ಆರಾಧನೆ

ಆರಾಧನೆ ನಾವೆಲ್ಲರೂ ಅಲ್ಲಾಹುವಿನ ದಾಸ ರಾಗಿದ್ದೇವೆ. ಆತನ ಆಜ್ಞೆಯನ್ನು ಪಾಲಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಜ್ಞೆಗಳು ಹಲವು ರೀತಿ ಇದ್ದರೂ ಆ ಪೈಕಿ ಸರಳ ಮತ್ತು ಸುಲಭವಾದುದು ದಿನನಿತ್ಯ ನಿರ್ವಹಿಸಬೇಕಾದ ಐದು ವೇಳೆಯ ನಮಾಝ್ ಎಂಬ ಶ್ರೇಷ್ಠ ಆರಾಧನೆಯಾಗಿದೆ. ಅರಬೀ ಭಾಷೆಯಲ್ಲಿ ಇದನ್ನು ಸ್ವಲಾತ್ ಎನ್ನಲಾಗುತ್ತದೆ. ತಕ್ಬೀರತುಲ್ ಇಹ್ರಾಮ್‌ನಿಂದ ಆರಂಭಿಸಿ ಸಲಾಂ ಹೇಳುವವರೆಗಿನ ನಿರ್ದಿಷ್ಟ ಕರ್ಮಗಳು ಹಾಗೂ ನುಡಿಗಳಾಗಿವೆ ನಮಾಝ್. ದಿನನಿತ್ಯ ಐದು ವೇಳೆಯ ನಮಾಝ್ ಕಡ್ಡಾಯ ಎಂಬುದು ಈ ಸಮುದಾಯಕ್ಕೆ ಅಲ್ಲಾಹು ನೀಡಿದ ವಿಶೇಷ ಕೊಡುಗೆಯಾಗಿದೆ. […]