ಪ್ರಶ್ನೆ : ತಹಜ್ಜುದ್ ನಮಾಝ್ ನಿರ್ವಹಿಸುವಾಗ ಸುಬ್ಹಿ ಬಾಂಗ್ ಕೇಳಿಸಿದರೆ ನಮಾಝಿನಿಂದ ಕೈ ಬಿಡಬೇಕೆ? ಅಥವಾ ಪೂರ್ತಿಗೊಳಿಸಬೇಕೆ?
ಉತ್ತರ : ತಹಜ್ಜುದ್ ನಮಾಜ್ನೆಡೆಯಲ್ಲಿ ಸುಬುಹಿ ಬಾಂಗ್ ಕೇಳಿಸಿದರೆ ನಮಾಝನ್ನು ಅಲ್ಲಿಗೇ ನಿಲ್ಲಿಸಬೇಕಾಗಿಲ್ಲ. ಸುಬುಹಿಯ ಆರಂಭದೊಂದಿಗೆ ತಹಜ್ಜುದ್ನ ಸಮಯ ಮುಗಿಯುವುದಾದರೂ ತಹಜ್ಜುದ್ ಎಂಬ ನಿಯ್ಯತ್ ನಿಂದ ಆರಂಭಗೊಂಡ ಪ್ರಸ್ತುತ ನಮಾಝನ್ನು ಮುಂದುವರಿಸಬಹುದು. ಯಾವುದೇ ನಮಾಝನ್ನು ಆರಂಭಿಸಿದ ನಂತರ ಅದರ ಸಮಯವು ಮುಕ್ತಾಯಗೊಂಡಲ್ಲಿ ನಮಾಝ್ನಿಂದ ಕೈ ಬಿಡ ಬೇಕಾಗಿಲ್ಲ. ಫರ್ಳ್ ನಮಾಝ್ ಆಗಿದ್ದರೆ ಹಾಗೆ ಕೈ ಬಿಡುವುದು (ನಮಾಝನ್ನು ಅರ್ಧಕ್ಕೆ ನಿಲ್ಲಿಸುವುದು) ನಿಷಿದ್ಧವಾಗಿದೆ.