ಸಮಾಜ ಕಟ್ಟುವ ನಾಯಕರು ಬೇಕು

ಸಂಪಾದಕೀಯ ಸಮಾಜ ಕಟ್ಟುವ ನಾಯಕರು ಬೇಕು ನಮ್ಮ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಾಣಲು ಹುಟ್ಟಿಕೊಂಡ ಸಂಘಟನೆಗಳ ಲೆಕ್ಕವೂ ಸಣ್ಣದೇನಲ್ಲ. ಸಂಘಟನೆಗಳ ಹೆಸರಲ್ಲಿಯೂ ಅಲ್ಲದೆಯೂ ಸಮಾಜದ ಸುಧಾರಕರಾಗಿ, ಮಾರ್ಗದರ್ಶಕರಾಗಿ, ನಾಯಕರಾಗಿ ಹಲವರ ಮುಖಗಳನ್ನು ಈ ಸಮಾಜವು ಕಂಡಿದೆ. ಹಲವರ ಭಾಷಣಗಳಿಗೆ ಮಾರುಹೋಗಿದೆ. ಹಲವರ ಚಿಂತನೆಗಳಿಗೆ ತಲೆಬಾಗಿಸಿದೆ. ಹಲವರ ಆವೇಶಗಳಲ್ಲಿ ತನ್ನನ್ನು ಹಂಚಿಕೊಂಡಿದೆ. ಸಮಾಜದ ನಾಯಕರಾಗಿ ಬೆಳೆದು ಬಂದವರಿಂದ, ಅವರು ಕಟ್ಟಿದ ಸಂಘಟನೆಗಳಿಂದ, ಸಮಾಜದಲ್ಲಿ ಇತ್ತೀಚಿನ ವರ್ಷಗಳಲ್ಲಿ ಏನು ಬದಲಾವಣೆಗಳಾಗಿವೆ ಎನ್ನುವ ಪ್ರಶ್ನೆಗೆ ಆಯಾ ಸಂಘಟನೆಗಳಿಗೂ ಅವುಗಳ ನಾಯಕರಿಗೂ ಉತ್ತರಗಳಿರಬಹುದು. […]
ಜಗತ್ತಿನಲ್ಲೇ ಬಲಾಢ್ಯ ಶ್ರೀಮಂತರಾಗೋಣ

ಸಂಪಾದಕೀಯ ದಿನದಿಂದ ದಿನಕ್ಕೆ ನಮಗೆ ಹೊಸ ಬಗೆಯ ಸಂಕಷ್ಟ, ತೊಂದರೆಗಳು ಎದುರಾಗುತ್ತವೆ. ಬಿಕ್ಕಟ್ಟೊಂದರಿಂದ ಬಿಡುಗಡೆ ಪಡೆಯುತ್ತಿದ್ದಂತೆ ಮತ್ತೊಂದು ಸಮಸ್ಯೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಸಾಲದ ಹಿಡಿತದಿಂದ ಬಿಡಿಸಿಕೊಂಡಾಗ ಆಸ್ಪತ್ರೆಗೆ ಹಣ ಒಟ್ಟುಗೂಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಸಂಬಳ ಕೈ ಸೇರಿದಾಗ ಅದಕ್ಕಿಂತಲೂ ದೊಡ್ಡ ಮೊತ್ತದ ಖರ್ಚು ನಮಗಾಗಿ ಕಾಯುತ್ತಿರುತ್ತದೆ. ಈ ದಿನದ ಕಷ್ಟ ಒಂದು ನಮೂನೆಯಾದ್ದಾದರೆ ನಾಳಿನದ್ದು ಇನ್ನೊಂದು ನಮೂನೆ ಯದ್ದು. ಮುಂದಿನ ವಾರ ಈ ಎಲ್ಲಾ ರಗಳೆಗಳಿಂದ ಮುಕ್ತಿ ಪಡೆಯೋಣ ಎಂದುಕೊಂಡರೆ ಅಲ್ಲಿನ ಬವಣೆಗಳೇ ಇನ್ನೊಂದು […]