ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು
ಎಂ.ಎ.ಇಸ್ಮಾಈಲ್ ಸಅದಿ ಮಾಚಾರ್
ಇಸ್ಲಾಮ್ ಅಲ್ಲಾಹನ ಬಳಿ ಸ್ವೀಕಾರಾರ್ಹ ಧರ್ಮವೆಂದು ಪರಿಶುದ್ಧ ಖುರ್‌ಆನಿನಲ್ಲಿದೆ. ಸಾರ್ವಕಾಲಿಕ ಸಂದೇಶಗಳು ಅದರಲ್ಲಿ ಅಡಗಿವೆ. ಇವೆಲ್ಲವನ್ನೂ ಕಲಿಸಿಕೊಟ್ಟದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ. ಅವರ ಉತ್ತಮ ಗುಣ ನಡತೆಯನ್ನು ಕಂಡು ಲಕ್ಷಾಂತರ ಜನರು ಇಸ್ಲಾಮ್ ಧರ್ಮಕ್ಕೆ ಆಕರ್ಷಿತರಾದರು. ಈ ಧರ್ಮದ ಸೌಂದರ್ಯ, ಸೌರಭ್ಯವನ್ನು ಮನಗಂಡು ಇಂದೂ ಕೂಡಾ ಯೂರೋಪ್ ನಂತಹ ಶ್ರೀಮಂತ ರಾಷ್ಟ್ರಗಳ ಜನರು, ಗಣ್ಯ ವ್ಯಕ್ತಿಗಳು ಇಸ್ಲಾಮ್ ಧರ್ಮ ಸ್ವೀಕರಿಸುತ್ತಿದ್ದಾರೆ.
ಇಸ್ಲಾಮಿನ ಪೂರ್ವ ಕಾಲ ಸುವರ್ಣ ಯುಗದ ಕುರಿತು ನಾವು ಅಧ್ಯಯನ ನಡೆಸಬೇಕಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಿಂದ ಹಿಡಿದು ನಂತರ ಬಂದ ಖಿಲಾಫಾತ್ ಇವೆಲ್ಲವೂ ಈ ಜಗತ್ತಿಗೆ ನೀಡಿದ ಕೊಡುಗೆ, ನಾಗರಿಕತೆ, ಶಿಸ್ತು ಇವೆಲ್ಲವೂ ಚರಿತ್ರೆಯಲ್ಲಿ ಅತುಲ್ಯವಾದ ಅನುಪಮ ಸೇವೆಯಾಗಿದೆ.
ಪವಿತ್ರ ಧರ್ಮದ ಈ ರೀತಿಯ ಬೆಳವಣಿಗೆಯನ್ನು ಕಂಡು ಮಸಿ ಬಳಿಯಲು ಮೋಡರ್ನ್ ಯುಗದಲ್ಲಿ ಹಲವರಿಂದ ಅನೇಕ ಕುತಂತ್ರಗಳು ನಡೆಯುತ್ತಿವೆ. ಇಂದು ಕಾಣುತ್ತಿರುವ ಇಸ್ಲಾಮೋಫೋಬಿಯಾ ಅದರಲ್ಲೊಂದು. ಇಸ್ಲಾಮ್ ಧರ್ಮವನ್ನು ನಾಶಪಡಿಸಲಿಕ್ಕಾಗಿ ಇಸ್ಲಾಮ್ ಧರ್ಮವೆಂದರೆ ಭಯವನ್ನು ಉತ್ಪಾದಿಸುವ ಭಯೋತ್ಪಾದಕ ಧರ್ಮ ಎಂದು ಪ್ರಚಾರಪಡಿಸುವುದು ಇದರ ಹಿಂದಿನ ಗುರಿ. ಮುಸ್ಲಿಮ್ ಹೆಸರುಳ್ಳ ವ್ಯಕ್ತಿಗಳನ್ನು ಹಿಡಿದು ಅವರು ಆಟವಾಡುತ್ತಿದ್ದಾರೆ. ಇಸ್ಲಾಮನ್ನು ವಿರೋಧಿಸಲು ಮುಸ್ಲಿಂ ನಾಮವಿರುವ ಕೆಲವರನ್ನು ಪ್ರತಿಷ್ಠಾಪನೆ ಮಾಡುವುದು ಶತ್ರುಗಳು ಇಂದಿಗೂ ನಡೆಸಿಕೊಂಡು ಬರುವ ಉಪಾಯವಾಗಿದೆ. ಇಂದೂ ಕೂಡ ISIS ಎಂಬ ಹೆಸರಿನ ಮೂಲಕ ಇಸ್ಲಾಮಿಕ್ ಉಗ್ರವಾದ ಎಂಬ ಹೆಸರಿನೊಂದಿಗೆ ಅಬೂಬಕರುಲ್ ಬಗ್ದಾದಿ ಮುಂತಾದವರನ್ನು ತೋರಿಸಿ ಜಗತ್ತಿಗೆ ಇವು ಮಾರಕವೆಂದು ಬಗೆಯುತ್ತಾ ಇಸ್ಲಾಮ್ ಧರ್ಮವನ್ನು ನಾಶಪಡಿಸುವ ಶ್ರಮಗಳು ನಡೆಯುತ್ತಿದೆ.
