ಸೂಪರ್ ಸ್ಟಾರ್ ಬಾವಲಿ!!

ಸೂಪರ್ ಸ್ಟಾರ್ ಬಾವಲಿ!!
ಕೆಲವು ತಿಂಗಳುಗಳ ಹಿಂದೆ ನಮ್ಮೆಲ್ಲರ ನಿದ್ದೆಗೆಡಿಸಿದ ಮತ್ತು ನಮ್ಮೆಲ್ಲರಲ್ಲಿ ಭಯಭೀತಿ ಉಂಟು ಮಾಡಿದ  ಒಂದು ಅಧ್ಬುತ ಜೀವಿಯಾಗಿದೆ ಬಾವಲಿ…!
ಬಾವಲಿಯನ್ನು ನಮ್ಮಲ್ಲಿ ಕಂಡವರು ಬಹಳ ಮಂದಿಯಿದ್ದರೂ ಅದರ ವಿಶೇಷತೆಯನ್ನು ತಿಳಿದವರು ಬಹಳ ವಿರಳ.
ಹೊರನೋಟಕ್ಕೆ ಪಕ್ಷಿಯಂತೆ ಕಂಡರೂ ಇದೊಂದು ಸಸ್ತನಿ ಜೀವಿಯಾಗಿದೆ. ಈ ಬಾವಲಿಗೆ ಹಗಲು ಹೊತ್ತು ಕಣ್ಣು ಕಾಣುವು ದಿಲ್ಲ. ಆದರೂ ಎಂತಹಾ ಅಮಾವಾಸ್ಯೆ ರಾತ್ರಿಯಲ್ಲೂ ಯಾವ ಪುಟ್ಟ ಜೀವಿಯನ್ನೂ ಬಹಳ ದೂರದಿಂದ  ಕಾಣುವ ಲೇಸರ್ ಪವರ್ ನೇತ್ರ ಇದಕ್ಕಿದೆ.
ಸೂರ್ಯಾಸ್ತಮಾನ ಆಗುವಾಗ ತನ್ನ ದೈನಂದಿನ ಕಸುಬಿಗೆ ಹೊರಡುತ್ತದೆ. ಬಾವಲಿ ತನ್ನ ಹೊಟ್ಟೆಪಾಡಿಗಾಗಿ ರಾತ್ರಿ ಬೆಳಗಾಗುವುದರ ಒಳಗೆ ನೂರಾರು ಕಿಲೊಮೀಟರ್ ಸಂಚಾರ ಮಾಡುತ್ತದೆ. ಹಣ್ಣು ಹಂಪಲುಗಳು, ಕೀಟಗಳು, ಸೊಳ್ಳೆ ಇತ್ಯಾದಿ ಆಗಿರುತ್ತದೆ ಇದರ ಮುಖ್ಯ ಆಹಾರ. ಒಂದು ದಿನದಲ್ಲಿ ಸುಮಾರು 700ರಿಂದ 800 ಸೊಳ್ಳೆ ಗಳನ್ನು ಕೊಂದು ತಿನ್ನುತ್ತದೆ.
ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಗರುಡನನ್ನು ಬಿಟ್ಟರೆ ಇದಕ್ಕೆ ನಂತರದ ಸ್ಥಾನ. ಗಂಟೆಗೆ ಸುಮಾರು 60-70 ಕಿಲೋ ಮೀಟರ್ ವೇಗದಲ್ಲಿ ಹಾರಾಡುವ ಈ ಜೀವಿಯು ತನ್ನ ಹಾರಾಟ ಸಮಯದಲ್ಲೇ ಸಿಕ್ಕ ಎಲ್ಲಾ ಸೊಳ್ಳೆಗಳನ್ನು ಹಿಡಿದು ತಿನ್ನುತ್ತವೆ.
ಮೂರರಿಂದ ಏಳರ ತನಕ ಮರಿ ಹಾಕುವ ಈ ಬಾವಲಿಗೆ ತನ್ನ ಮರಿಗಳೊಂದಿಗೆ ಎಲ್ಲಿಲ್ಲದ ಮಮತೆಯಂತೆ. ತನ್ನ ವೇಗದ ಹಾರಾಟ ಸಮಯದಲ್ಲೂ ಕೆಲವೊಮ್ಮೆ ತನ್ನ ಕಂದನನ್ನು ಎತ್ತಿಕೊಂಡು ಹಾರಾಡುತ್ತದೆ. ಮಾತ್ರವಲ್ಲ ತನ್ನ ಮರಿಯನ್ನು ಆಗಾಗ ಮುತ್ತಿಕ್ಕುತ್ತದೆ. ಪ್ರಾಣಿ ಪಕ್ಷಿಗಳಲ್ಲಿ ತನ್ನ ಮರಿಯೊಂದಿಗೆ ಇಷ್ಟೊಂದು ಮಮತೆಯೊಂದಿಗೆ ವರ್ತಿಸುವ ಜೀವಿ ಈ ಪ್ರಪಂಚದಲ್ಲಿ ಇದಲ್ಲದೆ ಬೇರೊಂದಿಲ್ಲ.
