ನೀರು ಬೆರೆಸಿ ಮದ್ಯಪಾನ

ಪ್ರಶ್ನೆ : ನನ್ನ ಪತಿ ಇತ್ತೀಚೆಗೆ ಅಮಲು ಪದಾರ್ಥ ವಿಕ್ಸಿ ಸೇವಿಸುತ್ತಾರೆ. ಅವರು ಮಗ್ರಿಬ್ ಮತ್ತು ಇಶಾ ನಮಾಜು ಮಾಡುವುದಿಲ್ಲ. ಅದನ್ನು ಖಳಾ ಪೂರೈಸುತ್ತಾರೆ. ವಿಕ್ಸಿಯನ್ನು ನೀರು ಬೆರೆಸಿ ಕುಡಿಯುತ್ತಾರೆ. ಸರಿಯಾಗಿ ಮಾತನಾಡುತ್ತಾರೆ. ಈ ರೀತಿ ಅದನ್ನು ಸೇವಿಸಬಹುದಾ? ಇದರಿಂದ ಅವರಿಗೆ ತೊಂದರೆಗಳಿವೆಯೆ? ತಿಳಿಸುವಿರಾ? ಉತ್ತರ : ಅಮಲು ಪದಾರ್ಥದ ಸೇವನೆ ಸ್ಪಷ್ಟವಾದ ಹರಾಮ್ ಆಗಿದ್ದು ಅತಿ ಕಠಿಣ ಏಳು ಪಾಪಗಳಲ್ಲೊಂದಾಗಿದೆ. ಈ ಬಗ್ಗೆ ಎಲ್ಲ ಪಾಪಗಳ ಕೀಲಿಕೈ ಎಂದು ಹದೀಸ್ ವಚನಗಳು ಎಚ್ಚರಿಕೆ ನೀಡಿದೆ. ಸ್ವತ ಈ […]
ಮಸೀದಿಯಲ್ಲಿ ಜಿನ್ನ್ ಗಳು

ಪ್ರಶ್ನೆ : ಇಲ್ಲೊಬ್ಬರು ಮಸೀದಿಯಲ್ಲಿ ಮಿಂಬರಿನೆದುರು ಮಲಗಿದರೆ ಜಿನ್ನ್ ಜಿನ್ನ್ ಗಳ ತೊಂದರೆಯಿದೆ ಎನ್ನುತ್ತಾರೆ. ಅವರು ಹೇಳುವುದನ್ನು ನಂಬಬಹುದೆ? ಹಾಗೆ ಮಸೀದಿಯಲ್ಲಿ ಮಲಗುವವರಿಗೆ ಜಿನ್ನ್ ತೊಂದರೆ ಕೊಡುವುದು ಎಂಬುದು ಇದೆಯೇ? ಉತ್ತರ : ಯಾವುದೇ ಮಸೀದಿಯಲ್ಲಿ ಮಿಂಬರಿನ ಹತ್ತಿರ ಮಲಗಿದರೆ ಜಿನ್ನ್ ಗಳು ತೊಂದರೆ ನೀಡುತ್ತವೆ ಎಂಬುದು ಆಧಾರ ರಹಿತ ಮಾತು, ಜಿನ್ನ್ ಗಳು ಮನುಷ್ಯರಿಗೆ ಹಲವು ರೀತಿಯಲ್ಲಿ ತೊಂದರೆ ನೀಡಬಹುದು. ಆ ತೊಂದರೆ ಮಸೀದಿಯಲ್ಲಿ ಮಲಗಿದವರಿಗೂ ಇರಬಹುದು. ಮನೆಯಲ್ಲಿ ಮಲಗಿದವರಿಗೂ ಇರಬಹುದು. ಮಸೀದಿಯಲ್ಲಿ ಮಿಂಬರಿನ ಹತ್ತಿರ ಮಲಗಿದವರಿಗೆ ಜಿನ್ನ್ ಗಳು […]
ಎಡಗೈ ಊಟ