ಮುಸ್ಲಿಮ್ ಹೆಸರುಳ್ಳ ವ್ಯಕ್ತಿಗಳನ್ನು ಬಂಡವಾಳವಾಗಿಸಿ ಅವರ ತಲೆಗೆ ಏನೆಲ್ಲಾ ತುಂಬಿಸಿ ಅವರನ್ನೇ ಮುಸ್ಲಿಮ್ ನಾಯಕರೆಂದು ಪ್ರಚಾರಪಡಿಸಿ ಅವರ ಮೂಲಕ ಇಸ್ಲಾಮನ್ನು ಇಲ್ಲವಾಗಿಸುವ ವಿಫಲ ಪ್ರಯತ್ನಗಳು ಇಂದಿಗೂ ನಡೆಯುತ್ತಿದೆ.
ಒಟ್ಟಿನಲ್ಲಿ ಇಸ್ಲಾಮ್ ಧರ್ಮದ ಕುರಿತು ತಪ್ಪು ಕಲ್ಪನೆಯನ್ನು ಜನರಲ್ಲಿ ಮೂಡಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಾ ಬರುತ್ತಿದೆ. ಮುಸ್ಲಿಮರ ಒಳ್ಳೆಯ ನಾಗರಿಕತೆ, ಕಟ್ಟುಪಾಡು, ಶಿಸ್ತಿನ ಜೀವನದ ನಡುವೆ ಅನಾಗರಿಕತೆ, ಅನೈತಿಕತೆಯನ್ನು ತುಂಬಿಸಿ ಈ ಒಳ್ಳೆಯ ನಾಗರಿಕತೆಗೆ ಒಡಕುಂಟುಮಾಡುವ ಕೆಲಸಗಳು ಜಗತ್ತಿನಲ್ಲಾಗುತ್ತಿದೆ.
ಒಟ್ಟಿನಲ್ಲಿ ಇಸ್ಲಾಮಿನ ಕುರಿತು ತಪ್ಪುಕಲ್ಪನೆ ಯಾರೋ ಸೃಷ್ಟಿಮಾಡುವಾಗ ಅದರ ನೈಜವಾದ ಸೌಂದರ್ಯ ಏನೆಂಬುವುದನ್ನು ಜಗತ್ತಿನ ಮುಂದೆ ತೋರಿಸಿಕೊಡುವುದು ಮುಸ್ಲಿಮರಾದ ನಮ್ಮ ಕರ್ತವ್ಯವಾಗಿದೆ. ಭಾರತದಂತಹ ಸೆಕ್ಯೂಲರ್ ದೇಶದಲ್ಲಿ ಜೀವನ ನಡೆಸುವಾಗ ಮುಸ್ಲಿಮರಾದ ನಾವು ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಕೊಡುತ್ತಿದ್ದೇವೆ. ಮಾನವೀಯತೆಯನ್ನು ಕಲಿಸಿಕೊಡುವ ವಕ್ತಾರರೆಂದು ಜನರಿಗೆ ತಿಳಿಸಿ ಕೊಡುವುದು ಮುಸ್ಲಿಮರಾದ ನಮ್ಮ ಕರ್ತವ್ಯವಾಗಿದೆ. ನೈಜ ಇಸ್ಲಾಮಿಕ್ ಚರಿತ್ರೆಯನ್ನು, ಇತಿಹಾಸವನ್ನು ಮನದಟ್ಟು ಮಾಡಿಕೊಡುವುದು ನಮ್ಮ ಹೊಣೆಗಾರಿಕೆಯಾಗಿದೆ.
