ಪ್ರಶ್ನೆ: ರಮಳಾನಿನಲ್ಲಿ ಅನಾರೋಗ್ಯ ಕಾರಣದಿಂದ ಉಪವಾಸ ಹಿಡಿಯಲಾಗಲಿಲ್ಲ. ಈಗ ರೋಗವಾಸಿಯಾಗಿದೆ. ನನಗೀಗ ವೃದ್ಧಾಪ್ಯ. ಉಪವಾಸ ಹಿಡಿಯಲು ಹೆಚ್ಚಿನ ಆರೋಗ್ಯವೂ ಇಲ್ಲ. ಹಾಗಿರುವಾಗ ನಾನು ಉಪವಾಸ ಖಳಾ ಸಂದಾಯ ಮಾಡಬೇಕೆ? ಖಳಾ ಸಂದಾಯ ಮಾಡುವುದಿದ್ದರೂ (ಪ್ರಾಯಶ್ಚಿತ್ತ) ನೀಡಬೇಕೆ? ನನ್ನ ಪರವಾಗಿ ನನ್ನ ಮಕ್ಕಳು ಉಪವಾಸ ಹಿಡಿದರೆ ಆಗುತ್ತದೆಯೆ? ವಿವರಿಸುವಿರಾ?
ಉತ್ತರ: ರೋಗ ಕಾರಣದಿಂದ ಖಳಾ ಆದ ಉಪವಾಸವನ್ನು ನಂತರ ಖಳಾ ಪೂರೈಸುವುದು ಕಡ್ಡಾಯ. ವೃದ್ಧಾಪ್ಯದ ಸಹಜ ನಿಶ್ಯಕ್ತಿ ಕಾರಣ ಉಪವಾಸವು ತೀರಾ ಅಸಾಧ್ಯವೆಂಬ ಹಂತಕ್ಕೆ ತಲುಪಿದ್ದಲ್ಲಿ ಖಳಾ ಪೂರೈಕೆ ಕಡ್ಡಾಯವಿಲ್ಲ. ವೃದ್ಧಾಪ್ಯ ಕಾರಣ ಉಪವಾಸ ಹಿಡಿಯಲು ತೀರಾ ಸಾಧ್ಯವಾಗದಂತಹ ಅವಸ್ಥೆಯಿದ್ದು ಆ ಕಾರಣದಿಂದ ಉಪವಾಸವನ್ನು ಉಪೇಕ್ಷಿಸಿದ್ದಲ್ಲಿ ಅದನ್ನು ಖಳಾ ಸಂದಾಯ ಮಾಡಬೇಕಿಲ್ಲ. ಆದರೆ ಒಂದು ಉಪವಾಸಕ್ಕೆ ಒಂದು ಮುದ್ದ್ (ಸುಮಾರು 650 ಗ್ರಾಂ) ಧಾನ್ಯದಂತೆ ಫಿದ್‌ಯಾ ನೀಡುವುದು ಕಡ್ಡಾಯವಿದೆ. ವೃದ್ಧಾಪ್ಯವು ನಿಮ್ಮ ಉವವಾಸಕ್ಕೆ ಅಡ್ಡಿಯಲ್ಲದೆ ಇದ್ದು, ಯಾವುದಾದರೂ ರೋಗ ಕಾರಣದಿಂದ ನೀವು ಉಪವಾಸ ಉಪೇಕ್ಷಿಸಿದಲ್ಲಿ ನಂತರ ಖಳಾ ಸಂದಾಯ ಮಾಡುವ ಆರೋಗ್ಯ ನಿಮಗಿದ್ದಲ್ಲಿ ಬಳಾ ಸಂದಾಯ ಮಾಡಬೇಕು, ಹಾಗಿದಲ್ಲಿ ಅಲ್ಲಿ ಫಿದ್‌ಯಾ ಕೊಡಬೇಕಿಲ್ಲ. ನಿಮ್ಮ ಬದಲಿಗೆ ಇತರರು ಉಪವಾಸ ಆಚರಿಸುವುದು ಸಿಂಧುವಾಗುವುದಿಲ್ಲ.