ನಮಾಝ್‌ನ ಐದು ನಿಬಂಧನೆಗಳಲ್ಲಿ ಒಂದು ಕಿರಿಯ ಹಾಗೂ ಹಿರಿಯ ಅಶುದ್ಧಿಗಳಿಂದ ಮುಕ್ತವಾಗಿರುವುದು.
ಕಿರಿಯ ಅಶುದ್ದಿ
ವುಳೂ ಭಂಗವಾಗುವ ಕಾರಣಗಳು ಉಂಟಾಗಿ ವುಳೂ ಇಲ್ಲದ ಅವಸ್ಥೆಗೆ ಕಿರಿಯ ಅಶುದ್ದಿ ಎನ್ನುತ್ತಾರೆ.
ಹಿರಿಯ ಅಶುದ್ದಿ
ಸ್ನಾನ ಕಡ್ಡಾಯವಾಗಿರುವ ಅವಸ್ಥೆಗೆ ಹಿರಿಯ ಅಶುದ್ಧಿ ಎನ್ನುತ್ತಾರೆ.
ವುಳೂಇಗೆ ಐದು ನಿಬಂಧನೆಗಳು
1. ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿ ಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು.
2. ವುಳೂಇನ ಅಂಗಾಂಗಗಳಲ್ಲಿ ನೀರು ಹರಿಯುವುದು.
3. ನೀರಿನ ಸ್ಪರ್ಶವನ್ನು ತಡೆಯುವ ಯಾವುದೇ ವಸ್ತುಗಳು ಅಂಗಾಂಗಗಳಲ್ಲಿ ಇಲ್ಲದೇ ಇರುವುದು.
4. ನೀರಿನ ಬಣ್ಣ, ವಾಸನೆ, ರುಚಿ ಮುಂತಾದವುಗಳನ್ನು ಬದಲಾವಣೆ ಮಾಡುವ ಯಾವುದೇ ವಸ್ತುಗಳು ಅಂಗಾಂಗಗಳಲ್ಲಿ ಇಲ್ಲದೇ ಇರುವುದು.
5. ಸದಾ ಅಶುದ್ಧಿಯುಳ್ಳವರು, ನಮಾಝ್‌ನ ಸಮಯ ಪ್ರಾರಂಭವಾದ ಬಳಿಕ ವುಳೂ ನಿರ್ವಹಿಸುವುದು.