ಇಸ್ಲಾಮ್ ಎಂಬುದು ಮಾನವೀಯತೆಯ, ಶೈಕ್ಷಣಿಕ ಕ್ರಾಂತಿಯನ್ನು ಜಗತ್ತಿನಲ್ಲಿ ಸೃಷ್ಟಿಸಿದ ಧರ್ಮವಾಗಿದೆ ಎಂಬುದನ್ನು ನಮ್ಮನ್ನು ದೂಷಿಸುವ ಮಂದಿಗೆ ನಮ್ಮ ಜೀವನದ ಮೂಲಕವೇ ತೋರಿಸಿ ಕೊಡಬೇಕಿದೆ.
ಇಸ್ಲಾಮಿನ ಸೌರಭ್ಯ ತಿಳಿಯಬೇಕಾದರೆ ಜಾಹಿಲಿಯ್ಯಾ ಕಾಲವನ್ನು ಅಧ್ಯಯನ ನಡೆಸಬೇಕು. ಒಬ್ಬನಿಗೆ ಜಾಹಿಲಿಯ್ಯಾ (Dark Age) ಕಾಲದ ಕುರಿತು ಅರಿಯಲು ಸಾಧ್ಯವಾಗದಿದ್ದರೆ ಅವನಿಗೆ ಇಸ್ಲಾಮ್ ಏನೆಂಬುವುದನ್ನು ಅರಿಯಲು ಸಾಧ್ಯವಾಗಲ್ಲ. ಒಮ್ಮೆಯೂ ಅರಬ್ ಜನತೆಯನ್ನು ತಿದ್ದಲು, ಸರಿದಾರಿಗೆ ಕೊಂಡೊಯ್ಯಲು ಸಾಧ್ಯವಿಲ್ಲವೆಂದು ಇತಿಹಾಸಕಾರರು ವಿಧಿ ಬರೆದ ಜನತೆಯನ್ನು ಇಸ್ಲಾಮ್ ಧರ್ಮವು ಯಾವ ರೀತಿಯಾಗಿ ಬದಲಾವಣೆಯನ್ನುಂಟು ಮಾಡಿತು ಎಂಬುವುದನ್ನು ಮನಗಾಣಬೇಕು. ಅರಬ್ ಲೋಕಕ್ಕೆ ಅತಿಥಿಯಾಗಿ ಬಂದ ಇಸ್ಲಾಮ್ ಹಲವು ಬದಲಾವಣೆಯನ್ನಾಗಿದೆ ಇಡೀ ಪ್ರಪಂಚಕ್ಕೆ ಕಲಿಸಿಕೊಟ್ಟದ್ದು. ಆ ಡಾರ್ಕೇಜನ್ನು ಕಲಿಯುವ ಸಂದರ್ಭದಲ್ಲಾಗಿದೆ ಇಸ್ಲಾಮಿನ ಸೌಂದರ್ಯವನ್ನು ತಿಳಿಯುವುದು. ರಾತ್ರಿಯ ಬಗ್ಗೆ ತಿಳಿಯ ಬೇಕಾದರೆ ಹಗಲು ಏನೆಂಬುವುದನ್ನು ಮೊದಲು ಅರಿತಿರಬೇಕು. ಅದೇ ರೀತಿ ಕತ್ತಲು ಏನೆಂಬುವುದನ್ನು ಅರಿಯಬೇಕಾದರೆ ಬೆಳಕೆಂದರೆ ಏನೆಂಬ ಜ್ಞಾನವೂ ಬೇಕಾಗಿರುತ್ತದೆ. ಉದಾಹರಣೆಗೆ; ಒಮ್ಮೆ ಕಡಲಿನಲ್ಲಿ ಎರಡು ಮೀನಿನ ನಡುವೆ ನೀರು ಅಂದರೇನು? ಎಂಬ ವಿಷಯದಲ್ಲಿ ತರ್ಕವುಂಟಾಯಿತು. ಹೀಗೆ ಒಂದು ಮೀನನ್ನು ನೀರಿನ ಹೊರ ಗಿಡಲಾಯಿತು. ಮೀನು ತಕ್ಷಣ ನೀರಿಗೆ ಹಾರಿ ಹೇಳಿತು: ನೀರೆಂದರೆ ಏನೆಂದು ಈಗ ತಿಳಿಯಿತು. ಅಷ್ಟೂ ವರ್ಷ ನೀರಿನಲ್ಲಿದ್ದರೂ ಅದಕ್ಕೆ ನೀರಿನ ಮಹತ್ವ ಏನೆಂದು ತಿಳಿದಿರಲಿಲ್ಲ. ನೀರಿನಿಂದ ಹೊರ ಹಾಕಲ್ಪಟ್ಟಾಗ ನೀರಿನ ಮಹತ್ವ ತಿಳಿ ಯಿತು. ಈ ರೀತಿಯಾಗಿದೆ ಇಸ್ಲಾ ಮ್ ಏನೆಂಬುವುದನ್ನು ತಿಳಿಯಲು ಅಂಧಕಾರದ ಬಗ್ಗೆ ಕಲಿಯಬೇಕು. ಇಸ್ಲಾಮ್ ಬರುವ ಮೊದಲಿನ ಯುಗ ಹೇಗಿತ್ತು ಎಂಬುದನ್ನು ಕಲಿಯುವಾಗವಾಗಿದೆ ಇಸ್ಲಾಮ್ ಏನೆಂಬುವುದನ್ನು ಅರಿಯಲು ಸಾಧ್ಯವಾಗುವುದು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಅಂಧಕಾರ ಯುಗದ ಸಮುದಾಯವನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ನಾಗರಿಕತೆಗೆ ಜನ್ಮವನ್ನು ನೀಡಿದ್ದಾರಲ್ಲವೇ ಇದಾಗಿದೆ ದೊಡ್ಡ ಅದ್ಭುತ ಎಂದು ನೆಹರೂರಂತಹ ವ್ಯಕ್ತಿಗಳು ಅಚ್ಚರಿಗೊಳ್ಳುವುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಜೀವನದಲ್ಲಿ ಮೂವತ್ತು ಸಾವಿರದಷ್ಟು ಮುಅಜಿಝತ್ (ಅದ್ಬುತ ಪವಾಡ)ಗಳಿವೆ. ಅದರಲ್ಲಿ ದೊಡ್ಡ ಪವಾಡವಾಗಿದೆ ಖುರ್‌ಆನ್. ಆದರೆ ಅಮುಸ್ಲಿಮ್ ವ್ಯಕ್ತಿತ್ವಗಳು ಹೇಳುವುದೇನೆಂದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನದಲ್ಲಿ ನಮಗೆ ಕಾಣುವ ದೊಡ್ಡ ಅದ್ಬುತವೆಂದರೆ ತಿದ್ದಲು ಸಾಧ್ಯವಿಲ್ಲವೆಂದು ಚರಿತ್ರೆಗಾರರು ವಿಧಿ ಬರೆದ ಸಮುದಾಯವಿದೆಯಲ್ವಾ… ಆ ಸಮುದಾಯವನ್ನು ತಮ್ಮ ಇಪ್ಪತ್ತ ಮೂರು ವರ್ಷದ ಬೋಧನೆಯ ಮೂಲಕ ಅವರು ಬದಲಾವಣೆ ಮಾಡಿದ್ದಾರಲ್ಲವೇ ಅದುವೇ ದೊಡ್ಡ ಅದ್ಭುತ. ಇದಕ್ಕಿಂತ ದೊಡ್ಡ ಪವಾಡವನ್ನು ಕಾಣಲು ಸಾಧ್ಯವಿಲ್ಲ ಎಂದು ಗಣ್ಯರು ನುಡಿಯುತ್ತಾರೆ. ಅರಬಿಗಳ ಮಧ್ಯೆ ಪರಸ್ಪರ ಯುದ್ಧ, ಕಳ್ಳತನ, ವ್ಯಭಿಚಾರ, ದೌರ್ಜನ್ಯಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ಮರು ಬದಲಾವಣೆಗೆ ತರಲು ಒಬ್ಬ ಮನುಷ್ಯನಿಂದ ಸಾಧ್ಯವಿಲ್ಲವೆಂದು ಬರೆದ ಇತಿಹಾಸವೇ ಸುಳ್ಳಾಗುವಂತೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಆಗ ಮನದಿಂದ ಅದು ಸಾಧ್ಯವಾಯಿತು.