ಪ್ರಶ್ನೆ : ಹಲವರು ಒಟ್ಟಾಗಿ ಊಟ ಮಾಡುತ್ತಿರುವಾಗ ಚಮಚದಲ್ಲಿ ಸಾರು ತೆಗೆದು ಕುಡಿದ ನಂತರ ಚಮಚವನ್ನು ಸಾರು ಇರುವ ಪಾತ್ರೆಗೆ ಪುನಃ ಹಾಕುವುದು, ಎಡ ಕೈಯಿಂದ ಚಮಚವನ್ನು ತೆಗೆಯುವುದು, ಚಮಚದಲ್ಲಿ ತೆಗೆದು ತಿನ್ನುವುದು, ಊಟಕ್ಕೆ ಮುನ್ನ ಕೈ ತೊಳೆದು ಕರ ವಸ್ತ್ರದಿಂದ ಕೈ ಸಮ ಊಟ ಮಾಡುವುದು ಇವುಗಳ ಕುರಿತು ಇಸ್ಲಾಮಿನ ವಿಧಿಯನ್ನು ತಿಳಿಸುವಿರಾ? ಉತ್ತರ : ಬಾಯಿಗೆ ಚಮಚವನ್ನು ಹಾಕಿ ಅದನ್ನು ತೊಳೆಯದೆ ಪಾತ್ರೆಗೆ ಹಾಕುವುದು, ಕೈ ತೊಳೆದು ಹೊಲಸು ತುಂಬಿರುವ ಕರ ವಸ್ತ್ರದಿಂದ ಕೈಯನ್ನು ಊಟಕ್ಕೆ ಮುನ್ನ ಒರೆಸುವುದು, ಎಡಗೈಯಿಂದ ಕಾರಣವಿಲ್ಲದೆ ತಿನ್ನುವುದು […]
ನಮಾಜ್‌ನಿಂದ ಕೈಬಿಡಬೇಕೆ?

ಪ್ರಶ್ನೆ : ತಹಜ್ಜುದ್ ನಮಾಝ್ ನಿರ್ವಹಿಸುವಾಗ ಸುಬ್‌ಹಿ ಬಾಂಗ್ ಕೇಳಿಸಿದರೆ ನಮಾಝಿನಿಂದ ಕೈ ಬಿಡಬೇಕೆ? ಅಥವಾ ಪೂರ್ತಿಗೊಳಿಸಬೇಕೆ? ಉತ್ತರ : ತಹಜ್ಜುದ್ ನಮಾಜ್‌ನೆಡೆಯಲ್ಲಿ ಸುಬುಹಿ ಬಾಂಗ್ ಕೇಳಿಸಿದರೆ ನಮಾಝನ್ನು ಅಲ್ಲಿಗೇ ನಿಲ್ಲಿಸಬೇಕಾಗಿಲ್ಲ. ಸುಬುಹಿಯ ಆರಂಭದೊಂದಿಗೆ ತಹಜ್ಜುದ್‌ನ ಸಮಯ ಮುಗಿಯುವುದಾದರೂ ತಹಜ್ಜುದ್ ಎಂಬ ನಿಯ್ಯತ್ ನಿಂದ ಆರಂಭಗೊಂಡ ಪ್ರಸ್ತುತ ನಮಾಝನ್ನು ಮುಂದುವರಿಸಬಹುದು. ಯಾವುದೇ ನಮಾಝನ್ನು ಆರಂಭಿಸಿದ ನಂತರ ಅದರ ಸಮಯವು ಮುಕ್ತಾಯಗೊಂಡಲ್ಲಿ ನಮಾಝ್ನಿಂದ ಕೈ ಬಿಡ ಬೇಕಾಗಿಲ್ಲ. ಫರ್‌ಳ್ ನಮಾಝ್ ಆಗಿದ್ದರೆ ಹಾಗೆ ಕೈ ಬಿಡುವುದು (ನಮಾಝನ್ನು ಅರ್ಧಕ್ಕೆ ನಿಲ್ಲಿಸುವುದು) ನಿಷಿದ್ಧವಾಗಿದೆ.
ಮಯ್ಯಿತ್ ನಮಾಜ್ ಮೊದಲು?

