ಪ್ರಶ್ನೆ: ನಮಾಜಿನಲ್ಲಿ ಕಾಲಿನ ಮಣಿಗಂಟಿನ ಕೆಳಗೆ ವಸ್ತ್ರವನ್ನು ಇಳಿ ಬಿಡುವುದರ ವಿಧಿ ಏನು? ಹೀಗೆ ವಸ್ತ್ರವು ಕೆಳಗಿದ್ದರೆ ನಮಾಜ್ ಸಿಂಧುವೆ?
ಉತ್ತರ: ನಮಾಜಿನಲ್ಲಿ ಕಾಲಿನ ಮಣಿಗಂಟಿಗಿಂತ ಕೆಳಗೆ ವಸ್ತ್ರವು ಇಳಿದಿದ್ದರೆ ನಮಾಜ್‌ನ ಸಿಂದುತ್ವಕ್ಕೆ ಅಡ್ಡಿ ಇಲ್ಲ. ಆದರೆ ನಮಾಜಿನಲ್ಲಾಗಲೀ ಇತರ ವೇಳೆಯಲ್ಲಾಗಲೀ ಕಾಲಿನ ಮಣಿಗಂಟಿಗಿಂತ ಪುರುಷರು ತಮ್ಮ ವಸ್ತ್ರವನ್ನು ಕೆಳಗೆ ಇಳಿ ಬಿಡುವುದು ಕರಾಹತ್ ಆಗಿದೆ. ಅಹಂಭಾವದಿಂದ ಹೀಗೆ ಧರಿಸುವುದಾದರೆ ಅದು ಹರಾಮ್ ಆಗಿದೆ. ತುಪ್ಪ 3/55.