‘ಖಳಾ ಜಮಾಅತ್’

ಪ್ರಶ್ನೆ : ‘ಖಳಾ‘ ಆದ ಫರ್ಳ್ ನಮಾಜನ್ನು ಜಮಾಅತ್ ಆಗಿ ನಿರ್ವಹಿಸಬಹುದೆ? ಉತ್ತರ : ಇಮಾಂ ಮತ್ತು ಮಅಮೂಮರಿಬ್ಬರೂ ‘ಖಳಾ‘ಆಗಿ ನಿರ್ವಹಿಸುವವರಾಗಿದ್ದು ಅವರಿಬ್ಬರ ನಮಾಜ್ ಒಂದೇ ಆಗಿದ್ದರೆ (ಉದಾ: ಇಬ್ಬರದೂ ಅಸರ್) ಜಮಾಅತ್ ಸುನ್ನತ್ತಿದೆ. ಒಬ್ಬರದು ‘ಖಳಾ, ಇನ್ನೊಬ್ಬರದ್ದು ‘ಅದಾ‘ ಅಥವಾ ಇಬ್ಬರ ನಮಾಜ್ ವ್ಯತ್ಯಾಸವು ಳ್ಳದ್ದಾದಲ್ಲಿ ಜಮಾಅತ್ ಸುನ್ನತ್ತಿಲ್ಲ. (ತುಹ್ಫಾ)