ಅಜಬ್‌ ತುಂಬಿದ ರಜಜ್

ಅಜಬ್‌ ತುಂಬಿದ ರಜಜ್
ಅಬೂಹಾಮಿದ್‌

» ರಜಬುನ್‌ ಶಹ್‌ರುಲ್ಲಾಹ್‌, ವ ಶಅಬಾನು ಶಹ್‌ರೀ, ವರಮಳಾನು ಶಹ್‌ರು ಉಮ್ಮತ್ನೀ. ರಜಬ್‌ ಅಲ್ಲಾಹನ ತಿಂಗಳು, ಶಅಬಾನು ನನ್ನ ತಿಂಗಳು, ರಮಳಾನ್‌ ನನ್ನ ಉಮ್ಮತ್‌ನದ್ದು. ಹೀಗೊಂದು ಹದೀಸ್‌ ವಚನದ ಪರಂಪರೆಯ ಬಗ್ಗೆ ಹದೀಸ್‌ ವಿದ್ವಾಂಸರು ದುರ್ಬಲವೆಂದು ಅಭಿಪ್ರಾಯ ಹೇಳಿದ್ದರೂ ತಿಂಗಳಿನ ಮಹತ್ವವನ್ನು ತಿಳಿಸಲು ಇದು ಸಾಕೆಂದು ವಿದ್ವತ್‌ ಜಗತ್ತು ಅಂಗೀಕರಿಸುತ್ತದೆ. ಅಲ್ಲಾಹನ ಭವನವೆಂದು ಕಅಬಾಲಯದ ಬಗ್ಗೆ ಹೇಳುವುದು ಅದರ ಗೌರವವನ್ನು ಎತ್ತಿ ತೋರಿಸುವಂತೆ ರಜಬ್‌ ತಿಂಗಳನ್ನು ಶಹ್‌ರುಲ್ಲಾಹ್‌ ಎನ್ನುವುದು ಅದರ ಗೌರವ ಸೂಚಕವಾಗಿದೆ.

» ರಜಬ್‌ ಕೃಷಿಯಂತೆ, ಶಅಬಾನ್‌ ಕೃಷಿಗೆ ನೀರುಣಿಸುವ ತಿಂಗಳು. ರಮಳಾನ್‌ ಕೊಯ್ಯುವ ತಿಂಗಳು – ಹಿಜರಿ 240ರಲ್ಲಿ ವಫಾತ್‌ ಆಗಿರುವ ಪ್ರಸಿದ್ಧ ಸೂಫಿವರ್ಯ ಅಬೂಬಕರ್‌ ಆಲ್‌ ವರ್ರಾಖ್‌ ಅಲ್‌ ಬಲ್‌ಖೀಯವರ ಮಾತಿದು. ರಜಬ್‌ ಮಳೆಗೆ ಮುನ್ನ ಬೀಸುವ ಗಾಳಿ, ಶಅಬಾನ್‌ ಮೋಡ, ರಮಳಾನ್‌ ಮಳೆ. ಹೀಗೂ ಅವರು ವರ್ಣಿಸಿದ್ದಾರೆ.
» ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಆಗಮನದ ಮುನ್ನ ಜಾಹಿಲೀ ಕಾಲದವರು ಗೌರವಿಸುತ್ತಿದ್ದ ತಿಂಗಳು ರಜಬ್‌. ರಜಬ್‌ ಬಂದಾಗ ಯುದ್ಧಾಯುಧಗಳನ್ನು ಬದಿಗಿಟ್ಟು ಸುಮ್ಮನಿರುತ್ತಿದ್ದರು. ಆಯುಧಗಳ ಸದ್ದು ಇವರಿಗೆ ಕೇಳಿಸದ ಕಾರಣ ರಜಬ್‌ಗೆ ಆಲ್‌ ಅಸ್ವಮ್ಮ್‌ (ಕಿವುಡ ತಿಂಗಳು) ಎಂಬ ಹೆಸರಿದೆ.