ಪರಸ್ಪರ ಕಚ್ಚಾಡುತ್ತಿದ್ದ ಜನರು ಸ್ನೇಹದಿಂದ ಒಗ್ಗೂಡಿದರು. ಕರಿಯರು-ಬಿಳಿಯರು, ಮೇಲು-ಕೀಳು ಎಂಬ ಭಾವನೆಗಳು ದೂರವಾಗಿ ನಾವೆಲ್ಲರೂ ಒಂದೇ ಎಂಬ ಧ್ಯೇಯದಡಿ ಸಹೋದರತೆಯಿಂದ ಜೀವಿಸಲು ಶುರುವಿಟ್ಟರು. ಏಕ ಇಲಾಹನ ಆರಾಧನೆ, ಏಕ ಗ್ರಂಥ, ಪರಸ್ಪರ ಕಂಡರೆ ಶಾಂತಿಯ ಸಂದೇಶ ರವಾನೆ, ಹೀಗೆ ಬದಲಾವಣೆಯ ಬಿರುಗಾಳಿಯುಂಟಾಯಿತು. ಅವರ ಸ್ನೇಹ ಎಷ್ಟರವರೆಗೆ ಗಟ್ಟಿಯಾಯಿತೆಂದರೆ ಅವರು ಒಂದು ಶರೀರದಂತೆ, ಒಂದೇ ಗೋಡೆಯಂತಾದರು. ತನ್ನ ಸಹೋದರನೊಬ್ಬನಿಗೆ ನೋವುಂಟಾದರೆ ಪರಸ್ಪರ ಸ್ಪಂದಿಸುವ, ಆ ನೋವು ತನಗಾಗಿದೆ ಎಂಬಂತೆ ಜೀವಿಸುವ ಮಟ್ಟಿಗೆ ಜನರು ಬದಲಾದರು. ಈ ಬದದಲಾವಣೆಯಾಗಿದೆ ನಮ್ಮನ್ನು ಅಚ್ಚರಿಪಡಿಸಿದ, ಅತ್ಯುನ್ನತ ಮುಅಜಿಝತ್ ಎಂದು ಚರಿತ್ರೆಗಾರರು ಬರೆದಿಟ್ಟಿದ್ದಾರೆ. ಯಾರಿಗೂ ನಿಷೇಧ ಮಾಡಲು ಸಾಧ್ಯವಾಗದ ಚರಿತ್ರೆಯಿದು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಸ್ಲಾಮ್ ಬರುವುದಕ್ಕಿಂತ ಮುಂಚೆ ಇರುವ ಸಂಸ್ಕಾರವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿದರು. ಜಗತ್ತು ತಪ್ಪು ಕಲ್ಪನೆಯನ್ನು ಬಿತ್ತನೆ ಮಾಡುತ್ತಿರುವಾಗ ಇಸ್ಲಾಮಿನ ಆರಂಭ ಹೇಗಿತ್ತು? ಅದನ್ನು ಹೇಗೆ ಬದಲಾವಣೆ ಮಾಡಲಾಯಿತು? ಇವೆಲ್ಲವನ್ನೂ ಕಲಿಯುವಾಗ ನಮಗೆ ಇಸ್ಲಾಮಿನ ನೈಜತೆಯನ್ನು ತಿಳಿಯಲು ಸಾಧ್ಯವಾಗುವುದು.