ಅಲ್ಲಾಹನ ಜೀವಿಗಳಲ್ಲಿ ನಗುವ ಮತ್ತು ತನ್ನ ಮರಿಗಳನ್ನು ಎತ್ತಿಕೊಂಡು (ಕಂಕುಳಲ್ಲಿ ಕುಳ್ಳಿರಿಸಿ) ಹೋಗುವ ಮೂರು ಜೀವಿಗಳಲ್ಲಿ ಇದಕ್ಕೆ ಎರಡನೇ ಸ್ಥಾನ. (ಪ್ರಥಮ ಮನುಷ್ಯ. ತೃತೀಯ ಮಂಗ)
ಮನುಷ್ಯರಲ್ಲಿ ಮಹಿಳೆಯರಿಗೆ ಋತುಸ್ರಾವ ಆಗುವ ಹಾಗೆ ತಿಂಗಳ ಋತುಸ್ರಾವ ಇದಕ್ಕೂ ಅಗುತ್ತದೆ.
ಪ್ರವಾದಿ ಈಸಾ ನಬಿ ಅಲೈಹಿಸ್ಸಲಾಮ್ ರವರಲ್ಲಿ ಅಂದಿನ ಅವರ ಜನಾಂಗದವರು (ಉಮ್ಮತ್) ಒಮ್ಮೆ ಹೇಳಿದರಂತೆ ” ಓ ನಬಿಯವರೇ… ನೀವು ಸತ್ತವರನ್ನು ಜೀವಂತ ಮಾಡುತ್ತೀರಿ ಸರಿ.. ಆದರೆ ನಮಗೆ ಈಗ ನೀವು ಒಂದು ಅದ್ಭುತ ಜೀವಿಯನ್ನು ನಿಮಗೆ ಅಲ್ಲಾಹನು ಕೊಟ್ಟ ಶಕ್ತಿಯಿಂದ  (ಪವಾಡದಿಂದ) ಉಂಟುಮಾಡಿ ತೋರಿಸಬೇಕು. ಹಾಗಾದರೆ ನಾವು ನಿಮ್ಮಲ್ಲಿ ನಂಬಿಕೆ ಇಡುತ್ತೇವೆ.
ಕೂಡಲೇ ಅಲ್ಲಾಹುವಿನ ಆಜ್ಞೆ ಪ್ರಕಾರ ಈಸಾ ನಬಿಅಲೈಹಿಸ್ಸಲಾಮ್ ರವರು ಒಂದು ಜೀವಿಯನ್ನು ಸೃಷ್ಟಿಸಿದರು. ಅದಾಗಿರುತ್ತದೆ ಈ ಮಹಾರಾಜ ಬಾವಲಿ.
ಈ ಒಂದು ವಿಶೇಷತೆ ಮತ್ತು ವ್ಯತ್ಯಾಸ ಇರೋದರಿಂದ ಈ ಜೀವಿಯ ಜೀವನ ಶೈಲಿ ಕೂಡ ಬೇರೆ ಜೀವಿಗಳಿಗಿಂತ ವಿಭಿನ್ನವಾಗಿದೆ. ಯಾವ ಮಾಂಸಾ ಹಾರಿ ಜೀವಿಯೂ ಇದನ್ನು ಕಂಡರೆ ನಿರಾಯಾಸ ಕೊಂದು ತಿನ್ನುತ್ತದೆ. ಸಸ್ಯಾಹಾರಿಯಾದರೆ ಕೊಂದು ಬಿಡುತ್ತದೆ. ಅದಕ್ಕಾಗಿರಬಹುದು ಇದರ ಸಂಚಾರವನ್ನು ರಾತ್ರಿ ಸಮಯದಲ್ಲಿ ಮಾತ್ರ ಅಲ್ಲಾಹನು ಸೀಮಿತಗೊಳಿಸಿದ್ದೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ…
ಒಟ್ಟಿನಲ್ಲಿ ಇಸ್ಲಾಮಿನ ದೃಷ್ಟಿಯಲ್ಲಿ ಇದನ್ನು ತಿನ್ನೋದು ಹರಾಂ (ನಿಷಿದ್ಧ) ಆಗಿರುತ್ತದೆ.
(ಇಮಾಮ್ ಕಮಾಲುದ್ದೀನ್ ದುಮೈರಿಯವರ ಹಯಾತುಲ್ ಹಯವಾನ್ ಎಂಬ ಗ್ರಂಥದಿಂದ)

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors