ಹುಟ್ಟಿದ ದಿನವೇ ಕೆಲಸಕ್ಕೆ ಹಾಜರಾಗುವ ಜೇಡ!

ಎಂಟು ಗಿಡ್ಡವಾದ ಕಾಲುಗಳು ಮತ್ತು ಆರು ದೊಡ್ಡ ಕಣ್ಣುಗಳಿರುವ ಒಂದು ವಿಚಿತ್ರ ಜೀವಿಯಾಗಿದೆ ಜೇಡ. ಈ ಜೇಡನ ಹೆಸರಲ್ಲಿ ಪವಿತ್ರ ಖುರ್‌ಆನಿನಲ್ಲಿ ಒಂದು ಅಧ್ಯಾಯವೇ ಅವತೀರ್ಣಗೊಂಡಿದೆ. ನೊಣ ಇದರ ಬಹಳ ಅಚ್ಚುಮೆಚ್ಚಿನ ಆಹಾರ.
ಇದು ಹುಟ್ಟುವಾಗ ಒಂದು ಹುಳುವಿನ ರೂಪದಲ್ಲಿರುತ್ತದೆ. ನಂತರ ಎರಡು ಮೂರು ದಿನಗಳಲ್ಲಿ ಸಂಪೂರ್ಣ ಜೇಡನ ಆಕಾರವನ್ನು ಪಡೆಯುತ್ತದೆ. ನೊಣವನ್ನು ಕಂಡರೆ ಇದು ಯಾವುದೇ ಚಲನವಲನವಿಲ್ಲದೆ ಒಂದು ಜಡ ವಸ್ತುವಿನಂತೆ ನಟನೆ ಮಾಡುತ್ತದೆ. ನೊಣ ಹತ್ತಿರ ಸಮೀಪಿಸುತ್ತಿದ್ದಂತೆ ಅದರ ಮೇಲೆ ಹಾರಿ ನಿರಾಯಾಸ ಅದನ್ನು ಹಿಡಿದು ತಿನ್ನುತ್ತದೆ.
ಜೇಡ ಮೊಟ್ಟೆಯೊಡೆದು ಹೊರ ಬಂದು ಕೆಲವೇ ನಿಮಿಷಗಳಲ್ಲಿ ತನ್ನ ಕಸಬನ್ನು ಶುರು ಮಾಡುತ್ತದೆ. ಯಾ ವುದೇ ಪಾಠಬೋಧನೆ, ತರಬೇತಿಯಿಲ್ಲದೆ ಹುಟ್ಟಿದ ಈ ಪುಟ್ಟ ಜೀವಿಗೆ ಈ ತರಬೇತಿ ಎಲ್ಲಿಂದ ದೊರೆಯಿತು!? ಸುಬ್ಹಾನಲ್ಲಾ,.!! ಸೃಷ್ಟಿಕರ್ತನಾದ ಅಲ್ಲಾಹನ ಸೃಷ್ಟಿ ವಿಸ್ಮಯವಿದು. ಈ ಸಣ್ಣ ಜೀವಿಗೆ ವಿರಾಮವಿಲ್ಲದೆ ನಿರಂತರ ಒಂದು ಗಂಟೆಗಿಂತಲೂ ಅಧಿಕ ಸಮಯ ಬಲೆ ನೇಯುವ ಸಾಮರ್ಥ್ಯವೂ ಇದೆ.
ಜೇಡನ ಮನೆಯು ಮನೆಗಳ ಪೈಕಿ ಅತ್ಯಂತ ಬಲಹೀನವಾದುದು ಎಂದಿದೆ ಖುರ್‌ಆನ್. ಜೇಡ ತನ್ನ ದೇಹದಿಂದ ಸ್ರವಿಸುವ ಲೋಳೆಯಂಥ ವಸ್ತುವಿನಿಂದಲೇ ಮನೆಯ ನಿರ್ಮಾಣವಾಗಿರುತ್ತದೆ. ನಿರ್ಮಾಣ ಕಾರ್ಯ ಬಹಳ ಕಲೆ ಕೌಶಲ್ಯ ಮತ್ತು ತಾಂತ್ರಿಕತೆಯಿಂದ  ಕೂಡಿರುತ್ತದೆ. ತ್ರಿಕೋನ ಆಕೃತಿಯಲ್ಲಿರುವ ಈ ಭವನದಲ್ಲಿ ಎರಡು ಸಾಲುಗಳಿವೆ. ಒಂದು ಅಡ್ಡಸಾಲು. ಮತ್ತೊಂದು ಉದ್ದಸಾಲು. ಈ ಎರಡು ಸಾಲು ಗಳು ಕೂಡುವಲ್ಲಿ ಬಲೆಯಲ್ಲಿ ಸಿಕ್ಕು ಹಾಕಿದ ಎರೆಗಳನ್ನು ಬಂಧಿಸಿಡುವ ಒಂದು ಕೇಂದ್ರಸ್ಥಾನ ಕೂಡಾ ಇದೆ.
ಜೇಡವು ಯಾವಾಗಲೂ  ಈ ಕೇಂದ್ರ ಸ್ಥಾನದಲ್ಲೇ ಇರುತ್ತದೆ. ಬಲೆ ಆಕಾರದಲ್ಲಿರುವ ಮನೆಗೆ ಏನಾದರು ಕೀಟಗಳು ಬಿದ್ದರೆ ಕೇಂದ್ರ ಸ್ಥಾನದಲ್ಲೇ ಕುಳಿತು ದೂರದಿಂದಲೇ ಆ ಕೀಟವನ್ನು ಚಲಿಸದಂತೆ ಮಾಡುವ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಕೂಡ ಇದೆ.  ಅಕಸ್ಮಾತ್ ಯಾವುದಾದರೂ ಕೀಟ ಬಲೆಗೆ ಬಿದ್ದರೆ ಬಲೆಯಿಂದಲೇ ಗಂಟು ಹಾಕಿ ನಿಲ್ಲಿಸಲಾಗುತ್ತದೆ. ಬಲೆಯಲ್ಲಿ ಬಿದ್ದ ಕೀಟ ಹೊರ ಹೋಗದೆ ಬಲಹೀನವಾಗುವ ತನಕ ಅಲ್ಲೇ ಇರುತ್ತದೆ. ನಂತರ ಅಲ್ಲಿಂದ ಮಧ್ಯ ಭಾಗದಲ್ಲಿರುವ ಬಂಧೀಖಾನೆಗೆ ರವಾನಿಸಲಾಗುತ್ತದೆ. ಅದಾದ ನಂತರ ಈ ಹೋರಾಟ ಸಮಯದಲ್ಲಿ ಮನೆಗೆ ಉಂಟಾದ ಸಣ್ಣ ಪುಟ್ಟ ಹಾನಿಗಳನ್ನು ರಿಪೇರಿ ಮಾಡಲಾಗುತ್ತದೆ.
ನಮ್ಮ ಮನೆ ಮತ್ತು ಇತರ ವಾಸ ಸ್ಥಳಗಳು ಯಾವಗಲೂ ಜೇಡರ ಬಲೆಯಿಂದ ಸ್ವಚ್ಛವಾಗಿಡಬೇಕೆಂದು ಇಸ್ಲಾಂ ಆಜ್ಞಾಪಿಸುತ್ತದೆ. ಜೇಡನ ಬಲೆಯನ್ನು ಸ್ವಚ್ಛ ಮಾಡದೆ ಹಾಗೆಯೇ ಬಿಡುವ ಮನೆಯಲ್ಲಿ ದಾರಿದ್ರ್ಯ ಮತ್ತು ಬಡತನ ಜಾಸ್ತಿಯಾಗುತ್ತದೆ.
ಕತ್ತಿ, ಕತ್ತರಿ ಮುಂತಾದ ಆಯುಧಗಳಿಂದ ಅಥವಾ ಇನ್ಯಾವುದೇ ಕಾರಣಗಳಿಂದ ಗಾಯಗಳಾಗಿ ನಮ್ಮ ಶರೀರದಿಂದ ರಕ್ತ ಸ್ರಾವವುಂಟಾದರೆ ಆ ಗಾಯದ ಮೇಲೆ ಸ್ವಲ್ಪ ಜೇಡನ ಬಲೆಯನ್ನು ಇಟ್ಟು ಕಟ್ಟುವುದಾದರೆ ರಕ್ತಸ್ರಾವ ತಕ್ಷಣ ನಿಲ್ಲುತ್ತದೆ. ಮಾತ್ರವಲ್ಲ ಈ ಸಂಬಂಧ ಉಂಟಾಗುವ ಎಲ್ಲಾ ಸೋಂಕು ಹರಡುವಿಕೆಯನ್ನೂ ಇದು ತಡೆಯುತ್ತದೆ.
