಿದ ನೆಲದ ಮೇಲೆ ಚಾಪೆ ಹಾಕಿ ನಮಾಝ್ ಮಾಡುವುದು ಸಿಂಧುವೆ? ಉತ್ತರ : ಸಿಂಧು, ಸೆಗಣಿ ಹಚ್ಚಿದ್ದು ಒಣಗಿರುವ ಕಾರಣ ಮೇಲೆ ಹಾಕಿದ ಚಾಪೆ ಅದರ ಸ್ಪರ್ಶದಿ೦ದ ನಜಸ್ ಆಗುವುದಿಲ್ಲ ತಾನೆ? ಆದ್ದರಿ೦ದ ಸೆಗಣಿ ಒಣಗಿದ ನೆಲದ ಮೇಲೆ ಒಣಗಿದ ಚಾಪೆ ಹಾಕಿ ನಮಾಝ್ ಮಾಡಿದರೆ ಸಿ೦ಧುವಾಗುತ್ತದೆ. ಆದರೆ ನಜಸ್ ಗೆ ಅಭಿಮುಖವಾಗದೆ ಇತರ ಸ್ಥಳಗಳಲ್ಲಿ ನಮಾಝ್ ಮಾಡುವುದಾಗಿದೆ ಉತ್ತಮ.
ಖಬ್ರ್ ನ ಬಳಿ ಮಯ್ಯಿತ್ ನಮಾಝ್

ಪ್ರಶ್ನೆ : ಖಬ್ರ್ ನ ಬಳಿ ನಮಾಝ್ ಮಾಡುವುದು ಕರಾಹತ್ ಎನ್ನುತ್ತಾರೆ. ಊರಿನಲ್ಲಿ ಮಯ್ಯಿತ್ ನಮಾಝ್ ನಲ್ಲಿ ಪಾಲ್ಗೊಳ್ಳಲಾಗದೆ ದಫನದ ನ೦ತರ ಹಾಜರಾದವರು ಖಬ್ರ್ ನ ಬಳಿ ಮಯ್ಯಿತ್ ನಮಾಝ್ ಮಾಡಬೇಕು ತಾನೆ? ಅದು ಕರಾಹತ್ ಆಗದೆ? ಉತ್ತರ : ಇಲ್ಲ, ಖಬ್ರ್ ನ ಹತ್ತಿರ ನಮಾಝ್ ಮಾಡುವುದು ಕರಾಹತ್ ಆಗಿರುವುದು ಇತರ ನಮಾಝ್ ಗಳು ಮಾತ್ರ. ಮಯ್ಯಿತ್ ನಮಾಝ್ ಕರಾಹತ್ ಇರುವುದಿಲ್ಲ. (ಬಿಗ್ಯಾ – 94)
ಮಯ್ಯಿತ್ ಗೆ ಜನಾಬತ್

ಪ್ರಶ್ನೆ : ನಿಯ್ಯತ್ ಮಾಡಿ ಜನಾಬತ್ ಸ್ನಾನವನ್ನು ಮಾಡಿಸಬೇಕೇ? ಉತ್ತರ : ಮಯ್ಯಿತ್ ಸ್ನಾನ ಮಾತ್ರವೇ ಸಾಕಾಗುತ್ತದೆ. ಜನಾಬತ್ ಸ್ನಾನ ಮಾಡುವುದು ವ್ಯಕ್ತಿಯ ವೈಯಕ್ತಿಕ ಬಾಧ್ಯತೆಯಾಗಿರುತ್ತದೆ. ಮರಣದ ನ೦ತರ ಆ ಬಾಧ್ಯತೆ ಇರುವುದಿಲ್ಲ.
ವಾರೀಸುದಾರ ಯಾರು?

ಪ್ರಶ್ನೆ : ಮಹಿಳೆಯೊಬ್ಬರು ತೀರಿದ್ದಾರೆ, ಮಹಿಳೆಗೆ ವಾರೀಸುದಾರರಾಗಿ ಯಾರೂ ಇಲ್ಲ. ಸ್ತನಪಾನ ಸ೦ಬ೦ಧದ ಮಗ ಒಬ್ಬನಿದ್ದಾನೆ. ಮಹಿಳೆಯ ಸೊತ್ತುಗಳಿಗೆ ಈ ಸ್ತನಪಾನ ಸ೦ಬ೦ಧದ ಮಗುವಿಗೆ ವಾರೀಸು ಹಕ್ಕು ಇದೆಯೆ? ಉತ್ತರ : ಇಲ್ಲ, ಸ್ತನಪಾನ ಸ೦ಬ೦ಧ ಮೂಲಕ ವಾರೀಸು ಹಕ್ಕು ಉಂಟಾಗುವುದಿಲ್ಲ. ವಾರೀಸುದಾರರಾಗಿ ಯಾರೂ ಇಲ್ಲದಿದ್ದರೆ ಆ ಸೊತ್ತು ‘ಬೈತುಲ್ ಮಾಲ್’ಗೆ ಸೇರುತ್ತದೆ. ಊರಿನ ಖಾಝಿಯು ಅದರ ಮೇಲ್ನೋಟ ವಹಿಸಬೇಕಾಗಿದ್ದು ಅವರ ನಿರ್ಧಾರದಂತೆ ಆ ಸೊತ್ತು ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು.
ಗರ್ಭ ನಿರೋಧಕಗಳ ಮಾರಟ

