ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ

ಪವಿತ್ರ ಪಂಡಿತ ಪರಂಪರೆಯ ಮತ್ತೊಂದು ಕೊಂಡಿ ಕಳಚಿದೆ. ನಡೆನುಡಿಗಳಲ್ಲಿ, ವೇಷಭೂಷಣದಲ್ಲೆಲ್ಲ ಹಳೇಕಾಲದ ಸಾತ್ವಿಕ ಪರಂಪರೆಯ ಪ್ರತೀಕದಂತಿದ್ದ ಮಹಾವಿದ್ವಾಂಸ ತಾಜುಶ್ಶರೀಅಃ ಶೈಖುನಾ ಅಲೀ ಕುಂಞಿ ಮುಸ್ಲಿಯಾರ್ ಶಿರಿಯ ಅಲ್ಲಾಹನ ವಿಧಿಗೆ ಓಗೊಟ್ಟಿದ್ದಾರೆ. ದಕ್ಷಿಣ ಭಾರತದ ಅತ್ಯುನ್ನತ ಉಲಮಾ ಒಕ್ಕೂಟವಾದ ’ಸಮಸ್ತ’ದ ಅತ್ಯಂತ ಹಿರಿಯ ಸದಸ್ಯರಾಗಿರುವ, ಪ್ರಸ್ತುತ ಅದರ ಉಪಾಧ್ಯಕ್ಷರೂ, ಜಾಮಿಅ ಸಅದಿಯ್ಯಾ ವಿದ್ಯಾಸಂಸ್ಥೆಯ ಉಪಾಧ್ಯಕ್ಷರೂ ಕೆಲವು ಮೊಹಲ್ಲಾಗಳ ಖಾಝಿಗಳೂ ಆಗಿರುವ ತಾಜುಶ್ಶರೀಅಃ ತಮ್ಮ 87ನೇ ವರ್ಷದಲ್ಲಿ ಕೊನೆಯುಸಿರೆಳೆದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗಡಿನಾಡು ಕಾಸರಗೋಡಿನ […]
ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’

ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’ 1991ರ ಮೇ 19/ದ್ಸುಲ್ ಖಅದ್ 5ರಂದು ನನ್ನ ತಂದೆಯವರು ವಫಾತ್ ಆದಾಗ ಉಂಟಾದ ಅನಾಥ ಪ್ರಜ್ಞೆನನ್ನನ್ನು ಮತ್ತೆ ಕಾಡಿದ್ದು ಮೊನ್ನೆಯೇ, 2021ರ ಮೇ 10ರಂದು. ತಂದೆಯ ವಿದಾಯದ ವೇಳೆ ನಾನಿನ್ನೂ 12ರ ಹುಡುಗನಾಗಿದ್ದರಿಂದ ಅಂದಿನ ಭಾವತೀವ್ರತೆಗಳೇನೂ ನೆನಪಿಗೆ ಬರುತ್ತಿಲ್ಲ. ಅಮ್ಮನ ಬೀಡಿಯ ಬಲದಿಂದ ಹೈಸ್ಕೂಲ್ ಓದುತ್ತಿದ್ದೆ. ನಾನು 9ನೇ ತರಗತಿಯಲ್ಲಿರುವಾಗ ಅಲ್ ಅನ್ಸಾರ್ ಶತ್ರಿಕೆ ಶುರುವಾಗಿತ್ತು. ಬಾಲ್ಯದಿಂದಲೇ ಓದುವ ಹುಚ್ಚು ಹೆಚ್ಚಿದ್ದ ನಾನು ಬೇಕಲ್ […]
ಬೇಕಲ್ ಉಸ್ತಾದ್ ವಿದ್ವತ್ ಚಕ್ರವರ್ತಿ

ಕರ್ನಾಟಕ ಮಣ್ಣಿನಲ್ಲಿ ಜ್ಞಾನ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ, ಪ್ರಬುದ್ದವಾದ ನ್ಯಾಯ ತೀರ್ಪುಗಳ ಮೂಲಕ ಸಮಾಜಕ್ಕೆ ಭದ್ರವಾದ ನಾಯಕತ್ವವನ್ನು ನೀಡಿದ, ನಾಡು ಕಂಡ ಅಪ್ರತಿಮ ವಿದ್ದಾಂಸರಾಗಿದ್ದಾರೆ ಶೈಖುನಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್. ಉತ್ತರ ಕೇರಳದ ಬೇಕಲ್‌ನಲ್ಲಿ ಸುದೀರ್ಘ ನಲ್ವತ್ತು ವರ್ಷಕ್ಕಿಂತ ಹಚ್ಚು ಸೇವೆಗೈದದ್ದರಿಂದ ಬೇಕಲುಸ್ತಾದ್ ಎಂದು ಅರಿಯಲ್ಪಟ್ಟರೂ ವಾಸ್ತವದಲ್ಲಿ ಅವರ ಹುಟ್ಟು, ವಾಸ್ತವ್ಯ ಕರ್ನಾಟಕದಲ್ಲಿ. ಸಮಕಾಲೀನ ಯುಗದಲ್ಲಿ ಕರುನಾಡು ಕಂಡ ಮೇರು ವಿದ್ವಾಂಸ ಯಾರು ಎಂದು ಕೇಳಿದರೆ ಉತ್ತರ ಸ್ಪಷ್ಟ. ಅದುವೇ ಬೇಕಲುಸ್ತಾದ್. ಬೇಕಲುಸ್ತಾದ್ ಇಲ್ಲದ ಸಮಾಜದಲ್ಲಿ ಅಕ್ಬರಶಃ […]
ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್

ಹಿಜರಿ 1341-1435 ತಾಜುಲ್ ಉಲಮಾ ಶೈಖುನಾ ಅಸ್ಸಯ್ಯಿದ್ ಅಬ್ದುರ‍್ರಹ್ಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಸಮಕಾಲೀನ ಮುಸ್ಲಿಂ ಜಗತ್ತಿನ ಅಗ್ರೇಸರ ವಿದ್ವಾಂಸ, ಅಹ್ಲುಸ್ಸುನ್ನಃದ ಅಮರ ನಾಯಕ, ಉಲಮಾ ಲೋಕಕ್ಕೆ ಕಿರೀಟ ಪ್ರಾಯರಾದ ಅಗ್ರಗಣ್ಯ ನೇತಾರ, ಆಧ್ಯಾತ್ಮಿಕ ನಭೋಮಂಡಲದ ಮಿನುಗು ತಾರೆ ಶೈಖುನಾ ತಾಜುಲ್ ಉಲಮಾ ಕೀರ್ತಿಶೇಷರಾದರು. ಹಿಜ್‌ರಾ 1341ರ ರಬೀಉಲ್ ಅವ್ವಲ್ 25 ರಂದು ಭೂಲೋಕ ಕಂಡ ಪ್ರವಾದಿ ಕುಟುಂಬದ ಪುನೀತ ಸದಸ್ಯ 1435ರ ರಬೀಉಲ್ ಅವ್ವಲ್ 30 ರಂದು 95ನೇ ಪ್ರಾಯದಲ್ಲಿ ಧನ್ಯ ಬದುಕಿಗೆ ವಿದಾಯ […]