ಪ್ರಶ್ನೆ : ಹಲವರು ಒಟ್ಟಾಗಿ ಊಟ ಮಾಡುತ್ತಿರುವಾಗ ಚಮಚದಲ್ಲಿ ಸಾರು ತೆಗೆದು ಕುಡಿದ ನಂತರ ಚಮಚವನ್ನು ಸಾರು ಇರುವ ಪಾತ್ರೆಗೆ ಪುನಃ ಹಾಕುವುದು, ಎಡ ಕೈಯಿಂದ ಚಮಚವನ್ನು ತೆಗೆಯುವುದು, ಚಮಚದಲ್ಲಿ ತೆಗೆದು ತಿನ್ನುವುದು, ಊಟಕ್ಕೆ ಮುನ್ನ ಕೈ ತೊಳೆದು ಕರ ವಸ್ತ್ರದಿಂದ ಕೈ ಸಮ ಊಟ ಮಾಡುವುದು ಇವುಗಳ ಕುರಿತು ಇಸ್ಲಾಮಿನ ವಿಧಿಯನ್ನು ತಿಳಿಸುವಿರಾ?
ಉತ್ತರ : ಬಾಯಿಗೆ ಚಮಚವನ್ನು ಹಾಕಿ ಅದನ್ನು ತೊಳೆಯದೆ ಪಾತ್ರೆಗೆ ಹಾಕುವುದು, ಕೈ ತೊಳೆದು ಹೊಲಸು ತುಂಬಿರುವ ಕರ ವಸ್ತ್ರದಿಂದ ಕೈಯನ್ನು ಊಟಕ್ಕೆ ಮುನ್ನ ಒರೆಸುವುದು, ಎಡಗೈಯಿಂದ ಕಾರಣವಿಲ್ಲದೆ ತಿನ್ನುವುದು ಕರಾಹತ್ ಆಗಿರುತ್ತದೆ. ಎಡಗೈಯ ಮೂಲಕ ತಿನ್ನುವುದನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ಪಷ್ಟವಾಗಿ ವಿರೋಧಿಸಿದ್ದಾರೆ. ಎಡಕೈಯನ್ನು ತೊಳೆಯದೆ ಚಮಚವನ್ನು ಮುಟ್ಟುವುದು ಅಸಭ್ಯ. ಒಬ್ಬರಿಗಿಂತ ಹೆಚ್ಚು ಮಂದಿ ಊಟ ಮಾಡುತ್ತಿರುವಾಗ ಇದನ್ನು ಯಾರೂ ಇಷ್ಟಪಡಲಾರರು. ಎಡಗೈಯನ್ನು ಊಟಕ್ಕೆ ಮುನ್ನ ಚೆನ್ನಾಗಿ ತೊಳೆದರೆ ಈ ಸಮಸ್ಯೆ ಇರುವುದಿಲ್ಲ. (ಫತಾವಲ್ಕು ಬ್ರಾ 4:118 ತರ್‌ಶೀಹ್-327) ಊಟಕ್ಕೆ ಮುನ್ನ ಎರಡು ಕೈಗಳನ್ನು ಮತ್ತು ಬಾಯಿಯನ್ನು ತೊಳೆಯು ವುದು ಸುನ್ನತ್ತಿದೆ. ಎಡಕ್ಕೆಯ ಸಹಾಯ ಇಲ್ಲದಿ ದ್ದರೂ ತೊಳೆಯುವುದು ಸುನ್ನತ್ ಇದೆ. (ಫತ್‌ಹುಲ್ ಮುಈನ್)