ಪ್ರ: ನಮಾಝಿನ ನಿಯ್ಯತ್ತನ್ನು ನಡೆದುಕೊಂಡು ಬರುವಾಗ ಮಾಡಬಹುದೆ? ನಿಂತುಕೊಂಡೇ ಮಾಡಬೇಕೆಂದಿದೆಯೆ?
ಉ: ನಿಂತುಕೊಂಡೇ ಆಗಬೇಕು. ನಿಶ್ಚಲ ಸ್ಥಿತಿಯಲ್ಲೇ ನಮಾಜಿನ ನಿಯ್ಯತ್ ಮಾಡಬೇಕೆನ್ನುವುದು ನಿಯ್ಯತ್‌ನ ಶರ್ತಗಳಲ್ಲೊಂದಾಗಿದೆ. ನಮಾಜಿನ ಫರ್‌ಗಳಲ್ಲಿ ನಿಯ್ಯತ್’ ಮೊದಲನೆಯದ್ದಾಗಿದ್ದು ನಮಾಜಿಗಾಗಿ ’ಸಾಧ್ಯವಿರುವವರು ನಿಲ್ಲುವುದು’ ಮೂರನೇ ಫರ್ಳ್ ಆಗಿದೆ. ಆದರೂ ನಿಯ್ಯತನ್ನು ಮೊದಲು ಮಾಡಿ ನಂತರ ನಿಲ್ಲುವಂತಿಲ್ಲ.’ನಿಲ್ಲುವಿಕೆ’ಯನ್ನು ಫರ್ಳ್ ಆಗಿ ಗಣಿಸಿರುವುದು ಫರ್ಳ್ ನಮಾಜ್‌ಗೆ ಮಾತ್ರ. ಸುನ್ನತ್ ನಮಾಜ್‌ಗೆ ಇದು ಬಾಧಕವಲ್ಲ, ಸುನ್ನತ್ ನಮಾಜನ್ನು ಕುಳಿತೂ ನಿರ್ವಹಿಸಬಹುದಾದುದರಿಂದ ಇದಕ್ಕಾಗಿ ನಿಯ್ಯತ್ತನ್ನು ಕುಳಿತುಕೊಂಡು ಮಾಡಬಹುದು. ನಿಯ್ಯತ್ ಮತ್ತು ತಕ್ಬೀರತುಲ್ ಇಹ್ರಾಂಗಳು ಫರ್ಳ್ ಮತ್ತು ಸುನ್ನತ್ ನಮಾಜ್‌ಗಳೆರಡಕ್ಕೂ ಬಾಧಕವಾಗುವುದರಿಂದ ಅವುಗಳನ್ನು ಮೊದಲು ಗಣಿಸಿ ನಂತರ ನಿಲ್ಲುವುದನ್ನು ಫರ್ಳ್ ನಮಾಝಿನ ತೃತೀಯ ಫರ್ಳ್ ಆಗಿ ಗಣಿಸಲಾಗಿದೆ.