ಅಜಬ್‌ ತುಂಬಿದ ರಜಜ್

ಅಜಬ್‌ ತುಂಬಿದ ರಜಜ್ ಅಬೂಹಾಮಿದ್‌ » ರಜಬುನ್‌ ಶಹ್‌ರುಲ್ಲಾಹ್‌, ವ ಶಅಬಾನು ಶಹ್‌ರೀ, ವರಮಳಾನು ಶಹ್‌ರು ಉಮ್ಮತ್ನೀ. ರಜಬ್‌ ಅಲ್ಲಾಹನ ತಿಂಗಳು, ಶಅಬಾನು ನನ್ನ ತಿಂಗಳು, ರಮಳಾನ್‌ ನನ್ನ ಉಮ್ಮತ್‌ನದ್ದು. ಹೀಗೊಂದು ಹದೀಸ್‌ ವಚನದ ಪರಂಪರೆಯ ಬಗ್ಗೆ ಹದೀಸ್‌ ವಿದ್ವಾಂಸರು ದುರ್ಬಲವೆಂದು ಅಭಿಪ್ರಾಯ ಹೇಳಿದ್ದರೂ ತಿಂಗಳಿನ ಮಹತ್ವವನ್ನು ತಿಳಿಸಲು ಇದು ಸಾಕೆಂದು ವಿದ್ವತ್‌ ಜಗತ್ತು ಅಂಗೀಕರಿಸುತ್ತದೆ. ಅಲ್ಲಾಹನ ಭವನವೆಂದು ಕಅಬಾಲಯದ ಬಗ್ಗೆ ಹೇಳುವುದು ಅದರ ಗೌರವವನ್ನು ಎತ್ತಿ ತೋರಿಸುವಂತೆ ರಜಬ್‌ ತಿಂಗಳನ್ನು ಶಹ್‌ರುಲ್ಲಾಹ್‌ ಎನ್ನುವುದು ಅದರ ಗೌರವ […]

ಸಂಕಷ್ಟದ ಸಮಯದಲ್ಲಿ ಬೆಂಬಲ

ಜಾಬಿರುಬ್ನು ಅಬ್ದಿಲ್ಲಾ ಮತ್ತು ತ್ವಲ್‌ಹತುಬ್ನು ಸಹ್‌ಲಿಲ್ ಅನ್ಸಾರಿರಿಂದ ವರದಿ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. ಒಬ್ಬ ಮುಸ್ಲಿಮನ ಪಾವಿತ್ರತೆಗೆ ಧಕ್ಕೆಯಾಗುವ ಹಾಗೂ ಅವನ ಗೌರವಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ (ಮಧ್ಯಪ್ರವೇಶಿಸಲು ಸಾಧ್ಯವಿದ್ದೂ) ಕಡೆಗಣಿಸಿದರೆ ಆ ವ್ಯಕ್ತಿಗೆ ಅಲ್ಲಾಹನ ಸಹಾಯ ಅಗತ್ಯವಾದ ಸಂದರ್ಭದಲ್ಲಿ ಅಲ್ಲಾಹು ಅವನನ್ನೂ ಕಡೆಗಣಿಸುವನು. ಒಬ್ಬ ಮುಸ್ಲಿ ಮನ ಪಾವಿತ್ರತೆಗೆ ಧಕ್ಕೆ ಹಾಗೂ ಅವನ ಗೌರವಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ ಒಬ್ಬ ಆತನ ನೆರವಿಗೆ ಧಾವಿಸಿದರೆ ಅಲ್ಲಾಹನ ನೆರವು ಅಗತ್ಯವೆನಿಸಿದ ಸಂದರ್ಭದಲ್ಲಿ ಅಲ್ಲಾಹು ಅವನಿಗೆ […]