ಜಾಹಿಲಿಯ್ಯಾ ಮುಅಲ್ಲಖಾತ್, ಸಪ್ತ ಕಾವ್ಯ ಸಮಾಹಾರ, ಇಮ್ರಉಲ್ ಖೈಸ್, ತ್ವರಫಾ, ಲಬೀದ್ ಮೊದಲಾದವರು ರಚಿಸಿದ ಕಾವ್ಯಗಳಲ್ಲಿ ಕೇವಲ ಹೆಣ್ಣು, ಹೆಂಡ, ವ್ಯಭಿಚಾರದ ಕುರಿತಾದ ಕತ್ತಲೆಯ ಬರಹವಾಗಿತ್ತು ಆ ಗ್ರಂಥದಲ್ಲಿ ಕಾಣುತ್ತಿದ್ದುದು. ತ್ವಾಇಫಿನ ಬಳಿಯಿರುವ ಉಖಾಳ ಮಾರುಕಟ್ಟೆಯಲ್ಲಿ ಬಂದು ಅವರು ಅದನ್ನು ಹಾಡುತ್ತಿದ್ದರು. ಕಅಬಾಲಯದಲ್ಲಿ ಅದನ್ನು ತೂಗು ಹಾಕುತ್ತಿದ್ದರು. ಆಗಿನ ಅಂಧಕಾರವನ್ನು ಸೂಚಿಸುವ ಗೆರೆಯೊಂದು ಇಮ್ರಉಲ್ ಖೈಸಿನ ಕಾವ್ಯದಿಂದ ದೊರೆಯುತ್ತದೆ ಕಡಲಿನ ಅಲೆಗಳಂತಹ ಎಷ್ಟು ರಾತ್ರಿಯಾಗಿದೆ ಕಳೆದುಹೋದದ್ದು… ಕಡಲಿನ ಅಲೆಗಳಂತಾಗಿತ್ತು ಅಂದಿನ ಅಂದಕಾರ. ಈ ರೀತಿ ನುಡಿಯುತ್ತಿದ್ದವರು, ಹಾಡುತ್ತಿದ್ದವರು ಒಂದು ಸುಪ್ರಭಾತದಲ್ಲಿ ನನಗೆ ಅರಿವನ್ನು ಅಧಿಕಗೊಳಿಸು ಎಂದು ಪ್ರಾರ್ಥಿಸುವ ಮಟ್ಟಿಗೆ ತಲುಪಿದರು. ಈ ರೀತಿಯ ಅಂದಕಾರವನ್ನಾಗಿದೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲ ಮರು ಬೆಳಕಿಗೆ ಕೊಂಡೊಯ್ದದ್ದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಜಿಬ್ರೀಲ್ ಮರು ಜಬಲಿನ್ನೂರಿನ ಮೇಲಿರುವ ಹಿರಾ ಗುಹೆಯಲ್ಲಿ ಇಖ್‌ರಅ ಎಂದು ಓದಿ ಕೊಡುವ ಮೂಲಕ ಆ ಬೆಳಕು ಬರಲು ಆರಂಭವಾಯಿತು.
ಇಖ್‌ರಅ ಎಂಬ ಪದದ ಮೂಲಕ ದೊಡ್ಡ ಶಿಕ್ಷಣ ಕ್ರಾಂತಿಯನ್ನಾಗಿದೆ ಇಸ್ಲಾಮ್ ಇಲ್ಲಿ ಸ್ಥಾಪಿಸಿದ್ದು. ಯಾವ ವೇದ ಗ್ರಂಥ ತೆಗೆದು ನೋಡಿದರೂ ಈ ರೀತಿಯ ಶಿಕ್ಷಣ ಕ್ರಾಂತಿಯನ್ನು ಕಾಣಲು ಸಾಧ್ಯವಾಗದು. ಹದಿನಾಲ್ಕನೇ ಶತಮಾನದ ಮೊದಲೇ ಇಸ್ಲಾಮ್ ಸಾಕ್ಷರತಾ ಆಂದೋಲನವನ್ನು ಮಾಡಿದೆ.