ಪ್ರಶ್ನೆ : ಮಯ್ಯಿತ್ತನ್ನು ಮಸ್ಜಿದ್‌ಗೆ ತಂದಾಗ ಫರ್‌ಳ್ ನಮಾಝನ್ನು ಜಮಾಅತ್‌ನ ಸಮಯವಾಗಿದ್ದರೆ ಯಾವ ನಮಾಝನ್ನು ಮೊದಲು ನಿರ್ವಹಿಸಬೇಕು? ಉತ್ತರ : ಫರ್‌ಳ್ ನಮಾಝ್ ನಂತರ ಮಯ್ಯಿತ್ ನಮಾಝಿಗೆ ಇನ್ನೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ಮಯ್ಯಿತ್ ಗೆ ಏನೂ ಹಾನಿ ಉಂಟಾಗುವ ಭಯ ಇಲ್ಲದಿದ್ದರೆ ಫರ್‌ಳ್ ನಮಾಜ್‌ನ ಜಮಾಅತ್ ಮೊದಲು ನಿರ್ವಹಿಸಿ ನಂತರ ಮಯ್ಯಿತ್ ನಮಾಝ್ ಮಾಡುವುದು ಉತ್ತಮ. ಫರ್‌ಳ್ ನಮಾಝ್ನ ನಂತರ ಇನ್ನೂ ಹೆಚ್ಚು ಜನ ಸೇರುವ ನಿರೀಕ್ಷೆ ಇಲ್ಲದಿದ್ದರೆ ಅಥವಾ ಮುಂದೂಡಿದರೆ ಮಯ್ಯಿತ್ ಹಾನಿಯಾಗುವ ಭಯವಿದ್ದರೆ ಮಯ್ಯಿತ್ […]
‘ಖಳಾ ಜಮಾಅತ್’

ಪ್ರಶ್ನೆ : ‘ಖಳಾ‘ ಆದ ಫರ್‌ಳ್ ನಮಾಜನ್ನು ಜಮಾಅತ್ ಆಗಿ ನಿರ್ವಹಿಸಬಹುದೆ? ಉತ್ತರ : ಇಮಾಂ ಮತ್ತು ಮಅಮೂಮರಿಬ್ಬರೂ ‘ಖಳಾ‘ಆಗಿ ನಿರ್ವಹಿಸುವವರಾಗಿದ್ದು ಅವರಿಬ್ಬರ ನಮಾಜ್ ಒಂದೇ ಆಗಿದ್ದರೆ (ಉದಾ: ಇಬ್ಬರದೂ ಅಸರ್) ಜಮಾಅತ್ ಸುನ್ನತ್ತಿದೆ. ಒಬ್ಬರದು ‘ಖಳಾ, ಇನ್ನೊಬ್ಬರದ್ದು ‘ಅದಾ‘ ಅಥವಾ ಇಬ್ಬರ ನಮಾಜ್ ವ್ಯತ್ಯಾಸವು ಳ್ಳದ್ದಾದಲ್ಲಿ ಜಮಾಅತ್ ಸುನ್ನತ್ತಿಲ್ಲ. (ತುಹ್ಫಾ)
ಹಲ್ಲಿನೆಡೆಯಿಂದ ರಕ್ತ

ಪ್ರಶ್ನೆ : ನಮಾಝ್ ಮಾಡುವಾಗ ಹಲ್ಲುಗಳ ಸಂದಿನಿಂದ ರಕ್ತ ಒಸರಿದರೆ ನಮಾಝ್ ಗೆ ತೊಂದರೆ ಇದೆಯೆ? ಉತ್ತರ : ರಕ್ತ ಬರುವುದರಿಂದ ತೊಂದರೆ ಇಲ್ಲ, ಆದರೆ ರಕ್ತ ಬೆರೆತ ಉಗುಳನ್ನು ನುಂಗಿದರೆ ನಮಾಝ್ ಅಸಿಂಧುವಾಗುತ್ತದೆ. ನುಂಗದೆ ಬಾಯಲ್ಲಿರುವುದರಿಂದ ತೊಂದರೆ ಇಲ್ಲ.