ಬೆಳ್ಳಿಯ ಆಭರಣಗಳನ್ನು ಜೇಡನ ಬಲೆಯಿಂದ ತಿಕ್ಕಿ ತೊಳೆ ಯುವುದರಿಂದ ಆಭರಣಗಳಿಗೆ ಒಳ್ಳೆ ಹೊಳಪು ಬರುತ್ತದೆ.
ಆಗಾಗ್ಗೆ ಮರಳಿ ಬರುವ ಚಳಿ ಜ್ವರ ಇರುವವನಿಗೆ ಪಾಯಖಾನೆಯಲ್ಲಿ ಕಟ್ಟಿದ ಜೇಡನ ಬಲೆಯನ್ನು ತೆಗೆದು ಅವನ ಹಣೆಗೆ ಕಟ್ಟಿದರೆ ಶಮನವಾಗುವುದೆಂದು ಹೇಳಲಾಗುತ್ತದೆ.
ಈ ಜೇಡನು ನಾಲ್ಕು ಸಂದರ್ಭಗಳಲ್ಲಿ ತನ್ನ ಈ ದುರ್ಬಲ ಮನೆ ನಿರ್ಮಾಣ ಮಾಡಿ ಎರಡು ಪ್ರವಾದಿ ಗಳನ್ನು ಮತ್ತು ಇಬ್ಬರು ಸಹಾಬಿಗಳನ್ನು ರಕ್ಷಣೆ ಮಾಡಿದ ಮತ್ತು ಒಬ್ಬರು ತಾಬಿಯೀಯವರ ಮಾನ ಕಾಪಾಡಿದ ಘಟನೆ ಇಸ್ಲಾಮೀ ಚರಿತ್ರೆ ಗ್ರಂಥಗಳಲ್ಲಿ ದಾಖಲಾಗಿದೆ.
1. ಮಕ್ಕಾ ಮುಶ್ರಿಕರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಮತ್ತು ಜತೆಗಿದ್ದ ಅಬೂಬಕರ್ ಸಿದ್ದೀಖ್‌ರವರನ್ನು  ಕೊಲ್ಲಲು ಬಂದಾಗ ಅವರಿಬ್ಬರೂ ಅವಿತು ಕುಳಿತ ಗುಹೆಯ ಬಾಗಿಲು.
2. ಜಾಲೂತನ ಸೈನ್ಯ ಪ್ರವಾದಿ ದಾವೂದ್‌ರವರನ್ನು ಕೊಲ್ಲಲು ಬಂದಾಗ ಅವರು ಅಡಗಿ ಕುಳಿತ ಗುಹೆಯ ದ್ವಾರ.
3. ಖಾಲಿದ್ ಬಿನ್ ಸುಫ್ಯಾನ್ ಅಲ್ ಹುಝಲೀ ಎಂಬ ದುಷ್ಟನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ಕೊಲ್ಲಲು ಸಿರಿಯಾದ “ಅಲ್ ಅರ್ನ” ಎಂಬ ಜಾಗದಲ್ಲಿ ಸೈನ್ಯವನ್ನು ಸಿದ್ಧಪಡಿಸುತ್ತಿದ್ದಾನೆಂದು ತಿಳಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಅವನ ತಲೆ ಕಡಿದು ತರಲು ಅಬ್ದುಲ್ಲಾ ಬಿನ್ ಅನೀಸ್‌ಎಂಬ ಸಹಾಬಿಯನ್ನು ಕಳುಹಿಸಿದ್ದರು. ನಿಶ್ಚಿತ ಸ್ಥಳ ತಲುಪಿದ ಅವರು ಆತನ ತಲೆ ಕಡಿದು ಮರಳಿ ಮದೀನಕ್ಕೆ ಬರುತ್ತಿರುವಾಗ ಅವ ರನ್ನು ಹಿಂಬಾಲಿಸಿ ಬಂದ ಹುಝಲಿ ಯ ಅನುಯಾಯಿಗಳ ಕಣ್ಣು ತಪ್ಪಿ ಸಲು ಅಡಗಿ ಕುಳಿತ ಗುಹೆಯ ಬಾಗಿಲು.
