ಪ್ರ : ಎರಡು ನಮಾಜ್‌ಗಳನ್ನು ಜಮ್‌ಅ ಮಾಡಲು ಉದ್ದೇಶಿಸಿದ್ದು ಒಂದನೇ ನಮಾಜ್ ಮುಗಿದಾಗ ವುಳೂ ಭಂಗವಾದರೆ ವುಳೂ ನಿರ್ವಹಿಸಿ ಜಮ್‌ಅ ಮುಂದುವರಿಸ ಬಹುದೇ ಅಥವಾ ನಿರಂತರತೆ ನಷ್ಟವಾದ ಕಾರಣ ಎರಡನೇ ನಮಾಝನ್ನು ಅದರ ಸಮ ಯದಲ್ಲೇ ನಿರ್ವಹಿಸಬೇಕೇ?
ಉ : ತಖ್‌ದೀಮಿನ ಜಮ್‌ಅ ಆಗಿ ನಮಾಜ್ ಮಾಡುವಾಗ ಎರಡು ನಮಾಝ್‌ಗಳ ನಡುವೆ ನಿರಂತರತೆಯು ನಿಬಂಧನೆಯಾಗಿದೆ. ಆದರೆ ಒಂದು ನಮಾಝ್ ಮುಗಿದು ವುಳೂ ಭಂಗವಾದ ಕಾರಣ ನಡುವೆ ವುಳೂ ಮಾಡುವುದರಿಂದ ನಿರಂತರತೆ ಮುರಿಯುವುದಿಲ್ಲ. ಎರಡನೇ ನಮಾಝನ್ನು ಸೇರಿಸಿ ಜಮ್‌ಅ ಆಗಿ ನಮಾಜ್ ಮುಂದುವರಿಸಬಹುದು. (ಮುಗ್‌ನೀ, ನಿಹಾಯ:)