ಕೊಳಕು ವಸ್ತ್ರ, ಕೆದರಿದ ಕೂದಲು

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಮ್ಮೆ ನಮ್ಮ ಬಳಿಗೆ ಬಂದಾಗ ಕೂದಲು ಕೆದರಿರುವ ವ್ಯಕ್ತಿಯೊಬ್ಬರನ್ನು ನೋಡಿದರು. ‘ತನ್ನ ಕೂದಲನ್ನು ಒಪ್ಪವಾಗಿಡುವ ಏನೂ ಇವನಿಗೆ ದೊರಕಲಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಬೇರೊಬ್ಬ ವ್ಯಕ್ತಿ ಕೊಳಕು ವಸ್ತ್ರವನ್ನು ಧರಿಸಿರುವುದನ್ನು ಕಂಡರು. ‘ಇವನಿಗೆ ತನ್ನ ವಸ್ತ್ರ ಒಗೆಯಲು ಏನೂ ಸಿಕ್ಕಿಲ್ಲವೇ?’ ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಉಲ್ಲೇಖ-ಅಬೂದಾವೂದ್ ವರದಿ: ಜಾಬಿರ್ ಬಿನ್ ಅಬ್ದುಲ್ಲಾಹ್ ರಳಿಯಲ್ಲಾಹು ಅನ್ಹು ಮನುಷ್ಯನ ಮುಕ್ತ ಮನಸ್ಸು ಬಯಸುವ ಪ್ರಾಕೃತಿಕ ಬೇಡಿಕೆಗಳಿಗೆ ಪೂರಕವಾದ ಧರ್ಮವಾಗಿದೆ ಇಸ್ಲಾಮ್. ಶುಚಿತ್ವ ಈ ಪೈಕಿ ಅತಿಮುಖ್ಯವಾದುದು. […]