ಖುರ್‌ಆನ್ ಹೇಳಿರುವುದು ನೀವು ಓದಿ ಅಂತ ಅಲ್ಲ. ಹೊರತು ನೀನು ಓದು ಎಂದು ಪ್ರತಿಯೊಬ್ಬನೂ ಕಲಿಯಬೇಕು ಎಂಬುವುದರೆಡೆಗೆ ಸೂಚಿಸಿಯಾಗಿದೆ ಹೇಳಿರುವುದು. ಇಪ್ಪತ್ತಮೂರು ವರ್ಷದ ಬೋಧನೆಯಿಂದ ಅವರು ಜನರನ್ನು ಸತ್ಪಥದತ್ತ ಸೆಳೆದರು. ನನ್ನ ಸ್ವಹಾಬಿಗಳು ನಕ್ಷತ್ರ ಸಮಾನರು ಅವರಲ್ಲಿ ಯಾರನ್ನು ಹಿಂಬಾಲಿಸಿದರೂ ನೀವು ನೇರಹಾದಿಯಲ್ಲಿರುವಿರಿ ಹೀಗೆ ಹೇಳುವಷ್ಟರ ಮಟ್ಟಿಗೆ ಅವರನ್ನು ಬದಲಿಸಿದರು. ಮರಣ ವೇಳೆಯಲ್ಲಿ ನೀರನ್ನು ಕುಡಿಸಲು ಅಣಿಯಾದಾಗ ನನಗಿಂತ ಅಗತ್ಯತೆ ಇರುವುದು ಅವ ನಿಗೆ ಎಂದು ಹೇಳುವಮಟ್ಟಿಗೆ ಸ್ವಹಾಬಿಗಳು ಮಾರ್ಪಾಡಾಗಲು ಕಾರಣ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ.
ಈ ಸೌಂದರ್ಯವನ್ನಾಗಿದೆ ಜಗತ್ತಿನ ಮುಂದೆ ನಾವು ಪ್ರಚಾರ ಮಾಡ ಬೇಕಾದುದು. ಇದಾಗಿದೆ ಇಸ್ಲಾಮ್. ಇಸ್ಲಾಮಿನ ಸುವರ್ಣ ಯುಗವನ್ನು ಅಧ್ಯಯನ ಮಾಡ ಬೇಕಾಗಿದೆ. ಪೂರ್ವ ಕಾಲದಲ್ಲಿ ಜಗತ್ತಿನಲ್ಲೆಡೆ ಇಸ್ಲಾಮಿನ ಪ್ರತಾಪವನ್ನು ಮುಸ್ಲಿಮರು ತೋರಿಸಿದ್ದರು. ಆದರೆ ಇಂದು ಅವೆಲ್ಲವೂ ಕಾಣದಂತಾಗಿದೆ. ರಾಷಿದಾ ಖಿಲಾಫತ್, ಉಮವಿಯ್ಯಾ ಖಿಲಾಫತ್, ಅಬ್ಬಾಸಿಯಾ ಖಿಲಾಫತ್ ಉಸ್ಮಾನಿಯ ಖಿಲಾಫತಿನ ಮೂಲಕ ಜಗತ್ತಿನಲ್ಲಿ ಮುಸ್ಲಿಮರು ತಮ್ಮ ಕೀರ್ತಿಯನ್ನು ತೋರಿಸಿದ್ದರು. ಈಗ ಯೂರೋಪಿಯನ್ಸ್ ಅದರ ಹಕ್ಕುದಾರರು ನಾವು ಎಂದು ಬಿಂಬಿಸುತ್ತಿದ್ದಾರೆ. ಜಗತ್ತಿಗೆ ವಿವಿಧ ವಿಜ್ಞಾನ ಶಾಖೆಗಳನ್ನು ಪರಿಚಯಿಸಿದ್ದು ಮುಸ್ಲಿಮರು. ಬಗ್ದಾದ್, ಸ್ಪೈನ್, ಕೋರ್ಡೋವಾ, ಕೈರೋ, ಈಜಿಪ್ಟ್ ಇವೆಲ್ಲವೂ ಇಸ್ಲಾಮಿನ ಶೋಭಾಯಮಾನ ಚರಿತ್ರೆಯನ್ನು ಎತ್ತಿ ಹೇಳುತ್ತಿವೆ. ಇಸ್ಲಾಮೀ ಸುವರ್ಣ ಇತಿಹಾಸವು ಮುಸ್ಲಿಮರ ಕೈಯಿಂದ ಜಾರಿ ಹೋದದ್ದರ ಹಿಂದಿನ ಕಾರಣವನ್ನು ತಿಳಿದು ಅದನ್ನು ಮರಳಿ ಪಡೆಯುವ ಕುರಿತಾದ ಚರ್ಚೆ ಅಧ್ಯಯನ ನಡೆಯಬೇಕಿದೆ.