ಹೆಣ್ಣೆ! ಕಂಜೂಸಾಗದಿರು

  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ಒಳಿತಿನ ಯಾವುದೇ ಸಣ್ಣ ಕಾರ್ಯಗಳನ್ನು ನೀವು ನಿಸ್ಸಾರವಾಗಿ ಕಾಣಬೇಡಿ. ಒಬ್ಬನ ಬಳಿ ಏನೂ ಇಲ್ಲದಿದ್ದರೆ ತನ್ನ ಸಹೋದರನ ಬಳಿ ಪ್ರಸನ್ನತೆಯೊಂದಿಗೆ ವರ್ತಿಸಲಿ. ನೀವು ಮಾಂಸವನ್ನು ಖರೀದಿಸಿದರೆ ಅಥವಾ ಬೇರೇನನ್ನಾದರೂ ಬೇಯಿಸುವುದಾದರೆ ಅದರಲ್ಲಿ ಸಾರು ಹೆಚ್ಚುವಂತೆ ಮಾಡಿ, ಅದರಿಂದ ನಿಮ್ಮ ನೆರೆಕರೆಯವರಿಗೂ ಸುರಿದು ಕೊಡಿ. (ವರದಿ: ಅಬೂದ್ಸರ್ ರಳಿಯಲ್ಲಾಹು ಅನ್ಹು, ಉಲ್ಲೇಖ: ತುರ್‌ಮುದ್ಸೀ)   ಊಟಕ್ಕೊಂದು ಪಲ್ಯ ಮಾಡುವುದಾದರೆ ಅದು ಹೇಗೆ ನಿನ್ನ ನೆರೆಕರೆಯವರಿಗೂ ಪ್ರಯೋಜನ ಹಿಡಿಯಬಲ್ಲುದೆಂಬುದನ್ನು ತಿಳಿಸಿಕೊಡುವ ಪ್ರವಾದಿ ವಚನವಿದು. ಳಿತಿನ ಯಾವುದೇ ಕಾರ್ಯವನ್ನು […]

ಕೊಳಕು ವಸ್ತ್ರ, ಕೆದರಿದ ಕೂದಲು

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ನಮ್ಮ ಬಳಿಗೆ ಬಂದಾಗ ಕೂದಲು ಕೆದರಿರುವ ವ್ಯಕ್ತಿಯೊಬ್ಬರನ್ನು ನೋಡಿದರು. ‘ತನ್ನ ಕೂದಲನ್ನು ಒಪ್ಪವಾಗಿಡುವ ಏನೂ ಇವನಿಗೆ ದೊರಕಲಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಬೇರೊಬ್ಬ ವ್ಯಕ್ತಿ ಕೊಳಕು ವಸ್ತ್ರವನ್ನು ಧರಿಸಿರುವುದನ್ನು ಕಂಡರು. ‘ಇವನಿಗೆ ತನ್ನ ವಸ್ತ್ರ ಒಗೆಯಲು ಏನೂ ಸಿಕ್ಕಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಉಲ್ಲೇಖ-ಅಬೂದಾವೂದ್    ವರದಿ: ಜಾಬಿ‌ರ್ ಬಿನ್ ಅಬ್ದುಲ್ಲಾಹ್ ರಳಿಯಲ್ಲಾಹು ಅನ್ಹು ಮನುಷ್ಯನ ಮುಕ್ತ ಮನಸ್ಸು ಬಯಸುವ ಪ್ರಾಕೃತಿಕ ಬೇಡಿಕೆಗಳಿಗೆ ಪೂರಕವಾದ ಧರ್ಮವಾಗಿದೆ ಇಸ್ಲಾಮ್. ಶುಚಿತ್ವ ಈ ಪೈಕಿ ಅತಿಮುಖ್ಯವಾದುದು. […]

‘ಯಾರೂ ಸರಿಯಿಲ್ಲ’

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಹೇಳಿದರು;  ವ್ಯಕ್ತಿಯೊಬ್ಬನು “ಜನರೆಲ್ಲ ನಾಶವಾದರು” ಎನ್ನುತ್ತಿದ್ದರೆ ಅವರ ಪೈಕಿ ಅತಿನಾಶ ಹೊಂದಿದವನು ಆ ವ್ಯಕ್ತಿಯೇ ಆಗಿರುವನು. ವರದಿ : ಅಬೂಹುರೈರ ರಳಿಯಲ್ಲಾಹು ಅನ್ಹು ಉಲ್ಲೇಖ: ಮುಸ್ಲಿಮ್ ಇಮಾಮ್ ನವವೀ ರಳಿಯಲ್ಲಾಹು ಅನ್ಹು ಯವರು ತಮ್ಮ ರಿಯಾಳು ಸ್ವಾಲಿಹೀನ್‌ನಲ್ಲೂ ಅದ್ಸ್ಕಾರ್‌ನಲ್ಲೂ ಈ ಹದೀಸನ್ನು ಉಲ್ಲೇಖಿಸಿ ವಿವರಣೆಯನ್ನು ನೀಡಿದ್ದಾರೆ ಅನೇಕ ಮಂದಿಗೆ ಜನರನ್ನೆಲ್ಲ ದೂರುವ ಒಂದು ಚಪಲವಿದೆ. ನಾಲ್ಕು ಮಂದಿ ಸೇರಿ ಕುಳಿತು ಮಾತನಾಡುವಾಗ ಜನರ ಅವಸ್ಥೆಯೇನಿದು? ಎಲ್ಲ ಏನು ಮಾಡುತ್ತಾ ಇದ್ದಾರೆ? ಯಾರ ಬಳಿಯೂ ದೀನ್ […]