» ಅಶ್ಶಹ್‌ರುಲ್‌ ಹರಾಮ್‌ ಎಂದು ಇಸ್ಲಾಮ್‌ ಯುದ್ಧ ನಿಷಿದ್ಧಗೊಳಿಸಿದ ನಾಲ್ಕು ತಿಂಗಳುಗಳಲ್ಲಿ ಒಂದು ರಜಬ್‌. ಈ ತಿಂಗಳುಗಳಲ್ಲಿ ಉಪವಾಸ ಸುನ್ನತ್ತಿದ್ದು ಮುಹರ್ರಮ್‌ನ ನಂತರದ ಸ್ನಾನ ರಜಬ್‌ ತಿಂಗಳಿಗಿದೆ.
» ಇಮಾಮ್‌ ಮುಸ್ಲಿಮ್ ರಳಿಯಲ್ಲಾಹು ಅನ್‌ಹು ತಮ್ಮ ಸ್ವಹೀಹ್‌ನಲ್ಲಿ ಉಲ್ಲೇಖಿಸುವ ಹದೀಸ್‌ ಒಂದರಲ್ಲಿ ಇಬ್‌ನು ಅಬ್ಬಾಸ್‌ ರಳಿಯಲ್ಲಾಹು ಅನ್‌ಹುರವರಿಂದ ಹೀಗೆ ವರದಿಯಿದೆ; ‘ಅಲ್ಲಾಹನ ಸಂದೇಶವಾಹಕರು ರಜಬ್‌ ತಿಂಗಳಲ್ಲಿ ಅವರಿನ್ನು ಉಪವಾಸವನ್ನು ಉಪೇಕ್ಲಿಸುವುದಿಲ್ಲ ಎಂದು ನಾವು ಭಾವಿಸುವ ತನಕ ವೃತಾಚರಿಸುತ್ತಿದ್ದರು. ಕೆಲವೊಮ್ಮೆ ಅವರಿನ್ನು ಉಪವಾಸ ಹಿಡಿಯುವುದಿಲ್ಲ ಎಂದು ನಾವು ಭಾವಿಸುವ ತನಕ ಉಪವಾಸವನ್ನು ಉಪೇಕ್ಷಿಸುತ್ತಿದ್ದರು.’ (ಮುಸ್ಲಿಮ್‌ ಹ. ನಂ. 1960) ರಜಬ್‌ ತಿಂಗಳಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ವೃತಾಚರಣೆ ನಡೆಸಿದ್ದಾಗಿ ಮೇಲಿನ ಹದೀಸ್‌ನಿಂದ ಸ್ಪಷ್ಟವಾಗುತ್ತದೆ. ಉಪವಾಸವು ಕಡ್ಡಾಯವೆಂಬ ಭಾವನೆ ಉಂಟಾಗದಿರಲು ಅಥವಾ ಇತರ ಕಾರಣಗಳಿಗಾಗಿ ಅದನ್ನು ಉಪೇಕ್ಷಿಸುತ್ತಿದ್ದರೆಂದೂ ಹದೀಸಿನಲ್ಲಿದೆ.
» ಇಮಾಮ್‌ ಬೈಹಖೀ ರಳಿಯಲ್ಲಾಹು ಅನ್‌ಹುರವರು ತಮ್ಮ ಶುಅಬುಲ್‌ ಈಮಾನ್‌ನಲ್ಲಿ ಹಿಜರಿ 104ರಲ್ಲಿ ವಫಾತ್‌ ಆಗಿದ್ದ, ತಾಬಿಉಗಳಲ್ಲೊಬ್ಬರಾದ
ಅಬೂಖಲಾಬತ್ತ್‌ ರಳಿಯಲ್ಲಾಹು ಅನ್‌ಹುರವರಿಂದ ‘ರಜಬ್‌ನ ಉಪವಾಸಿಗರಿಗೆ ಸ್ವರ್ಗದಲ್ಲೊಂದು ಅರಮನೆಯಿದೆ’ಯೆಂಬ ವಚನವನ್ನು ಉಲ್ಲೇಖಿಸುತ್ತಾರೆ.