(ಹುಝಲಿಯ ತಲೆ ಕಡಿದು ಕಡಿದ ತಲೆಯೊಂದಿಗೆ ಈ ಸಹಾಬಿಯವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಸನ್ನಿಧಿಗೆ ಬಂದರು. ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರಿಗೆ ತನ್ನ ಊರುಗೋಲನ್ನು ಕಾಣಿಕೆಯಾಗಿ ಕೊಟ್ಟು “ಈ ಊರುಗೋಲು ನಾನು ನಿಮಗೆ ಕೊಡುತ್ತಿದ್ದೇನೆ. ಇದು ನಿಮಗೊಂದು ನೆನಪಿನ ಕಾಣಿಕೆ. ಪರಲೋಕದಲ್ಲಿ ನಿಮ್ಮನ್ನು ಬೇಗನೆ ತಿಳಿಯಲು ಇದು ಒಂದು ಗುರುತು ಕೂಡಾ. ಆದ್ದರಿಂದ ಇದನ್ನು ಜಾಗ್ರತೆಯಿಂದ ಇಟ್ಟುಕೊಳ್ಳಿ”  ಎಂದು ಹೇಳಿದರು. ನಂತರ ಈ ಸ್ವಹಾಬಿ ತನ್ನ ವಫಾತಿನ ತನಕ ಅದನ್ನು ತನ್ನ ಕೈಯಲ್ಲೇ ಇಟ್ಟಿದ್ದರು. ಮಾತ್ರವಲ್ಲ ವಫಾತ್ ಆಗುವಾಗ ಅದನ್ನು ತನ್ನ ಕಫನಿನೊಳಗೆ ಇಟ್ಟು ದಫನ ಮಾಡಲು ವಸಿಯ್ಯತ್ ಮಾಡಿದ್ದರು. ಅವರ ವಸಿಯ್ಯತಿ ನಂತೆ ನಂತರ ದಫನ ಮಾಡಲಾಯ್ತು.)
4. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೊಮ್ಮಗ ಹಝ್ರತ್ “ಝೈದ್ ಬಿನ್ ಅಲೀ ಬಿನ್ ಹುಸೈನ್”ರವರನ್ನು ಅಂದಿನ ಇರಾಕಿನ ದುಷ್ಟ ಆಡಳಿತಗಾರ ಯೂಸುಫ್ ಬಿನ್ ಅಮ್ರ್ ಅಸ್ಸಖಫಿಯ್ಯಿ ಎಂಬಾತ ಕೊಲೆ ಮಾಡಿ ಇರಾಕಿನ ಕೂಫಾ ಪಟ್ಟಣದಲ್ಲಿ ಅವರ ಪವಿತ್ರ ಜನಾಝವನ್ನು ನಗ್ನವಾಗಿ ಶಿಲುಬೆಗೆ ಹತ್ತಿಸಿ ಪ್ರದರ್ಶನಕ್ಕೆ ಇಟ್ಟಿದ್ದ. ನಾಲ್ಕು ವರ್ಷ ಹೀಗೆಯೇ ಇದ್ದ ಅವರ ದೇಹವನ್ನು ಅವರ ಮಾನ ಕಾಪಾ ಡಲು ಬೇಕಾಗಿ ಹಗಲೊತ್ತು ಸಂಪೂ ರ್ಣ ಜೇಡ ಬಲೆ ಮಾಡಿ ಆ ಶರೀರವನ್ನು ಆವರಣ ಮಾಡಿತ್ತು.
ಜೇಡನನ್ನು ತಿನ್ನುವುದು  ಇಸ್ಲಾಮಿನಲ್ಲಿ ನಿಷಿದ್ಧ. ವಿಷಕಾರಕ ಜೇಡವನ್ನು ಕೊಲ್ಲುವದು ಸಮ್ಮತಾರ್ಹವೆಂದು ಕರ್ಮಶಾಸ್ತ್ರದ ವಿದ್ವಾಂಸರು ಅಭಿಪ್ರಾಯ ಪಟ್ಟಿರುವರು.

ಸಂಗ್ರಹ: ಇಮಾಮ್ ದುಮೈರಿ ಯವರ ಹಯಾತುಲ್ ಹಯವಾನ್ ಮತ್ತು ಇಮಾಮ್ ಅಶ್ಬೀಹೀಯವರ ಅಲ್ ಮಸ್ ತತ್ ರಫ್ ಅಲ್ಲಾಮಾ ಬಿನ್ ಸೀರೀನ್‌ರವರ ತಫ್ಸೀರುಲ್ ಅಹ್‌ಲಾಮ್ ಎಂಬ ಗ್ರಂಥ

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors