ಮಕ್ಕಳಿಗೆ ತರಬೇತಿ

ಮಕ್ಕಳಿಗೆ ತರಬೇತಿ ಅಬ್ದುಲ್ಲಾಹಿ ಬಿನ್ ಅಮ್ರ್ ರಳಿಯಲ್ಲಾಹು ಅನ್‌ಹು ರವರಿಂದ ವರದಿ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ನಿಮ್ಮ ಮಕ್ಕಳಿಗೆ ಏಳು ವರ್ಷ ಪ್ರಾಯವಾಗಿರುವಾಗ ನಮಾಝ್ ಮಾಡಲು ಆಜ್ಞಾಪಿಸಿರಿ. ಹತ್ತು ವರ್ಷ ಪ್ರಾಯದವರಾಗಿದ್ದು ನಮಾಝ್ ಉಪೇಕ್ಷಿಸಿದಲ್ಲಿ ಅವರನ್ನು ದಂಡಿಸಿರಿ. (ಅಬೂ ದಾವೂದು) ನಮಾಝ್‌ನ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ತರಬೇತಿ ನೀಡ ಬೇಕೆಂದು ಇಸ್ಲಾಂ ನಿರ್ದೇಶಿಸುತ್ತದೆ. ತಂದೆ ತಾಯಂದಿರು ನಮಾಝ್ ಮಾಡುವಾಗ ಮಕ್ಕಳಿಗೂ ಈ ಬಗ್ಗೆ ಪ್ರಾಥಮಿಕ ಅರಿವನ್ನು ನೀಡಿ ನಮಾಝ್ ಮಾಡುವ ಪ್ರಜ್ಞೆಯನ್ನು ಅವರಲ್ಲಿ ಮೂಡಿಸುವುದು […]