ಪ್ರಶ್ನೆ : ಮುಸ್ಲಿಮರು ತಮ್ಮ ಅಂಗಡಿಯಲ್ಲಿ ‘ನಿರೋಧ್” ನ೦ತಹ ಗರ್ಭನಿರೋಧಕಗಳನ್ನು ಮಾರಾಟ ಮಾಡಬಹುದೇ? ಉತ್ತರ : ತಾಯಿ- ಮಗುವಿನ ಆರೋಗ್ಯಕ್ಕಾಗಿ ತಾತ್ಕಾಲಿಕವಾಗಿ ಗರ್ಭಧಾರಣೆ ಮು೦ದೂಡುವುದು ಅನುವದನೀಯವಾಗಿದ್ದು ಅ೦ತಹ ಅನುವದನೀಯ ಕಾರ್ಯಗಳಿಗೆ ಬಳಸಲಾಗುವ ತಾತ್ಕಾಲಿಕ ಗರ್ಭ ನಿರೋಧಕಗಳನ್ನು ಮಾರಾಟ ಮಾಡಬಹುದಾಗಿದೆ.
ತಿಲಾವತ್ ನ ಸುಜೂದ್

ಪ್ರಶ್ನೆ: ತಿಲಾವತ್ ನ ಸುಜೂದ್ ಎಷ್ಟು? ಅದನ್ನು ಮಾಡುವ ಕ್ರಮ ಹೇಗೆ? ವಿವರಿಸುವಿರಾ? ಉತ್ತರ : ಖುರ್ ಆನ್ ಪಾರಾಯಣ ನಡೆಸುವಾಗ ತಿಲಾವತ್ ನ ಸುಜೂದ್ ಸುನ್ನತ್ತಿರುವ ಆಯತ್ ಗಳನ್ನು ಓದಿದರೆ ಸುಜೂದ್ ಸುನ್ನತ್ತಿದೆ. ಖುರ್ ಆನ್ ನಲ್ಲಿ ಇ೦ತಹ ಹದಿನಾಲ್ಕು ಆಯತ್ ಗಳಿವೆ. ಖುರ್ ಆನ್ ಪಾರಾಯಣ ನಡೆಸುವಾಗ ಈ ಆಯತ್ ಗಳಲ್ಲೊಂದನ್ನು ಓದಿದರೆ ಪಾರಾಯಣ ನಿಲ್ಲಿಸಿ, “ನಾನು ತಿಲಾವತ್ ನ ಸುಜೂದ್ ಮಾಡುವೆನು” ಎ೦ಬ ಸ೦ಕಲ್ಪದೊಂದಿಗೆ ‘ಅಲ್ಲಾಹು ಅಕ್ಬರ್’ ಎ೦ದು ‘ತಕ್ಬೀರತುಲ್ ಇಹ್ರಾಮ್’ ಹೇಳಬೇಕು. […]
ಕೈ ಕಟ್ಟುವುದು ಹೇಗೆ?

ಪ್ರಶ್ನೆ: ನಮಾಝಿನಲ್ಲಿ ಕೈ ಕಟ್ಟುವಾಗ ಬಲ ಹಸ್ತದಿ೦ದ ಎಡ ಕೈಯ ಮಣಿಗ೦ಟನ್ನು ಹಿಡಿಯಬೇಕೆ? ಅಥವಾ ಎಡ ಕೈಯ ತೋಳಿನ ಮಧ್ಯಭಾಗವನ್ನು ಹಿಡಿಯಬೇಕೆ? ಉತ್ತರ : ಬಲ ಹಸ್ತದಿ೦ದ ಎಡಕ್ಕೆಯ ಮಣಿಗ೦ಟನ್ನು ಹಿಡಿಯಬೇಕು.
ಮುಸ್ಹಫ್ ಕೆಳಗೆ ಬಿದ್ದರೆ?

ಪ್ರಶ್ನೆ : ಮುಸ್ಹಫ್ ಕೆಳಗೆ ಬಿದ್ದರೆ ಮಸೀದಿಗೆ ರೊಟ್ಟಿ ಕೊಡಬೇಕೆ೦ದು ಕೆಲವರು ಹೇಳುತ್ತಾರೆ ಹೌದೆ? ಉತ್ತರ : ಮುಸ್ಹಫ್ ಗೌರವಿಸಬೇಕಾದ ವಸ್ತು. ನೆಲಕ್ಕೆ ಬಿದ್ದು ಅದರ ಗೌರವಕ್ಕೆ ಕು೦ದಾಗುವಂತೆ ಅದನ್ನಿಡಬಾರದು, ಅಕಸ್ಮಾತ್ ಬಿದ್ದು ಬಿಟ್ಟರೆ ತಕ್ಷಣ ಅದನ್ನೆತ್ತಿ ಗೌರವಕ್ಕೆ ಧಕ್ಕೆಯಾಗದ೦ತೆ ಇಡಬೇಕು. ಅದಕ್ಕಾಗಿ ಮಸೀದಿಗೆ ರೊಟ್ಟಿಯೋ ಇನ್ಯಾವುದೋ ವಸ್ತು ಕೊಡಬೇಕೆ೦ದೇನೂ ಇಲ್ಲ.