ಬಳಿಕ ಇಮಾಮ್‌ ಬೈಹಖೀ ರಳಿಯಲ್ಲಾಹು ಅನ್‌ಹುರವರು ಹೇಳುತ್ತಾರೆ. ಅಬೂ ಖಲಾಬತ್ತ್‌ ರಳಿಯಲ್ಲಾಹು ಅನ್‌ಹುರವರು ನಂತಹವರು ಇದನ್ನು ವಹ್ಯ್‌ ಅವತೀರ್ಣವಾಗುವವರಿಂದ ತಮಗೆ ತಲುಪಿದ ಹೊರತಾಗಿ ಸ್ವಂತವಾಗಿ ಹೇಳಲಾರರು’ (ಬೈಹಖೀ)
» ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ರಜಬ್‌ ತಿಂಗಳಲ್ಲಿ ಸಮೃದ್ಧಿಗಾಗಿ ಪ್ರಾರ್ಥಿಸುತ್ತಿದ್ದರೆಂದು ಹದೀಸಿನಲ್ಲಿ ವರದಿಯಿದೆ. ಇಮಾಮ್‌ ಅಹ್ಮದ್‌ ಬಿನ್‌ ಹಂಬಲ್ ರಳಿಯಲ್ಲಾಹು ಅನ್‌ಹುರವರು ತಮ್ಮ ಮುಸ್ನದ್‌ನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ‘ಅಲ್ಲಾಹುಮ್ಮ ಬಾರಿಕ್‌ಲನಾ ಫೀ ರಜಬಿನ್‌ ವಶಅಬಾನ ವಬಲ್ಲಿಗ್‌ನಾ ರಮಳಾನ್‌’ (ಅಲ್ಲಾಹುವೇ ನಮಗೆ ನೀನು ರಜಬ್‌ ಮತ್ತು ಶಅಬಾನ್‌ ತಿಂಗಳಲ್ಲಿ ಬರಕತ್ತನ್ನು ನೀಡು. ರಮಳಾನ್‌ ತಿಂಗಳನ್ನು ನಮಗೆ ತಲುಪಿಸು) ಎಂದು ಪ್ರಾರ್ಥಿಸುತ್ತಿದ್ದರೆಂಬ ಹದೀಸನ್ನು ವರದಿ ಮಾಡಿದ್ದಾರೆ. (ಹದೀಸ್‌ ನಂ. 2228)
» ಶಾರೀರಿಕ ಆರಾಧನೆಗಳಲ್ಲಿ ಒಂದನೇ ಸ್ಥಾನದಲ್ಲಿ ನಿಲ್ಲುವ ‘ನಮಾಝ್’ನ ಉದ್ಘಾಟನೆಯು ರಜಬ್‌ ತಿಂಗಳಲ್ಲಿ ನಡೆದಿದೆಯೆಂಬ ಮಹತ್ವವು ಈ ತಿಂಗಳಿಗಿದೆ.
» ಇಸ್ರಾಅ ಮಿಅರಾಜ್‌ ಘಟನೆಗೆ ಸಾಕ್ಷಿಯಾದ ಈ ತಿಂಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅತ್ಯುನ್ನತ ಸ್ನಾನಕ್ಕೆರಿಸಿದ ಮಹತ್ವದ ರಾತ್ರಿಯಿರುವ ತಿಂಗಳಾಗಿದೆ. ರಜಬ್‌ ತಿಂಗಳ 27ನೇ ರಾತ್ರಿ ಈ ಅದ್ಭುತ ಘಟನೆಯ ಸ್ಮರಣೆಯತ್ತ ಜಗತ್ತನ್ನು ಕೊಂಡೊಯ್ಯುತ್ತದೆ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors